ಕೊಲೆಯಾದ ನಿವೃತ್ತ ಐಪಿಎಸ್ ಓಂಪ್ರಕಾಶ್ ಫಾರ್ಮ್ ಹೌಸ್ ಹೇಗಿದೆ ನೋಡಿ…!
ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ( ಡಿಜಿ & ಐಜಿಪಿ) ಓಂ ಪ್ರಕಾಶ್ ಪತ್ನಿಯಿಂದಲೇ ಕೊಲೆಯಾಗಿದೆ. ಇನ್ನು ಓಂ ಪ್ರಕಾಶ್ ಕೊಲೆಗೆ ಆಸ್ತಿ ಕಲಹವೂ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯ ಮಧ್ಯದಲ್ಲಿ ಓಂ ಪ್ರಕಾಶ್ ಅವರು ಅದ್ಭುತವಾದ ಫಾರ್ಮ್ ಹೌಸ್ ಹೊಂದಿದ್ದಾರೆ. ಹಾಗಾದ್ರೆ, ಆ ಫಾರ್ಮ್ ಹೌಸ್ ಹೇಗಿದೆ? ಇದೇ ಫಾರ್ಮ್ ಹೌಸ್ ಓಂ ಪ್ರಕಾಶ್ ಬಲಿಯಾದರೆ?
ಉತ್ತರ ಕನ್ನಡ, (ಏಪ್ರಿಲ್ 21): ಸುತ್ತಲೂ ಕಾಡು.. ಮಧ್ಯೆ ಕಾಳಿ ನದಿ.. ನದಿಯ ಪಕ್ಕದಲ್ಲೇ ಅಡ್ವೆಂಚರ್ ಝೋನ್.. ನದಿಯಲ್ಲಿ ರಿವರ್ ರಾಫ್ಟಿಂಗ್.. ಸದ್ಯ ಕರ್ನಾಟಕದ ಮಾಜಿ ಡಿಜಿ & ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದ ಬಳಿಕ ಇದೇ, ಜಾಗ ದೊಡ್ಡ ಸದ್ದು ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸೂಪಾ ತಾಲೂಕಿನ ಜೋಯಿಡಾ ( ಸೂಪಾ) ತಾಲೂಕಿನ ದಟ್ಟ ಅರಣ್ಯದಲ್ಲಿ ಓಂ ಪ್ರಕಾಶ ಅವರ ಫಾರ್ಮ್ ಹೌಸ್ ಇದೆ. ಅತ್ಯದ್ಬುತ ನಿಸರ್ಗದಲ್ಲಿ 2.20 ಏಕರೆ ಜಮೀನಿನಲ್ಲಿನ ಫಾರ್ಮ್ ಹೌಸ್ ಹೊಂದಿದ್ದಾರೆ. ದಟ್ಟವಾದ ಗಿಡ ಮರಗಳ ಮಧ್ಯದಲ್ಲಿನ ಮನೆ ಅತ್ಯದ್ಭುತವಾಗಿದೆ. ಮೂರು ರೂಮ್ಗಳ ಸುಂದರವಾದ ಫಾರ್ಮ್ ಹೌಸ್ನಲ್ಲಿ ಸ್ವಿಮಿಂಗ್ ಫುಲ್, ವಾಚ್ ಟವರ್ ಕೂಡ ಇದೆ. ಹಾಗೇ ಬಾಳೆ, ಮಾವು, ಕಾಳಮೆಣಸು, ಶ್ರೀಗಂಧ, ವೀಳ್ಯದೆಲೆ ಹೀಗೆ ಹತ್ತಾರು ಬಗೆಯ ಗಿಡ ಮರಗಳನ್ನ ಫಾರ್ಮ್ ಹೌಸ್ನ್ಲಲಿ ಬೆಳಸಲಾಗಿದೆ.