Viral Video: ಟ್ರಾಫಿಕ್ನಿಂದ ವಿದ್ಯುತ್ ಉತ್ಪಾದನೆ; ಅಚ್ಚರಿಯಾಗುವ ವಿಡಿಯೋ ವೈರಲ್
ಟ್ರಾಫಿಕ್ನಿಂದ ವಿದ್ಯುತ್ ಉತ್ಪಾದನೆ ಮಾಡುವ ಈ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಚರ್ಚೆಗೂ ಕಾರಣವಾಗಿದೆ.
ಅಬ್ಬಾ ಎಂಥಾ ಟ್ರಾಫಿಕ್! ಮನೆಯಿಂದ ಹೊರಗೆ ಹೋಗೋದೇ ಬೇಡ ಅನಿಸುತ್ತೆ ಅಂತ ಹಿಡಿಶಾಪ ಹಾಕುತ್ತಿದ್ದೀರಾ? ಟ್ರಾಫಿಕ್ನಲ್ಲಿ ಕಾರು, ಬೈಕ್ ರಸ್ತೆಗೆ ಇಳಿಸಲು ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಟ್ರಾಫಿಕ್ನಿಂದಲೂ (Traffic) ಉಪಯೋಗವಿದೆ ಎಂಬುದು ನಿಮಗೆ ಗೊತ್ತಾ? ಇಸ್ತಾನ್‌ಬುಲ್‌ನಲ್ಲಿ ರಸ್ತೆಗಳ ಟ್ರಾಫಿಕ್ ಮಧ್ಯದಲ್ಲಿ ಸ್ಥಾಪಿಸಲಾದ ಸಾಧನಗಳನ್ನು ತೋರಿಸುವ ವಿಡಿಯೋ ಭಾರೀ ವೈರಲ್ ಆಗಿದೆ.
ಟ್ರಾಫಿಕ್ನಿಂದ ವಿದ್ಯುತ್ ಉತ್ಪಾದನೆ ಮಾಡುವ ಈ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಚರ್ಚೆಗೂ ಕಾರಣವಾಗಿದೆ. ಈ ವಿಡಿಯೋ ಕ್ಲಿಪ್ ಹಳೆಯದಾಗಿದ್ದರೂ ವಾಹನ ದಟ್ಟಣೆಯಿಂದ ಉತ್ಪತ್ತಿಯಾಗುವ ಗಾಳಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು 2021ರಲ್ಲಿ ಇಸ್ತಾನ್‌ಬುಲ್‌ನ ಬೀದಿಗಳಲ್ಲಿ ಗಾಳಿ ಟರ್ಬೈನ್‌ಗಳನ್ನು ಸ್ಥಾಪಿಸಲಾಯಿತು.
ಸರಳವಾಗಿ ಹೇಳುವುದಾದರೆ, ಬೀದಿ ದೀಪಗಳು ಮತ್ತು ಇತರ ವಸ್ತುಗಳನ್ನು ಶಕ್ತಿಯುತಗೊಳಿಸುವ ವಿದ್ಯುತ್ ಉತ್ಪಾದಿಸಲು ಟರ್ಬೈನ್ಗಳು ಆ ರಸ್ತೆಯಲ್ಲಿ ಹಾದುಹೋಗುವ ವಾಹನಗಳ ಗಾಳಿಯನ್ನು ಬಳಸುತ್ತವೆ. ಹೆಚ್ಚು ವಾಹನಗಳು ಓಡಾಡುವ ರಸ್ತೆಯ ಡಿವೈಡರ್ ಬಳಿ ಈ ಸಾಧನವನ್ನು ಅಳವಡಿಸಲಾಗುತ್ತದೆ. ಈ ಸಾಧನ ವಾಹನಗಳ ಸಂಚಾರದಿಂದ ಹೊರಹೊಮ್ಮುವ ಗಾಳಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುತ್ತದೆ.
View this post on Instagram
ಈ ಟರ್ಬೈನ್‌ಗಳನ್ನು ENLIL ಎಂದು ಕರೆಯಲಾಗುತ್ತದೆ. ಅವುಗಳನ್ನು ಇಸ್ತಾಂಬುಲ್ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಟೆಕ್ ಸಂಸ್ಥೆ ಡೆವೆಸಿಟೆಕ್ ಅಭಿವೃದ್ಧಿಪಡಿಸಿದೆ. ತಾಪಮಾನ ಮತ್ತು ಆರ್ದ್ರತೆಯಂತಹ ದಾಖಲೆಯ ವಾತಾವರಣದ ಅಸ್ಥಿರಗಳನ್ನು ಇರಿಸಿಕೊಳ್ಳಲು ENLIL ಅಂತರ್ನಿರ್ಮಿತ ಸಂವೇದಕಗಳನ್ನು ಹೊಂದಿದೆ. ಇದು ವಿದ್ಯುತ್ ಉತ್ಪಾದಿಸುವುದು ಮಾತ್ರವಲ್ಲದೆ ಭೂಕಂಪದ ಚಟುವಟಿಕೆ ಮತ್ತು ಇಂಗಾಲದ ಪ್ರಮಾಣವನ್ನು ಸಹ ಪತ್ತೆ ಮಾಡುತ್ತದೆ.
ಸಾಧನಗಳು ಸಾಂಪ್ರದಾಯಿಕ ಟರ್ಬೈನ್‌ಗಳಷ್ಟು ದೊಡ್ಡದಲ್ಲ. ಆದರೆ ಅವುಗಳ ಬ್ಲೇಡ್‌ಗಳು ಗಂಟೆಗೆ ಒಂದು ಕಿಲೋವ್ಯಾಟ್ ಶಕ್ತಿಯನ್ನು ಉತ್ಪಾದಿಸುವಷ್ಟು ಶಕ್ತಿಯುತವಾಗಿವೆ. ಈ ಸಾಧನದ ಮೇಲೆ ಹೆಚ್ಚುವರಿ ಸೌರ ಫಲಕವನ್ನು ಅಳವಡಿಸಲಾಗಿರುತ್ತದೆ. ಒಂದು ENLIL ಒಂದು ದಿನಕ್ಕೆ ಎರಡು ಮನೆಗಳಿಗೆ ಶಕ್ತಿಯನ್ನು ನೀಡಬಲ್ಲ ವಿದ್ಯುತ್ ಅನ್ನು ಉತ್ಪಾದಿಸುತ್ತದೆ.
ಇದನ್ನೂ ಓದಿ: Viral Video: ದೇವಸ್ಥಾನದ ಒಡವೆ ಕದಿಯಲು ತಾನೇ ಕೊರೆದ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ; ಆಮೇಲೇನಾಯ್ತು?
Viral Video: ಬಾಯಾರಿದ ಕೋತಿಗೆ ನೀರು ಕುಡಿಸಿದ ಟ್ರಾಫಿಕ್ ಪೊಲೀಸ್; ಹೃದಯಸ್ಪರ್ಶಿ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ
Published On - 4:48 pm, Thu, 7 April 22