ಕೃಷಿ ಆದಾಯ 10 ಲಕ್ಷ ಮೀರಿದರೆ ಕಟ್ಟುನಿಟ್ಟಿನ ಪರಿಶೀಲನೆ: ತೆರಿಗೆ ನಿಯಮ ಬಿಗಿಗೊಳಿಸಲು ಮುಂದಾದ ಸರ್ಕಾರ

ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವು ಬಹುತೇಕ ರಾಜಕಾರಿಣಿಗಳಲ್ಲಿ ಆತಂಕ ಉಂಟು ಮಾಡಿದೆ. ಬಹುಸಂಖ್ಯೆಯ ರಾಜಕಾರಿಣಿಗಳ ತಮ್ಮ ಆದಾಯವನ್ನು ಕೃಷಿ ಆದಾಯ ಎಂದು ಘೋಷಿಸಿ, ತೆರಿಗೆ ವಂಚಿಸುತ್ತಿದ್ದಾರೆ.

ಕೃಷಿ ಆದಾಯ 10 ಲಕ್ಷ ಮೀರಿದರೆ ಕಟ್ಟುನಿಟ್ಟಿನ ಪರಿಶೀಲನೆ: ತೆರಿಗೆ ನಿಯಮ ಬಿಗಿಗೊಳಿಸಲು ಮುಂದಾದ ಸರ್ಕಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 08, 2022 | 7:12 AM

ದೆಹಲಿ: ಇತರ ಮೂಲಗಳಿಂದ ಗಳಿಸಿದ ಆದಾಯವನ್ನು ಕೃಷಿ ಆದಾಯ (Agriculture Income) ಎಂದು ಘೋಷಿಸಿಕೊಳ್ಳುವ ಮೂಲಕ ಆದಾಯ ತೆರಿಗೆ (Income Tax) ವಂಚಿಸುತ್ತಿದ್ದವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಅತಿಶ್ರೀಮಂತ ಕೃಷಿಕರು ತೆರಿಗೆ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಹಾಲಿ ಜಾರಿಯಲ್ಲಿರುವ ನಿಯಮಗಳು ಕೃಷಿ ಆದಾಯದ ಮೇಲೆ ಸಾಕಷ್ಟು ವಿನಾಯ್ತಿಗಳನ್ನು ಘೋಷಿಸುತ್ತವೆ. ಈ ವಿನಾಯ್ತಿಗಳನ್ನು ಹಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಅತಿ ಶ್ರೀಮಂತ ರೈತರ ಆದಾಯ ಮೂಲಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲು ಸರ್ಕಾರ ತೀರ್ಮಾನಿಸಿದೆ. ₹ 10ಕ್ಕೂ ಹೆಚ್ಚುಉ ಕೃಷಿ ಆದಾಯ ಹೊಂದಿರುವವರಿಂದ ಆದಾಯ ತೆರಿಗೆ ಇಲಾಖೆಯು ಹಲು ದಾಖಲೆಗಳನ್ನು ಕೇಳಲಿದೆ ಎಂದು ಕೇಂದ್ರ ಸರ್ಕಾರವು ಹಣಕಾಸು ವಿಚಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿಗೆ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ಅಗೀಕರಿಸಲು ತೆರಿಗೆ ವಿನಾಯ್ತಿ ಕ್ಲೇಮ್​ಗಳ ಪೈಕಿ ಶೇ 22.5ರಷ್ಟು ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿಲ್ಲ. ಇದನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ಕೆಲವರು ತೆರಿಗೆ ವಂಚಿಸುತ್ತಿದ್ದಾರೆ ಎಂದು ಸಂಸದೀಯ ಸಮಿತಿಯು ತನ್ನ 49ನೇ ವರದಿಯಲ್ಲಿ ಹೇಳಿದೆ. ಭಾರತದ ಮಹಾಲೇಖಪಾಲರ (Auditor and Comptroller General – ACG) ವರದಿಯನ್ನು ಆಧರಿಸಿದ ಸಂಸದೀಯ ಸಮಿತಿಯು ಈ ಶಿಫಾರಸುಗಳನ್ನು ಮಾಡಿದೆ. ಚಂಡೀಗಡದಲ್ಲಿ ಭೂಮಿ ಮಾರಾಟದಿಂದ ಸಿಕ್ಕಿರುವ ₹ 1.09 ಕೋಟಿ ಮೊತ್ತವನ್ನು ಕೃಷಿ ಆದಾಯ ಎಂದು ತೋರಿಸಿ ತೆರಿಗೆ ವಂಚಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಐಟಿ ರಿಟರ್ನ್ಸ್​ ಅನುಮೋದಿಸುವ ಸಂದರ್ಭದಲ್ಲಿ ಸಂಸದೀಯ ಸಮಿತಿಯು ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ. ಐಟಿ ರಿಟರ್ನ್ಸ್ ಸಲ್ಲಿಸುವವರು ಸಹ ತಮ್ಮ ಆದಾಯದ ದಾಖಲೆ ಸಲ್ಲಿಸುವಾಗ ಲೋಪಗಳನ್ನು ಮಾಡಿದ್ದಾರೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ. ಆದಾಯ ತೆರಿಗೆ ಕಾಯ್ದೆ (1961)ರ 10 (1) ಪರಿಚ್ಛೇದದ ಅನ್ವಯ ಕೃಷಿ ಆದಾಯವು ತೆರಿಗೆ ವಿನಾಯ್ತಿ ಅರ್ಹವಾಗಿದೆ. ಕೃಷಿ ಭೂಮಿಯನ್ನು ಬಾಡಿಗೆಗೆ ಕೊಡುವುದು, ಕೃಷಿ ಭೂಮಿಯಿಂದ ಆದಾಯ ಗಳಿಸುವುದು ಅಥವಾ ಹಸ್ತಾಂತರಿಸುವುದರಿಂದ ಬರುವ ಆದಾಯವನ್ನು ಸಹ ಕೃಷಿ ಆದಾಯ ಎಂದೇ ಈ ಕಾಯ್ದೆಯ ಅನ್ವಯ ಪರಿಗಣಿಸಲಾಗುತ್ತದೆ.

ಕೃಷಿ ಆದಾಯವೂ ಸೇರಿದಂತೆ ಐಟಿ ರಿಟರ್ನ್ಸ್​ ಸಲ್ಲಿಕೆ ಮತ್ತು ಪ್ರಕ್ರಿಯೆಯ ವಿವಿಧ ಹಂತಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬೇಕಿರುವಷ್ಟು ಮಾನವ ಸಂಪನ್ಮೂಲ ನಮ್ಮ ಕಮಿಷನರೇಟ್​ಗಳಲ್ಲಿ ಲಭ್ಯವಿಲ್ಲ ಎಂದು ತೆರಿಗೆ ಇಲಾಖೆ ಹೇಳಿತ್ತು. ಉದ್ಯೋಗಿಗಳ ಕೊರತೆಯಿಂದ ಜನರಿಗೆ ಅಗುವ ತೊಂದರೆ ನಿವಾರಿಸಲೆಂದು ಆದಾಯ ತೆರಿಗೆ ಇಲಾಖೆಯು ಕೃಷಿ ಆದಾಯವು ₹ 10 ಲಕ್ಷ ಮೀರುವ ಪ್ರಕರಣಗಳಲ್ಲಿ ಸ್ವಯಂ ಅಸೆಸ್​ಮೆಂಟ್ ಸಾಧ್ಯವಾಗುವ ವ್ಯವಸ್ಥೆಯೊಂದನ್ನು ರೂಪಿಸಿದೆ ಎಂದು ಸಂಸದೀಯ ಸಮಿತಿಗೆ ಹಣಕಾಸು ಇಲಾಖೆ ತಿಳಿಸಿತ್ತು.

ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವು ಬಹುತೇಕ ರಾಜಕಾರಿಣಿಗಳಲ್ಲಿ ಆತಂಕ ಉಂಟು ಮಾಡಿದೆ. ಬಹುಸಂಖ್ಯೆಯ ರಾಜಕಾರಿಣಿಗಳ ತಮ್ಮ ಅಕ್ರಮ ಆದಾಯವನ್ನು ಕೃಷಿ ಆದಾಯ ಎಂದು ಘೋಷಿಸಿ, ತೆರಿಗೆ ವಂಚಿಸುತ್ತಿದ್ದಾರೆ. ಭಾರತದ ಬಹುತೇಕ ರೈತರು ಬಡವರೇ ಆಗಿದ್ದು, ತೆರಿಗೆ ವಿನಾಯ್ತಿಗೆ ಅರ್ಹರಿದ್ದಾರೆ. ಆದರೆ ಶ್ರೀಮಂತ ರೈತರಿಗೆ ಏಕೆ ಈ ವಿನಾಯ್ತಿ ಸಿಗಬೇಕು ಎನ್ನುವುದು ಸಂಸದೀಯ ಸಮಿತಿ ಕೇಳುತ್ತಿರುವ ಪ್ರಶ್ನೆ. ಕೇವಲ ಶೇ 0.04ರಷ್ಟು ಶ್ರೀಮಂತ ರೈತ ಕುಟುಂಬಗಳು ಮತ್ತು ಕಂಪನಿಗಳ ಮೇಲೆ (ಶೇ 30ರ ನಿಯಮದ) ತೆರಿಗೆ ವಿಧಿಸಿದರೂ ದೇಶಕ್ಕೆ ₹ 50,000 ಕೋಟಿ ಆದಾಯ ಸಿಗುತ್ತದೆ ಎಂದು ಸಂಸದೀಯ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮತ್ತು ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ; ಲಕ್ಷ ಲಕ್ಷ ನಗದು, ಚಿನ್ನಾಭರಣ ಪತ್ತೆ

ಇದನ್ನೂ ಓದಿ: ಇವರೆಲ್ಲಾ ಕೃಷಿಯಿಂದಲೇ ಆದಾಯ ಗಳಿಸಿದ್ದಾರಂತೆ, ಆದರೆ ಅದನ್ನು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆಯಲ್ಲಿ ಜನ ಇಲ್ಲ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್