Viral Video: ಸೂಟ್ ಧರಿಸಿ ಚಾಟ್ ಮತ್ತು ಗೋಲ್ಗಪ್ಪ ಮಾರಾಟ ಮಾಡೋದನ್ನ ಎಲ್ಲಾದರೂ ನೋಡಿದ್ದೀರಾ..!

ನಾನು ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಹೊಂದಿದ್ದೇನೆ ಮತ್ತು ಜನರು ಅದನ್ನು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು 22 ವರ್ಷ ವಯಸ್ಸಿ ಯುವಕರು ಸರಳವಾಗಿ ಹೇಳಿದ್ದಾರೆ.

Viral Video: ಸೂಟ್ ಧರಿಸಿ ಚಾಟ್ ಮತ್ತು ಗೋಲ್ಗಪ್ಪ ಮಾರಾಟ ಮಾಡೋದನ್ನ ಎಲ್ಲಾದರೂ ನೋಡಿದ್ದೀರಾ..!
ಸೂಟ್​ ಧರಿಸಿ ಚಾಟ್ ಮತ್ತು ಗೋಲ್ಗಪ್ಪಾ ಮಾರಾಟ ಮಾಡುತ್ತಿರುವ ಪಂಜಾಬ್ ಯುವಕ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 07, 2022 | 8:34 PM

ನಾವು ಸಾಮಾನ್ಯವಾಗಿ ಬೀದಿಗಳಲ್ಲಿ ಚಾಟ್ ಮತ್ತು ಗೋಲ್ಗಪ್ಪ (Gol Gappe) ಮಾರಾಟ ಮಾಡುವವರನ್ನು ನೋಡಿರುತ್ತೇವೆ. ಕೆಲವರು ತಮ್ಮ ರುಚಿಗೆ ಮತ್ತೆ ಕೆಲವು ಇತರ ಕಾರಣಗಳಿಂದ ಜನಪ್ರಿಯರಾಗಿರುತ್ತಾರೆ. ಆದರೆ ಚಾಟ್ ಮತ್ತು ಗೋಲ್ಗಪ್ಪಾ ಮಾರಾಟ ಮಾಡುವ ಪಂಜಾಬ್‌ನ 22 ವರ್ಷದ ಹುಡುಗರು ವಿಶೇಷ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಹುಡುಗ ಮೊಹಾಲಿಯಲ್ಲಿ ತನ್ನ ಸ್ಟಾಲ್​ನ್ನು ಹೊಂದಿದ್ದು, ಸೂಟ್ ಧರಿಸಿ ಆಹಾರವನ್ನು ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪಂಜಾಬ್‌ನ ಪಟಿಯಾಲ ಮೂಲದ ಮಂಜಿಂದರ್ ಸಿಂಗ್ ತನ್ನ ಸಹೋದರನೊಂದಿಗೆ ಚಾಟ್ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು. ಇಬ್ಬರೂ ತಮ್ಮ ಉಳಿತಾಯವನ್ನು ಸಂಗ್ರಹಿಸಿ 11ನೇ ಹಂತದಲ್ಲಿ ಗುರುದ್ವಾರ ಸಿಂಗ್ ಸಭಾದ ಬಳಿ ಮೊಹಾಲಿಯಲ್ಲಿ ‘ಐ ಲವ್ ಪಂಜಾಬ್’ ಹೆಸರಿನ ಸ್ಟಾಲ್​ನ್ನು ತೆರೆದರು. ಚಾಟ್ ಮತ್ತು ಗೋಲ್ಗಪ್ಪಾ ಮಾರಾಟ ಮಾಡುವ ಅವರ ವೀಡಿಯೊ ವೈರಲ್ ಆಗಿದ್ದು, ಇಲ್ಲಿಯವರೆಗೂ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಇತ್ತೀಚೆಗೆ, ಫುಡ್ ಬ್ಲಾಗರ್ ಅವರ ಅಂಗಡಿಗೆ ಭೇಟಿ ನೀಡಿ ವಿಡಿಯೋ ಮಾಡಿದ್ದಾರೆ.

ಫುಡ್ ಬ್ಲಾಗರ್ ಹ್ಯಾರಿ ಉಪ್ಪಲ್ ಇಬ್ಬರು ಸಹೋದರರ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಿಂಗ್ ಸಹೋದರ ಜೋಡಿಯು ತಮ್ಮ ಸ್ಟಾಲ್‌ನಲ್ಲಿ ವಿವಿಧ ಚಾಟ್ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಗೋಲ್ಗಪ್ಪ ಚಾಟ್, ಭಲ್ಲಾ ಪಾಪ್ಡಿ, ಪಾಪ್ಡಿ ಚಾಟ್ ಮತ್ತು ಆಲೂ ಟಿಕ್ಕಿ ಚಾಟ್. ಇತ್ತೀಚೆಗೆ ಅಂಗಡಿಗೆ ಭೇಟಿ ನೀಡಿದ ಯೂಟ್ಯೂಬರ್ ಹ್ಯಾರಿ ಉಪ್ಪಲ್ ಅವರು ತಮ್ಮ ಪ್ರಯಾಣವನ್ನು ವಿಡಯೋದಲ್ಲಿ ದಾಖಲಿಸಿದ್ದಾರೆ. ಮತ್ತು ಅವರು ಸೂಟ್ ಧರಿಸಿರುವ ಕಾರಣವನ್ನು ಸಹ ಹೇಳಿಕೊಂಡಿದ್ದಾರೆ. ವೀಡಿಯೊದಲ್ಲಿ, ಸಿಂಗ್ ಅವರು ತಮ್ಮ ಆಹಾರ ಕಾರ್ಟ್‌ನಲ್ಲಿ ಕೆಲಸ ಮಾಡುವಾಗ ಏಕೆ ಸೂಟ್ ಧರಿಸುತ್ತಾರೆ ಎಂದು ವಿವರಿಸಿದ್ದಾರೆ. ನಾನು ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಹೊಂದಿದ್ದೇನೆ ಮತ್ತು ಜನರು ಅದನ್ನು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು 22 ವರ್ಷ ವಯಸ್ಸಿ ಯುವಕರು ಸರಳವಾಗಿ ಹೇಳಿದ್ದಾರೆ.

ಇದನ್ನೂ ಓದಿ:

ಆನೆ ಮತ್ತು ಸಿಂಹಿಣಿ ಮಧ್ಯೆ ತೀವ್ರ ಕಾಳಗ; ಗೆದ್ದೋರ್ಯಾರು..! ಸೋತವರ್ಯಾರು..! ಇಲ್ಲಿದೆ ವೈರಲ್ ವಿಡಿಯೋ

Viral Video : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹಂಸಗಳ ಪರೇಡ್

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ