IPL 2025: ರಿಂಕ್ ಹಿಡಿದ ಅದ್ಭುತ ಕ್ಯಾಚ್ಗೆ ಶತಕ ವಂಚಿತರಾದ ಗಿಲ್; ವಿಡಿಯೋ
Shubman Gill Misses Century: ಐಪಿಎಲ್ 2025ರ 39ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅದ್ಭುತ 90 ರನ್‌ಗಳ ಇನಿಂಗ್ಸ್ ಆಡಿದರು. ಆದಾಗ್ಯೂ ಕೇವಲ 10 ರನ್ಗಳಿಂದ ಶತಕ ವಂಚಿತರಾದರು. ಗಿಲ್ 50 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 90 ರನ್ ಗಳಿಸಿ ಔಟ್ ಆದರು. ಸುದರ್ಶನ್ ಜೊತೆ 114 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
ಐಪಿಎಲ್ 2025 ರ 39 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 90 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ರಿಂಕು ಸಿಂಗ್ ಹಿಡಿದ ಅತ್ಯದ್ಭುತ ರನ್ನಿಂಗ್ ಕ್ಯಾಚ್ನಿಂದ ಗಿಲ್ ಕೇವಲ 10 ರನ್ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಗಿಲ್ 50+ ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನದ 23 ನೇ ಅರ್ಧಶತಕ ಮತ್ತು ಪ್ರಸಕ್ತ ಸೀಸನ್ನ ಮೂರನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ಆರಂಭದಿಂದಲೂ ವೇಗವಾಗಿ ಬ್ಯಾಟಿಂಗ್ ಮಾಡಿದ ಗಿಲ್ 50 ಎಸೆತಗಳಲ್ಲಿ 90 ರನ್ ಗಳಿಸಿ ಔಟಾದರು. ಅವರ ಈ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಇದು ಮಾತ್ರವಲ್ಲದೆ ಗಿಲ್, ಸುದರ್ಶನ್ (52) ಅವರೊಂದಿಗೆ 114 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
Latest Videos