ಟ್ಯಾಕ್ಸ್ ಸಮಯ; ಭಾರತದಲ್ಲಿ 7 ರೀತಿಯ ತೆರಿಗೆದಾರರು, 7 ಐಟಿಆರ್ ಫಾರ್ಮ್ಗಳು; ಯಾವುದು ಯಾರಿಗೆ? ಇಲ್ಲಿದೆ ಡೀಟೇಲ್ಸ್
ITR-1 to 7, know which form to choose: ಐಟಿ ರಿಟರ್ನ್ ಸಲ್ಲಿಸಲು ಜುಲೈ 31ರವರೆಗೂ ಕಾಲಾವಕಾಶ ಇದೆ. ಕೋಟ್ಯಂತರ ಜನರು ಐಟಿಆರ್ ಸಲ್ಲಿಸುತ್ತಾರೆ. ಏಳು ರೀತಿಯ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫಾರ್ಮ್ಗಳು ಇರುತ್ತವೆ. ಅದರಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ಆದಾಯ ಮೂಲ ಯಾವುದು ಎನ್ನುವುದರ ಮೇಲೆ ಫಾರ್ಮ್ ಅನ್ವಯ ಆಗುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ...

ನವದೆಹಲಿ, ಮೇ 22: ಹೊಸ ಹಣಕಾಸು ವರ್ಷ ಏಪ್ರಿಲ್ 1ರಿಂದ ಚಾಲ್ತಿಗೆ ಬರುತ್ತದೆ. ಅಂದಿನಿಂದಲೇ ಐಟಿಆರ್ ಸಲ್ಲಿಕೆ (IT return filing) ಪ್ರಕ್ರಿಯೆ ಕೂಡ ಆರಂಭವಾಗುತ್ತದೆ. ಹಿಂದಿನ ಹಣಕಾಸು ವರ್ಷದಲ್ಲಿನ ನಮ್ಮ ಆದಾಯವನ್ನು ಇಲಾಖೆಗೆ ತೋರಿಸುವ ಪ್ರಕ್ರಿಯೆಯೇ ಐಟಿ ರಿಟರ್ನ್ ಸಲ್ಲಿಕೆ. ಜುಲೈ 31ರವರೆಗೂ ದಂಡರಹಿತವಾಗಿ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಗಡುವು ನೀಡಲಾಗಿದೆ. ಐಟಿಆರ್ ಸಲ್ಲಿಸಲು 7 ಫಾರ್ಮ್ಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ಸ್ವಂತವಾಗಿ ಐಟಿಆರ್ ಸಲ್ಲಿಸುತ್ತಿರುವವರಿಗೆ ಸಾಮಾನ್ಯವಾಗಿ ಯಾವ ಫಾರ್ಮ್ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಇದ್ದೇ ಇರುತ್ತದೆ.
ನಮ್ಮ ಆದಾಯ ಮೂಲಗಳ ಆಧಾರದ ಮೇಲೆ ಫಾರ್ಮ್ ಅನ್ನು ಆಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಯಾವ್ಯಾವ ಫಾರ್ಮ್ ಯಾರಿಗೆ ಸೂಕ್ತ ಎನ್ನುವ ವಿವರವನ್ನು ಈ ಲೇಖನದಲ್ಲಿ ನಿರೀಕ್ಷಿಸಿ. ಹಾಗೆಯೇ, ತೆರಿಗೆ ಪಾವತಿದಾರರನ್ನು ಏಳು ರೀತಿಯಾಗಿ ವರ್ಗೀಕರಿಸಬಹುದು. ಅವರಿಗೆ ಯಾವ ಐಟಿಆರ್ ಬೇಕು ಎನ್ನುವ ಮಾಹಿತಿ ಇಲ್ಲಿದೆ…
1. ವ್ಯಕ್ತಿಗಳು ಸಲ್ಲಿಸಬೇಕಾದ ಐಟಿಆರ್ ಫಾರ್ಮ್ಗಳು..
ವೈಯಕ್ತಿಕ ತೆರಿಗೆ ಪಾವತಿದಾರರು. ಅಂದರೆ, ಸಂಬಳಪಡೆಯುತ್ತಿರುವವರು, ಫ್ರೀಲ್ಯಾನ್ಸ್ ಕೆಲಸ ಮಾಡುತ್ತಿರುವವರು, ವೃತ್ತಿಪರ ಕೆಲಸ ಮಾಡುತ್ತಿರುವ ವ್ಯಕ್ತಿಗಳು ವೈಯಕ್ತಿಕ ತೆರಿಗೆ ಪಾವತಿದಾರರ ಗುಂಪಿಗೆ ಸೇರುತ್ತಾರೆ.
ಐಟಿಆರ್ ಫಾರ್ಮ್ಗಳು
ಐಟಿಆರ್-1: ವಾರ್ಷಿಕ 50 ಲಕ್ಷ ರೂವರೆಗಿನ ಸಂಬಳ ಇರುವ ವ್ಯಕ್ತಿಗಳು
ಐಟಿಆರ್-2: ಕ್ಯಾಪಿಟಲ್ ಗೇನ್, ಬಹು ಆಸ್ತಿಗಳನ್ನು ಹೊಂದಿರವ ವ್ಯಕ್ತಿಗಳಿಗೆ.
ಐಟಿಆರ್-3: ಬ್ಯುಸಿನೆಸ್ ಮತ್ತು ವೃತ್ತಿಪರ ಕೆಲಸಗಳನ್ನು ಮಾಡುವ ವ್ಯಕ್ತಿಗಳಿಗೆ.
ಐಟಿಆರ್-4: 44ಎಡಿ, 44ಎಡಿಎ, 44ಎಇ ಸೆಕ್ಷನ್ಸ್ ಅಡಿಯಲ್ಲಿ ಆದಾಯ ಹೊಂದಿರುವವರಿಗೆ.
ಇದನ್ನೂ ಓದಿ: ಐಟಿಆರ್ನಲ್ಲಿ ತಪ್ಪು ಮಾಹಿತಿ ಕೊಟ್ರೆ ಸಿಕ್ಕಿಬೀಳ್ತೀರಿ; ಐಟಿ ಇಲಾಖೆ ಬಳಿ ಇವೆ ಹೊಸ ಎಐ ಟೂಲ್ಸ್
2. ಹಿಂದೂ ಅವಿಭಕ್ತ ಕುಟುಂಬ
ಒಂದೇ ಕುಟುಂಬ ಹಿನ್ನೆಲೆಯ ಹಿಂದೂ ಧರ್ಮದ ವ್ಯಕ್ತಿಗಳು ಸೇರಿ ಹಿಂದೂ ಅವಿಭಕ್ತ ಕುಟುಂಬವಾಗಿ ಕಾರ್ಯನಿರ್ವಹಿಸಬಹುದು. ಇದನ್ನು ಪ್ರತ್ಯೇಕ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ. ತೆರಿಗೆ ವಿಷಯದಲ್ಲಿ ಈ ಕುಟುಂಬಕ್ಕೂ ವ್ಯಕ್ತಿಗಳ ರೀತಿಯಲ್ಲಿ ತೆರಿಗೆ ಅನ್ವಯ ಆಗುತ್ತದೆ. 1ರಿಂದ 4ರವರೆಗಿನ ಐಟಿಆರ್ ಫಾರ್ಮ್ಗಳಲ್ಲಿ ಒಂದನ್ನು ಇವರು ಆಯ್ದುಕೊಳ್ಳಬಹುದು.
3. ಕಂಪನಿಯಾದರೆ ಯಾವ ಐಟಿಆರ್ ಫಾರ್ಮ್ ತುಂಬುವುದು?
ಭಾರತೀಯ ಕಂಪನಿಗಳ ಕಾಯ್ದೆ ಅಡಿ ನೊಂದಾಯಿತವಾದ ಸಂಸ್ಥೆಗಳಿಗೆ ಕಾರ್ಪೊರೇಟ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಈ ಸಂಸ್ಥೆಗಳು ಐಟಿಆರ್-6 ಫಾರ್ಮ್ ಆಯ್ದುಕೊಳ್ಳಬೇಕು.
4. ಪಾಲುದಾರಿಕೆ ಸಂಸ್ಥೆಗಳು…
ಪಾರ್ಟ್ನರ್ಶಿಪ್ ಕಂಪನಿಗಳಾದರೆ ಶೇ. 30ರಷ್ಟು ಟ್ಯಾಕ್ಸ್ ವಿಧಿಸಲಾಗುತ್ತದೆ. ಜೊತೆಗೆ ಸೆಸ್, ಸರ್ಚಾರ್ಜ್ ಇರುತ್ತದೆ. ಇಂಥ ಸಂಸ್ಥೆಗಳು ಐಟಿಆರ್-5 ಫಾರ್ಮ್ ತುಂಬಬೇಕು.
5. ವ್ಯಕ್ತಿಗಳ ಗುಂಪು (AOP- Associates of Persons)
ವ್ಯಕ್ತಿಗಳು ಮತ್ತು ಸಂಸ್ಥೆಗಳು ಒಂದು ಸಾಮಾನ್ಯ ಉದ್ದೇಶಕ್ಕೆ ಒಟ್ಟಿಗೆ ಗುಂಪು ರಚಿಸಬಹುದು. ಇಂಥ ಗ್ರೂಪ್ ಆದರೆ ಐಟಿಆರ್-5 ಅನ್ನು ಫೈಲ್ ಮಾಡಬೇಕು.
ಇದನ್ನೂ ಓದಿ: ಐಪಿಎಲ್ಗೆ ಟ್ಯಾಕ್ಸ್ ಹಾಕಿದ್ರೆ 10 ಹೊಸ ಐಐಟಿ: ಹೀಗೊಂದು ಸಲಹೆ ನೀಡಿದ ಬೆಂಗಳೂರಿನ ಪ್ರೊಫೆಸರ್
6. ಸ್ಥಳೀಯ ಪ್ರಾಧಿಕಾರವಾದರೆ ಯಾವ ಐಟಿಆರ್ ಫಾರ್ಮ್?
ಪಂಚಾಯಿತಿ, ನಗರಪಾಲಿಕೆ ಇತ್ಯಾದಿ ಸ್ಥಳೀಯ ಸಂಸ್ಥೆಗಳು ಐಟಿಆರ್-5 ಫಾರ್ಮ್ ಭರ್ತಿ ಮಾಡಬೇಕು.
7. ಆರ್ಟಿಫಿಶಿಯಲ್ ಜುರಿಡಿಕಲ್ ಪರ್ಸನ್ (ಜೆಕೆಪಿ)
ಟ್ರಸ್ಟ್, ಸೊಸೈಟಿ, ಕಾನೂನು ಸಂಸ್ಥೆಗಳು ಎಜೆಪಿ ವರ್ಗಕ್ಕೆ ಸೇರುತ್ತವೆ. ಇವಕ್ಕೆ ಸಾಮಾನ್ಯವಾಗಿ ಐಟಿಆರ್-5 ಫಾರ್ಮ್ ಆಗುತ್ತದೆ. ಆದರೆ, ಸೆಕ್ಷನ್ 11, 12 ಅಡಿ ವಿನಾಯಿತಿ ಅವಕಾಶ ಇರುವ ಚಾರಿಟಲ್ ಟ್ರಸ್ಟ್ ಮತ್ತಿತರ ಸಂಸ್ಥೆಗಳಾದರೆ ಐಟಿಆರ್-7 ಭರ್ತಿ ಮಾಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ