Unacademy Lay Off: ಸಾಫ್ಟ್‌ಬ್ಯಾಂಕ್-ಬೆಂಬಲಿತ ಅನ್​ಅಕಾಡೆಮಿಯಿಂದ ಸುಮಾರು 600 ಉದ್ಯೋಗಿಗಳ ವಜಾ

ಎಡ್​ಟೆಕ್​ ಕಂಪೆನಿಯಾದ ಅನ್​ಅಕಾಡೆಮಿಯಿಂದ 600 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಲಾಗಿದೆ. ಆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

Unacademy Lay Off: ಸಾಫ್ಟ್‌ಬ್ಯಾಂಕ್-ಬೆಂಬಲಿತ ಅನ್​ಅಕಾಡೆಮಿಯಿಂದ ಸುಮಾರು 600 ಉದ್ಯೋಗಿಗಳ ವಜಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 07, 2022 | 8:46 PM

ಸಾಫ್ಟ್‌ಬ್ಯಾಂಕ್-ಬೆಂಬಲಿತ ಎಡ್‌ಟೆಕ್ ಸಂಸ್ಥೆ ಅನ್​ಅಕಾಡೆಮಿ ಸುಮಾರು 600 ಉದ್ಯೋಗಿಗಳನ್ನು (Employees) ವಜಾಗೊಳಿಸಿದ್ದು, ಇದು ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಪೈಕಿ ಸುಮಾರು ಶೇ 10ರಷ್ಟಾಗುತ್ತದೆ. ದೇಶದಲ್ಲಿ ಸಂಭಾವ್ಯ ನಿಧಿಯ ನಿಧಾನಗತಿ ಹಿನ್ನೆಲೆಯಲ್ಲಿ ಮುಂದೆ ವೆಚ್ಚವನ್ನು ಕಡಿತಗೊಳಿಸುವ ಸಂಭವನೀಯ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಜಾಗೊಳಿಸಿದವರಲ್ಲಿ ಕಂಪೆನಿಯ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು ಮತ್ತು ಶಿಕ್ಷಕರು ಸೇರಿದ್ದಾರೆ. 2021ರ ಉಚ್ಛ್ರಾಯದ ನಂತರ ದೇಶದಲ್ಲಿ ಆ ಉತ್ಸಾಹವು ನಿಧಾನಗತಿ ಆಗುತ್ತಿದೆಯೇ ಎಂಬ ಬಗ್ಗೆ ಸ್ಟಾರ್ಟ್​ ಅಪ್ ಎಕೋ ಸಿಸ್ಟಮ್​ ವ್ಯವಸ್ಥೆಯಲ್ಲಿನ ವಿವಿಧ ಭಾಗೀದಾರರ ಆಕ್ಷೇಪದ ಮಧ್ಯೆ ಈ ಕ್ರಮವು ಬಂದಿದೆ. ಕೆಲವು ವ್ಯವಹಾರಗಳ ಮುಕ್ತಾಯಕ್ಕೆ ಹೆಚ್ಚು ಸಮಯ ತೆಗೆದುಕೊಂಡರೆ, ಕೆಲವು ತಡವಾದ ಹಂತದ ವ್ಯವಹಾರಗಳು ಹಣಕಾಸಿನ ನಿಧಾನಗತಿಯಿಂದ ಒತ್ತಡಕ್ಕೆ ಒಳಗಾಗುತ್ತವೆ.

ನಿಧಾನಗತಿಯ ವೇಗ, ಉಕ್ರೇನ್‌ನ ಮೇಲಿನ ರಷ್ಯಾದ ಯುದ್ಧ ಮತ್ತು ಹೆಚ್ಚುತ್ತಿರುವ ತೈಲ ಬೆಲೆಗಳಿಂದಾಗಿ ಹೂಡಿಕೆದಾರರಲ್ಲಿ ಎಚ್ಚರಿಕೆಗೆ ಕಾರಣವಾಗಿದೆ. ಅನ್​ ಅಕಾಡೆಮಿಯ ವಕ್ತಾರರು ಮನಿ ಕಂಟ್ರೋಲ್‌ಗೆ ನೀಡಿದ ಹೇಳಿಕೆಯಲ್ಲಿ, ತಮ್ಮ ಗುಂಪು ಕಂಪೆನಿಗಳ ಬೆಳವಣಿಗೆಗೆ ಹೂಡಿಕೆ ಮಾಡುವಾಗ ತಮ್ಮ ಪ್ರಮುಖ ವ್ಯವಹಾರದಲ್ಲಿ CY2022ರ Q4 ಅಂತ್ಯದ ವೇಳೆಗೆ ಲಾಭದಾಯಕ ಮತ್ತು ಹೆಚ್ಚು ಪರಿಣಾಮಕಾರಿಯಾಗಲು ಗಮನಹರಿಸಿರುವುದಾಗಿ ಹೇಳಿದ್ದಾರೆ. “ನಮ್ಮ ವ್ಯವಹಾರದ ಗಾತ್ರ ಮತ್ತು ಪ್ರಮಾಣದ ಯಾವುದೇ ಸಂಸ್ಥೆಗೆ ಇದು ಸಾಮಾನ್ಯ. ಹಲವಾರು ಮೌಲ್ಯಮಾಪನಗಳ ಫಲಿತಾಂಶದ ಆಧಾರದ ಮೇಲೆ ಉದ್ಯೋಗಿ, ಗುತ್ತಿಗೆದಾರ ಮತ್ತು ಶಿಕ್ಷಕರ ಪಾತ್ರಗಳ ಸಣ್ಣ ಉಪವಿಭಾಗವನ್ನು ಅವರ ಜವಾಬ್ದಾರಿ ಮತ್ತು ಕಾರ್ಯಕ್ಷಮತೆಯ ಕಾರಣದಿಂದಾಗಿ ಮರು-ಮೌಲ್ಯಮಾಪನ ಮಾಡಲಾಗಿದೆ. ಬಹುಪಾಲು ಪಾತ್ರಗಳು ಪ್ರಕ್ರಿಯೆಯ ಫಲಿತಾಂಶವಾಗಿದೆ. ಮತ್ತು ದಕ್ಷತೆಯು ವಿಶಾಲವಾದ ವ್ಯವಹಾರದಲ್ಲಿ ಚಾಲನೆ ಮಾಡುವ ಗುರಿಯನ್ನು ಹೊಂದಿದೆ,” ಎಂದು ವಕ್ತಾರರು ಹೇಳಿದ್ದಾರೆ.

ಆಯಾ ಒಪ್ಪಂದಗಳಿಗೆ ಅನುಸಾರವಾಗಿ ಜನರೊಂದಿಗೆ ಚರ್ಚಿಸಲಾಗಿದೆ ಮತ್ತು ಬೇರ್ಪಡಲಾಗಿದೆ ಎಂದು ಕಂಪೆನಿಯು ತಿಳಿಸಿದೆ. “ಇದಲ್ಲದೆ, ಕಂಪೆನಿಯು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಮತ್ತು ಬೇರ್ಪಡುವಾಗ ಉದಾರವಾಗಿ ಪಡೆಯುವುದನ್ನು ಖಚಿತಪಡಿಸಿದೆ,” ಎಂದು ವಕ್ತಾರರು ತಿಳಿಸಿದ್ದಾರೆ. ಭಾರತದ ಆನ್‌ಲೈನ್ ಶಿಕ್ಷಣ ಕ್ಷೇತ್ರವು ಕೊವಿಡ್-19 ಸಾಂಕ್ರಾಮಿಕದ ಅತಿದೊಡ್ಡ ಫಲಾನುಭವಿಗಳಲ್ಲಿ ಒಂದಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಭಾರೀ ಬೆಳವಣಿಗೆಯನ್ನು ಸಾಧಿಸಿದ ನಂತರ ಈ ವಲಯವು ಬೃಹತ್ ನಿಧಿ ಸಂಗ್ರಹಣೆಗೆ ಸಾಕ್ಷಿಯಾಗಿದೆ. ಕೊವಿಡ್-ಸಂಬಂಧಿತ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಶಾಲೆಗಳು ಮತ್ತು ಕಾಲೇಜುಗಳನ್ನು ಬಹುಪಾಲು ಮುಚ್ಚಲಾಗಿದೆ. ಅನ್​ಅಕಾಡೆಮಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಸವರನ್ ವೆಲ್ತ್ ಫಂಡ್ ಟೆಮಾಸೆಕ್ ನೇತೃತ್ವದಲ್ಲಿ 440 ಮಿಲಿಯನ್ ಡಾಲರ್ ಅನ್ನು ಸಂಗ್ರಹಿಸಿದ್ದು, ಕಂಪೆನಿಯನ್ನು 3.4 ಬಿಲಿಯನ್‌ ಡಾಲರ್​ಗೆ ಮೌಲ್ಯೀಕರಿಸಿದೆ. ಇದರೊಂದಿಗೆ ಕೇವಲ 18 ತಿಂಗಳಲ್ಲಿ ಹತ್ತು ಪಟ್ಟು ಜಿಗಿತವನ್ನು ದಾಖಲಿಸಿದೆ.

ಕೌಶಲ ಮೌಲ್ಯಮಾಪನ ಮತ್ತು ನೇಮಕಾತಿ ಪರೀಕ್ಷಾ ವೇದಿಕೆಯಾದ ಅನ್​ಅಕಾಡೆಮಿಯ ರಿಲೆವೆಲ್ ಪ್ರಸ್ತುತ 1.8 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಪ್ಲಾಟ್‌ಫಾರ್ಮ್ ತಮ್ಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 2 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಉದ್ಯೋಗದ ಕೊಡುಗೆಗಳನ್ನು ನೀಡಿದೆ ಎಂದು ಕಂಪೆನಿ ತಿಳಿಸಿದೆ. ಪ್ರತಿಸ್ಪರ್ಧಿ ಬೈಜು ಇತ್ತೀಚೆಗೆ ಮಾರ್ಚ್ 2022ರಲ್ಲಿ ತನ್ನದೇ ಆದ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ನೇತೃತ್ವದಲ್ಲಿ 800 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ಈ ಸುತ್ತಿನ ಮೌಲ್ಯವು ಎಡ್​ಟೆಕ್ ಪ್ರಮುಖ ಕಂಪೆನಿಯನ್ನು 22 ಬಿಲಿಯನ್ ಡಾಲರ್ ಮೌಲ್ಯದ್ದಾಗಿ ಮಾಡಿದ್ದು, ಅದರ ಹಿಂದಿನ ಮೌಲ್ಯವು 18 ಬಿಲಿಯನ್ ಡಾಲರ್ ಆಗಿತ್ತು.

ಇದನ್ನೂ ಓದಿ: ನಿರುದ್ಯೋಗ, ಸಾಲ ಬಾಧೆಯಿಂದ 25,000ಕ್ಕೂ ಹೆಚ್ಚು ಯುವಕರ ಆತ್ಮಹತ್ಯೆ; ರಾಜ್ಯಸಭೆಗೆ ಸರ್ಕಾರ ಮಾಹಿತಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ