ಬೆಂಗಳೂರು ಮತ್ತು ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ; ಲಕ್ಷ ಲಕ್ಷ ನಗದು, ಚಿನ್ನಾಭರಣ ಪತ್ತೆ

ಬೆಂಗಳೂರು ಮತ್ತು ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ; ಲಕ್ಷ ಲಕ್ಷ ನಗದು, ಚಿನ್ನಾಭರಣ ಪತ್ತೆ
ಎಸಿಬಿ ದಾಳಿ

ಬೆಂಗಳೂರಿನ ಸಿಟಿಓ ಸೈಯದ್ ಮೊಹಮದ್ ಮನೆ ಮೇಲೆ ದಾಳಿಯಲ್ಲಿ ಮನೆಯ ಶೋಧನೆಯಲ್ಲಿ 3,35,300 ನಗದು ಹಣ, 384 ಗ್ರಾಂ ಚಿನ್ನಾಭರಣಗಳು, 1 ಸ್ವಿಫ್ಟ್ ಕಾರು, 1 ದ್ವಿಚಕ್ರ ವಾಹನ ಪತ್ತೆ ಆಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 07, 2022 | 8:59 PM

ಬೆಂಗಳೂರು: ಬೆಂಗಳೂರು, ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ (ACB Raid) ಮಾಡಿದೆ. ಓರ್ವ ಸಿಟಿಐ ಹಾಗೂ ಕಾರು ಚಾಲಕನ ಮನೆ ಮೇಲೆ ದಾಳಿ ಮಾಡಲಾಗಿದೆ. ಸಿಟಿಓ ಸೈಯದ್ ಮೊಹಮದ್ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದ್ದು, ಮೈಸೂರಿನ ಸಿಟಿ ಐ ಸಿ.ಎಂ.ಯಶವಂತ್ ಮನೆ ಮೇಲೆ ಕೂಡ ದಾಳಿ ಮಾಡಲಾಗಿದೆ. ಕಾರು ಚಾಲಕ ಕೃಷ್ಣಮೂರ್ತಿಯ ಮಲೇಶ್ವರಂ ನಿವಾಸದ ಮೇಲೂ ಎಸಿಬಿ ದಾಳಿ ಮಾಡಿದ್ದು, ಲಾರಿ ಚಾಲಕರನ್ನು ತಡೆದು ಬೆದರಿಸಿ ಲಂಚ ಪಡೆದ ಆರೋಪ ಮಾಡಲಾಗಿದೆ. ಪೋನ್ ಪೇ ಮೂಲಕ ಹಣ ಪಡೆದಿದ್ದ ಆರೋಪಿತ ಅಧಿಕಾರಿಗಳು. ಈ‌ ಹಿನ್ನಲೆ ಎಸಿಬಿಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಇಂದು ಮುಂಜಾನೆಯೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಸುಮಾರು ಎರಡು ಗಂಟೆಗಳ ಕಾಲ ಮನೆಯಲ್ಲಿ ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರಿನ ಸಿಟಿಓ ಸೈಯದ್ ಮೊಹಮದ್ ಮನೆ ಮೇಲೆ ದಾಳಿಯಲ್ಲಿ ಮನೆಯ ಶೋಧನೆಯಲ್ಲಿ 3,35,300 ನಗದು ಹಣ, 384 ಗ್ರಾಂ ಚಿನ್ನಾಭರಣಗಳು, 1 ಸ್ವಿಫ್ಟ್ ಕಾರು, 1 ದ್ವಿಚಕ್ರ ವಾಹನ ಪತ್ತೆ ಆಗಿದೆ. ಕಾರು ಚಾಲಕ ಪಿ. ಕೃಷ್ಣಮೂರ್ತಿ ಮನೆ ಮೇಲೆ ದಾಳಿ ವೇಳೆ ಮನೆಯ ಶೋಧನೆಯಲ್ಲಿ 2,100 ನಗದು ಹಣ ಪತ್ತೆ ಆಗಿದ್ದು, ಮೈಸೂರಿನ ಸಿಟಿಐ ಸಿ. ಎಂ. ಯಶವಂತ್ ಮನೆಯಲ್ಲಿ 50 ಗ್ರಾಂ ಚಿನ್ನಾಭರಣಗಳು, 1 ಕೆಜಿ ಬೆಳ್ಳಿ ಸಾಮಾನುಗಳು, ವಿವಿಧ ಸ್ವತ್ತುಗಳ ದಾಖಲಾತಿಗಳು ಪತ್ತೆಯಾಗಿವೆ. ಅಧಿಕಾರಿ ಸಿಬ್ಬಂದಿಗಳು ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ಭೌತಿಕ ತಪಾಸಣೆಯ ಸಮಯದಲ್ಲಿ ಲಂಚ ತೆಗೆದುಕೊಳ್ಳಲಾಗಿದೆ. ಗ್ರಾಹಕರಿಂದ ಲಂಚದ ರೂಪದಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗಿದೆ. ಈ ಹಿನ್ನಲೆ ಅಧಿಕಾರಿ ಸಿಬ್ಬಂದಿಗಳ ಮೊಬೈಲ್‌ಗಳನ್ನು ಎಸಿಬಿ ವಶಕ್ಕೆ ಪಡೆದುಕೊಂಡಿದೆ. ಎಸಿಬಿ ಅಧಿಕಾರಿಗಳಿಂದ ಪ್ರಕರಣದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ:

Viral Video: ಸೂಟ್ ಧರಿಸಿ ಚಾಟ್ ಮತ್ತು ಗೋಲ್ಗಪ್ಪ ಮಾರಾಟ ಮಾಡೋದನ್ನ ಎಲ್ಲಾದರೂ ನೋಡಿದ್ದೀರಾ..!

Birbhum killings ಬಿರ್ಭೂಮ್ ಹತ್ಯೆ ಪ್ರಕರಣ: ನಾಲ್ವರನ್ನು ಮುಂಬೈಯಿಂದ ಬಂಧಿಸಿದ ಸಿಬಿಐ

Follow us on

Related Stories

Most Read Stories

Click on your DTH Provider to Add TV9 Kannada