AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment strategy: ಹೂಡಿಕೆ ಮಾಡುವುದಷ್ಟೇ ಮುಖ್ಯ ಹೂಡಿಕೆ ಹಿಂಪಡೆಯುವುದು: ತಿಳಿದಿರಬೇಕಾದ 3 ಅಂಶಗಳು

Mrin Agarwal names 3 reasons to exit an investment: ಹೂಡಿಕೆ ಮಾಡುವುದು ಎಷ್ಟು ಮುಖ್ಯವೋ, ಸರಿಯಾದ ಸಮಯಕ್ಕೆ ಹೂಡಿಕೆ ಹಿಂಪಡೆಯುವುದೂ ಅಷ್ಟೇ ಮುಖ್ಯ ಎನ್ನುತ್ತಾರೆ ಫಿನ್​​​ಸೇಫ್ ಇಂಡಿಯಾದ ಮೃಣ್ ಅಗರ್ವಾಲ್. ಒಂದು ನಿರ್ದಿಷ್ಟ ಹೂಡಿಕೆಗೆ ನಿರ್ದಿಷ್ಟ ಗುರಿ ಇರಬೇಕು. ಆ ಹೂಡಿಕೆಯನ್ನು ಯಾವಾಗ ನಿಲ್ಲಿಸಬೇಕು ಎಂಬುದೂ ಗೊತ್ತಿರಬೇಕು. ನೀವು ಮಾಡಿದ ಹೂಡಿಕೆಯು ಒಟ್ಟಾರೆ ಮಾರುಕಟ್ಟೆಯ ಓಟಕ್ಕಿಂತ ಬಹಳ ಹಿಂದುಳಿದಿದ್ದರೆ ಅಲ್ಲಿಂದ ನಿರ್ಗಮಿಸಬಹುದು.

Investment strategy: ಹೂಡಿಕೆ ಮಾಡುವುದಷ್ಟೇ ಮುಖ್ಯ ಹೂಡಿಕೆ ಹಿಂಪಡೆಯುವುದು: ತಿಳಿದಿರಬೇಕಾದ 3 ಅಂಶಗಳು
Investment 5
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2025 | 3:35 PM

Share

ನವದೆಹಲಿ, ಮೇ 22: ಹೂಡಿಕೆ ವಿಚಾರಕ್ಕೆ ಬಂದರೆ ಎಲ್ಲರೂ ಹುಮ್ಮಸ್ಸಿನಿಂದ ಹಣ ತೊಡಗಿಸುತ್ತಾರೆ. ಆದರೆ, ಹೂಡಿಕೆಯನ್ನು ಯಾವಾಗ ಮತ್ತು ಹೇಗೆ ಹಿಂಪಡೆಯಬೇಕು (Exiting an investment) ಎಂದು ಯಾರೂ ಯೋಚಿಸುವುದಿಲ್ಲ. ಯಾವುದಕ್ಕೆ ಹೂಡಿಕೆ ಮಾಡುತ್ತಿದ್ದೀರಿ, ಆ ಉದ್ದೇಶವೇ ನೆರವೇರದಂತಾಗುತ್ತದೆ ಎಂದು ಫಿನ್​​ಸೇಫ್ ಇಂಡಿಯಾದ (FinSafe India) ನಿರ್ದೇಶಕಿ ಮೃಣ್ ಅಗರ್ವಾಲ್ (Mrin Agarwal) ಹೇಳುತ್ತಾರೆ. ಮಾಧ್ಯಮವೊಂದರಲ್ಲಿ ಮಾತನಾಡುತ್ತಿದ್ದ ಈ ಹೂಡಿಕೆ ತಜ್ಞೆ, ಹೂಡಿಕೆ ಹಿಂಪಡೆಯುವ ನಿರ್ಧಾರವು ಹೂಡಿಕೆ ನಿರ್ಧಾರದಷ್ಟೇ ಮುಖ್ಯ ಎಂಬುದನ್ನು ವಿವರಿಸಿದ್ದಾರೆ.

‘ಹೆಚ್ಚಿನ ಜನರಿಗೆ ಹೂಡಿಕೆಗೆ ಎಕ್ಸಿಟ್ ಸ್ಟ್ರಾಟಿಜಿಯನ್ನೇ ಹೊಂದಿರುವುದಿಲ್ಲ. ಹೂಡಿಕೆಯನ್ನು ಹೇಗೆ ಯೋಜಿತವಾಗಿ ಮಾಡುತ್ತೀರೋ, ಅದರಿಂದ ನಿರ್ಗಮನವೂ ಯೋಜಿತವಾಗಿರಬೇಕು’ ಎಂಬುದು ಫಿನ್​​ಸೇವ್ ಇಂಡಿಯಾದ ನಿರ್ದೆಶಕಿಯ ಅನಿಸಿಕೆ.

ಹೂಡಿಕೆ ಹಿಂಪಡೆಯಲು ಈ ಮೂರು ಕಾರಣಗಳು ಬೇಕು…

  1. ನಿಮ್ಮ ಹಣಕಾಸು ಗುರಿ ಸಮೀಪಿಸುತ್ತಿರುವಾಗ
  2. ಹೂಡಿಕೆ ಮಾಡಲಾದ ಫಂಡ್ ನಿರೀಕ್ಷಿತ ರಿಟರ್ನ್ ನೀಡುತ್ತಿಲ್ಲದೇ ಹೋದಾಗ
  3. ನಿಮ್ಮ ಪೋರ್ಟ್​​ಫೋಲಿಯೋದಲ್ಲಿ ಮರುಹಂಚಿಕೆಯ ಅವಶ್ಯಕತೆ ಇದ್ದಾಗ

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಈಗ ಕಾಲ ಸನ್ನಿಹಿತ: ಬಜಾಜ್ ಫಿನ್‌ಸರ್ವ್ ಎಎಂಸಿಯ ನಿಮೇಶ್ ಚಂದನ್ ಸಲಹೆ

ಇದನ್ನೂ ಓದಿ
Image
ದೀರ್ಘಾವಧಿ ಹೂಡಿಕೆಗೆ ಇದು ಸರಿಯಾದ ಕಾಲ: ನಿಮೇಶ್ ಚಂದನ್
Image
ಷೇರುಗಳ ಮೇಲೆ ಹೂಡಿಕೆ ಮಾಡುವವರೆ, ಈ ಪಂಚ ಪಾಠ ತಿಳಿದಿರಿ
Image
ಎಪಿವೈ ಪೆನ್ಷನ್ ಸ್ಕೀಮ್; ಅರ್ಹತೆ, ವಯಸ್ಸು ಇತ್ಯಾದಿ ಮಾಹಿತಿ
Image
ಷೇರುಪೇಟೆಯಲ್ಲಿ ಗೆಲ್ಲೋದು ಹೇಗೆ? ಶ್ರೀಮಂತರಾಗುವ 7 ಟ್ರಿಕ್ಸ್

ಈ ಮೇಲಿನ ಒಂದು ಕಾರಣ ಕಂಡು ಬಂದಾಗ ನಿರ್ದಿಷ್ಟ ಹೂಡಿಕೆಯಿಂದ ನಿರ್ಗಮಿಸುವ ಸಮಯ ಬಂತು ಎಂದು ಅರ್ಥ ಮಾಡಿಕೊಳ್ಳಬಹುದು ಎಂಬುದು ಮೃಣ್ ಅಗರ್ವಾಲ್ ಅವರ ಸಲಹೆ.

ಮ್ಯೂಚುವಲ್ ಫಂಡ್ ಪರ್ಫಾರ್ಮೆನ್ಸ್ ಅಳೆಯೋದು ಹೇಗೆ?

ಒಂದು ಮ್ಯೂಚುವಲ್ ಫಂಡ್ ಎಷ್ಟು ಉತ್ತಮವಾಗಿ ರಿಟರ್ನ್ ನೀಡುತ್ತದೆ ಎಂಬುದನ್ನು ತಿಳಿಯಬೇಕೆಂದರೆ ಅದರ ಕೆಟಗರಿಯ ರಿಟರ್ನ್​​ನೊಂದಿಗೆ ತುಲನೆ ಮಾಡಬೇಕಾಗುತ್ತದೆ. ಯಾವುದೇ ಫಂಡ್ ಆದರೂ ಒಂದು ನಿರ್ದಿಷ್ಟ ಕೆಟಗರಿ ಅಥವಾ ಬೆಂಚ್​​ಮಾರ್ಕ್ ಇಂಡೆಕ್ಸ್​​ಗೆ ಸೇರಿದ್ದಾಗಿರುತ್ತದೆ. ಉದಾಹರಣೆಗೆ, ನಿಫ್ಟಿ50, ಸೆನ್ಸೆಕ್ಸ್, ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ, ನಿಫ್ಟಿ ಡಿಫೆನ್ಸ್ ಇತ್ಯಾದಿ.

ವರ್ಷಕ್ಕೆ ಒಂದು ಬಾರಿ ನೀವು ನಿಮ್ಮ ಫಂಡ್​​ನ ರಿವ್ಯೂ ಮಾಡಬೇಕು. ಕೆಟಗರಿಯ ಸಾಧನೆ ಜೊತೆ ನಿಮ್ಮ ಫಂಡ್ ಸಾಧನೆಯನ್ನು ತುಲನೆ ಮಾಡಬೇಕು. ತೀರಾ ಹೆಚ್ಚಿನ ವ್ಯತ್ಯಾಸ ಕಂಡು ಬಂದರೆ ಆ ಫಂಡ್​​ನಿಂದ ನಿರ್ಗಮಿಸುವ ನಿರ್ಧಾರ ಮಾಡಬಹುದು ಎನ್ನುತ್ತಾರೆ ಮೃಣ್ ಅಗರ್ವಾಲ್. ಅಂದರೆ, ಒಟ್ಟಾರೆ ಮಾರುಕಟ್ಟೆ ಚೆನ್ನಾಗಿ ಓಡುತ್ತಿದ್ದು, ನಿಮ್ಮ ಫಂಡ್ ಮಾತ್ರ ಕುಸಿದಾಗ ಅದು ವಾರ್ನಿಂಗ್ ಬೆಲ್. ಹಾಗೆಯೇ, ನಿಮ್ಮ ಫಂಡ್ ಕೆಟಗರಿ ಚೆನ್ನಾಗಿದ್ದು, ನಿಮ್ಮ ಫಂಡ್ ಹಿಂದುಳಿದಿದ್ದರೆ ಅದೂ ಕೂಡ ವಾರ್ನಿಂಗ್ ಬೆಲ್.

ಇದನ್ನೂ ಓದಿ: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ…! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು

ಹಣಕಾಸು ಗುರಿ ಸಮೀಪಿಸಿದಾಗ ನಿಮ್ಮ ನಿರ್ಗಮನ ಹೀಗಿರಬೇಕು…

ನಿಮ್ಮ ಹಣಕಾಸು ಗುರಿಗೆ ಒಂದು ವರ್ಷ ಇರುವಂತೆಯೇ ಫಂಡ್​​ನಿಂದ ನಿರ್ಗಮಿಸುವ ವಿಚಾರ ತಲೆಯಲ್ಲಿರಬೇಕು. ಉದಾಹರಣೆಗೆ, ನೀವು 2026ರಲ್ಲಿ ಮನೆ ಕಟ್ಟುವ ಉದ್ದೇಶದಿಂದ 10 ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಈಗಿನಿಂದಲೇ ಎಕ್ಸಿಟ್ ಆಲೋಚನೆ ಮಾಡುತ್ತಿರಬೇಕು. ಮಾರುಕಟ್ಟೆ ಅಲುಗಾಟ ಆಗಬಹುದು ಎಂದನಿಸಿದಾಗ ನೀವು ಹೂಡಿಕೆಯನ್ನು ಡೆಟ್ ಫಂಡ್​​ನಂತಹ ಸುರಕ್ಷಿತ ಸಾಧನಗಳತ್ತ ವರ್ಗಾಯಿಸಬೇಕು. ಇದು ಫಿನ್​​ಸೇಫ್ ಇಂಡಿಯಾ ಸಂಸ್ಥೆಯ ನಿರ್ದೇಶಕಿ ಕೊಡುವ ಸಲಹೆಯಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ