ಬೆಂಗಳೂರಿನಲ್ಲಿ ಹತೋಟಿಗೆ ಬಾರದ ರೋಡ್ರೇಜ್: ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದನೆ
ಬೆಂಗಳೂರಿನಲ್ಲಿರೋಡ್ರೇಜ್ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಬದಲಿಗೆ ದಿನೇ ದಿನೇ ರೋಡ್ರೇಂಜ್ ಕೇಸ್ಗಳು ಹೆಚ್ಚುತ್ತಿವೆ. ಅದರಂತೆ 2 ದಿನಗಳ ಹಿಂದೆ ಜೆ.ಪಿ.ನಗರದ 8ನೇ ಹಂತದ ರಸ್ತೆಯಲ್ಲಿ ಆಟೋ ಚಾಲಕನೋರ್ವ ಕಾರನ್ನು ಅಡ್ಡಗಟ್ಟಿ ಅವಾಜ್ ಹಾಕಿದ್ದಾನೆ. ಅಲ್ಲದೇ ಮಧ್ಯದ ಬೆರಳು ತೋರಿಸಿ ನಿಂದಿಸಿದ್ದಾನೆ. ಹಾರ್ನ್ ಮಾಡಿ ಕಿರಿಕಿರಿ ಉಂಟು ಮಾಡಿದ ಆಟೋ ಚಾಲಕನಿಗೆ ಕಾರು ಚಾಲಕ ಪ್ರಶ್ನಿಸಿದ್ದಾನೆ. ಇಷ್ಟಕ್ಕೆ ಆಟೋ ಚಾಲಕ ಕಾರು ಅಡ್ಡಗಟ್ಟಿ ಕಿರಿಕ್ ಮಾಡಿದ್ದಾನೆ.
ಬೆಂಗಳೂರು, (ಏಪ್ರಿಲ್ 21): ಬೆಂಗಳೂರಿನಲ್ಲಿರೋಡ್ರೇಜ್ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಬದಲಿಗೆ ದಿನೇ ದಿನೇ ರೋಡ್ರೇಂಜ್ ಕೇಸ್ಗಳು ಹೆಚ್ಚುತ್ತಿವೆ. ಅದರಂತೆ 2 ದಿನಗಳ ಹಿಂದೆ ಜೆ.ಪಿ.ನಗರದ 8ನೇ ಹಂತದ ರಸ್ತೆಯಲ್ಲಿ ಆಟೋ ಚಾಲಕನೋರ್ವ ಕಾರನ್ನು ಅಡ್ಡಗಟ್ಟಿ ಅವಾಜ್ ಹಾಕಿದ್ದಾನೆ. ಅಲ್ಲದೇ ಮಧ್ಯದ ಬೆರಳು ತೋರಿಸಿ ನಿಂದಿಸಿದ್ದಾನೆ. ಹಾರ್ನ್ ಮಾಡಿ ಕಿರಿಕಿರಿ ಉಂಟು ಮಾಡಿದ ಆಟೋ ಚಾಲಕನಿಗೆ ಕಾರು ಚಾಲಕ ಪ್ರಶ್ನಿಸಿದ್ದಾನೆ. ಇಷ್ಟಕ್ಕೆ ಆಟೋ ಚಾಲಕ ಕಾರು ಅಡ್ಡಗಟ್ಟಿ ಕಿರಿಕ್ ಮಾಡಿದ್ದಾನೆ. ಬಳಿಕ ಕಾರು ಚಾಲಕ ಹೊಯ್ಸಳ ಸಿಬ್ಬಂದಿಗೆ ಕರೆ ಮಾಡುತ್ತಿದ್ದಂತೆಯೇ ಆಟೋ ಸಮೇತರ ಯುವಕರು ಎಸ್ಕೇಪ್ ಆಗಿದ್ದಾರೆ.
Published on: Apr 21, 2025 05:50 PM