ನೀರು ಕೊಡಿಸಿ ಎಂದ ಮಹಿಳೆಯರಿಂದ ವಂದೇ ಮಾತರಂ ಘೋಷಣೆ ಕೂಗಿಸಿದ ಬಿಜೆಪಿ ಶಾಸಕ
ಉತ್ತರಾಖಂಡ್ ಬಿಜೆಪಿ ಶಾಸಕರ ರ್ಯಾಲಿಯಲ್ಲಿ ಮಹಿಳೆಯರು ನೀರಿಗಾಗಿ ಬೇಡಿಕೆ ಇಟ್ಟರು. ಆಗ ಆ ಶಾಸಕ ಅವರಿಂದ "ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ" ಎಂದು ಘೋಷಣೆಗಳನ್ನು ಕೂಗಿಸಿದ್ದಾರೆ. ಇದು ದೇವಪ್ರಯಾಗ ಕ್ಷೇತ್ರದ ಬಿಜೆಪಿ ಶಾಸಕ ವಿನೋದ್ ಕಂಧಾರಿ ಅವರ ರ್ಯಾಲಿಯಾಗಿತ್ತು. ಶಾಸಕರು ತಮ್ಮ ಭಾಷಣ ಮುಗಿಸಿದ ನಂತರ ದುಃಖಿತ ಮಹಿಳೆಯರ ಗುಂಪಿನೊಂದಿಗೆ ಹಾಜರಿದ್ದರು. ವೀಡಿಯೊದಲ್ಲಿರುವ ಮಹಿಳೆಯರು ತಮ್ಮ ಸಮಸ್ಯೆಗಳನ್ನು ವಿವರಿಸುವುದನ್ನು ಕಾಣಬಹುದು.
ಉತ್ತರಾಖಂಡ, ಏಪ್ರಿಲ್ 12: ಉತ್ತರಾಖಂಡದಲ್ಲಿ ನಡೆದ ಶಾಸಕರೊಬ್ಬರ ಸಾರ್ವಜನಿಕ ಸಭೆಯ ವೇಳೆ ಮಹಿಳೆಯರ ಗುಂಪೊಂದು ಶಾಸಕರ ಭಾಷಣದ ಸಮಯದಲ್ಲಿ ತಮ್ಮ ಊರಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಬೇಡಿಕೆ ಇಟ್ಟಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಶಾಸಕ ವಿನೋದ್ ಕಂಧಾರಿ ಅವರಿಗೆ “ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ” ಎಂದು ಘೋಷಣೆಗಳನ್ನು ಕೂಗುವಂತೆ ಸೂಚಿಸಿದ್ದಾರೆ. ವಿನೋದ್ ಕಂದಾರಿ ದೇವಪ್ರಯಾಗ ಸ್ಥಾನದಿಂದ ಎರಡು ಬಾರಿ ಶಾಸಕರಾಗಿದ್ದಾರೆ. ಅವರು 2017ರಲ್ಲಿ ಮೊದಲ ಬಾರಿಗೆ ಬಿಜೆಪಿ ಟಿಕೆಟ್‌ನಲ್ಲಿ ಶಾಸಕರಾದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ