ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಏಪ್ರಿಲ್ 22, 2025 ರ ದಿನದ ರಾಹುಕಾಲ ಮತ್ತು ಶುಭ ಸಮಯಗಳ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ. ಮೇಷ, ವೃಷಭ ಮತ್ತು ದ್ವಾದಶ ರಾಶಿಯವರಿಗೆ ದಿನದ ಫಲಾಫಲಗಳನ್ನು ವಿವರಿಸಲಾಗಿದೆ. ವಿಶ್ವ ಭೂಮಿ ದಿನದ ಪ್ರಾಮುಖ್ಯತೆಯನ್ನು ಒತ್ತಿಹೇಳಲಾಗಿದೆ ಮತ್ತು ಕೆಲವು ಶುಭ ಮಂತ್ರಗಳ ಪರಿಹಾರ ನೀಡಲಾಗಿದೆ.
2025 ಏಪ್ರಿಲ್ 22 ರ ಮಂಗಳವಾರದ ಈ ದಿನ ರಾಹುಕಾಲವು ಮಧ್ಯಾಹ್ನ 3:24 ರಿಂದ 4:58 ರವರೆಗೆ ಇರುತ್ತದೆ. ಶುಭಕಾಲ ಬೆಳಗ್ಗೆ 10:44 ರಿಂದ 12:18 ರವರೆಗೆ ಇರುತ್ತದೆ. ಈ ದಿನ ಸುಬ್ರಹ್ಮಣ್ಯ ದೇವರ ಅಲಹರಿ ಇರುವ ದಿನವಾಗಿದೆ.ನವನಾಗಗಳ ಸ್ತೋತ್ರ, ಮಾರುತಿಯ ಸ್ತುತಿ ಮಾಡುವುದು ಶುಭಕರ. ರವಿ ಮೇಷ ರಾಶಿಯಲ್ಲೂ, ಚಂದ್ರ ಮಕರ ರಾಶಿಯಲ್ಲೂ ಸಂಚರಿಸುತ್ತಿದ್ದಾರೆ. ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.