ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆಯರು
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಬಾವಿಯಿಂದ ನೀರು ಪಡೆಯಲು ಮಹಿಳೆಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪೇಥ್ ತಾಲ್ಲೂಕಿನಲ್ಲಿರುವ ಬೋರಿಚಿವಾಡಿ ಗ್ರಾಮವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ ಮಹಿಳೆಯರು ನೀರಿಗಾಗಿ ದಿನನಿತ್ಯದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.
ನಾಸಿಕ್, ಏಪ್ರಿಲ್ 21: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ, ಪೇಥ್ ತಾಲೂಕಿನ ಬೋರಿಚಿವರಿ ಗ್ರಾಮದಲ್ಲಿ ತೀವ್ರ ನೀರಿನ ಬಿಕ್ಕಟ್ಟು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಬೇರೆ ದಾರಿಯಿಲ್ಲದೆ ಆ ಊರಿನ ಮಹಿಳೆಯರು ಕೆಲವು ಬಿಂದಿಗೆ ನೀರು ತರಲು ಶಿಥಿಲಗೊಂಡಿರುವ ಬಾವಿಗಳಿಗೆ ಇಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯರು ಹಗ್ಗವನ್ನು ಹಿಡಿದು ಆಳವಾದ ಬಾವಿಯೊಳಗೆ ಇಳಿದು ಕೊಡದಲ್ಲಿ ನೀರು ಹೊತ್ತು ಮೇಲಕ್ಕೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಈ ಗ್ರಾಮದ ಮಹಿಳೆಯರ ದೈನಂದಿನ ಅನಿವಾರ್ಯತೆಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Apr 21, 2025 05:11 PM