ಕಾಂಗ್ರೆಸ್ ಸೇರಿದಾಗ ಜಗದೀಶ್ ಶೆಟ್ಟರ್ ಬಿಜೆಪಿ ಬಗ್ಗೆ ಏನೇನು ಹೇಳಿದ್ದರು ಗೊತ್ತಾ? ಸಿದ್ದರಾಮಯ್ಯ
ಜಾತಿಗಣತಿ ವರದಿ ಯಾವಾಗ ಬಿಡುಗಡೆ ಮಾಡುತ್ತೀರಿ ಅಂತ ಕೇಳಿದಾಗ ಸಿದ್ದರಾಮಯ್ಯ ಅದರ ಇತಿಹಾಸದ ಬಗ್ಗೆ ಹೇಳಿದರು. ಜಾತಿಗಣತಿ ನಮ್ಮ ಪ್ರಣಾಳಿಕೆಯಲ್ಲಿದೆ, ಅದನ್ನು ಮಾಡೇ ಮಾಡ್ತೀವಿ, ನ್ಯಾಯಾಲಯಗಳು ಎಂಪಿರಕಲ್ ಡಾಟಾವನ್ನು ಕೇಳುತ್ತವೆ, ಕುಟುಂಬವೊಂದರ ಸ್ವಾತಂತ್ರ್ಯ ಪೂರ್ವ ಮತ್ತು ಈಗಿನ ಸ್ಥಿತಿಯಲ್ಲಿ ಅಗಿರುವ ಬದಲಾವಣೆ ಅರ್ಥಮಾಡಿಕೊಳ್ಳಲು ಜಾತಿಗಣತಿ ಬೇಕೇಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ, ಏಪ್ರಿಲ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ದಿನಗಳ ನಂತರ ಮಾಧ್ಯಮಗಳೊಂದಿಗೆ ಮಾತಾಡಿದರು. ಸ್ಥಳೀಯ ಸಂಸದ ಜಗದೀಶ್ ಶೆಟ್ಟರ್ (Jagadish Shettar) ಜಾತಿಗಣತಿ ಬಗ್ಗೆ ಮಾಡಿರುವ ಕಾಮೆಂಟ್ಗೆ ಅವರು ನಗುತ್ತಾ, ಶೆಟ್ಟರ್ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಎರಡು ಸ್ಥಾನಗಳಿಗೂ ಅವರು ಅಸಮರ್ಥರಾಗಿದ್ದರು, ಬಿಜೆಪಿ ಟಿಕೆಟ್ ಕೊಡದೆ ಹೋದಾಗ ಕಾಂಗ್ರೆಸ್ಗೆ ಬಂದು ಎಮ್ಮೆಲ್ಸಿಯಾಗಿ ಮಜಾ ಮಾಡಿದರು, ನಂತರ ವಾಪಸ್ಸು ಹೋಗಿ ಬಿಜೆಪಿ ಸೇರಿಕೊಂಡರು, ಅವರು ಕಾಂಗ್ರೆಸ್ಗೆ ಬಂದಾಗ ಬಿಜೆಪಿ ಬಗ್ಗೆ ಏನೇನು ಹೇಳಿದ್ದರು ಅಂತ ಹೇಳ್ಲಾ? ಬೇಡ ಅದನ್ನೆಲ್ಲ ಹೇಳಬಾರದು ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ರಾಜಣ್ಣ ಹಾಗೂ ಸುರೇಶ್ ಜೊತೆ ಆರ್ಸಿಬಿ ಮತ್ತು ಡಿಸಿ ನಡುವಿನ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos