ತಮಿಳುನಾಡು ಲೈಂಗಿಕ​ ಹಗರಣ; ವಿದ್ಯಾರ್ಥಿಗಳೊಂದಿಗಿನ ಶಾಲಾ ಶಿಕ್ಷಕಿಯ ಸೆಕ್ಸ್​ ವಿಡಿಯೋ ವೈರಲ್!

ತಮಿಳುನಾಡು ಲೈಂಗಿಕ​ ಹಗರಣ; ವಿದ್ಯಾರ್ಥಿಗಳೊಂದಿಗಿನ ಶಾಲಾ ಶಿಕ್ಷಕಿಯ ಸೆಕ್ಸ್​ ವಿಡಿಯೋ ವೈರಲ್!
ಸಾಂಕೇತಿಕ ಚಿತ್ರ

Tamil Nadu Crime: ಸೆಕ್ಸ್​ ವಿಡಿಯೋವನ್ನು ಚಿತ್ರೀಕರಿಸಿದ್ದ ಮಧುರೈನ ಸರ್ಕಾರಿ ಶಾಲೆಯೊಂದರ 42 ವರ್ಷದ ಶಿಕ್ಷಕಿ ಮತ್ತು ಆಕೆಯ 39 ವರ್ಷದ ಪ್ರೇಮಿಯನ್ನು ಭಾನುವಾರ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

TV9kannada Web Team

| Edited By: Sushma Chakre

Apr 05, 2022 | 6:17 PM

ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಆಘಾತಕಾರಿ ಲೈಂಗಿಕ ಹಗರಣವೊಂದು ಬೆಳಕಿಗೆ ಬಂದಿದ್ದು, ಶಿಕ್ಷಕಿ ತನ್ನ ವಿದ್ಯಾರ್ಥಿಗಳೊಂದಿಗೆ ಅಶ್ಲೀಲ ಕ್ರಿಯೆಯಲ್ಲಿ ಭಾಗಿಯಾಗಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಶಾಲಾ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ (ಬಾಲಕರು) ಗುಂಪಿನ ಸೆಕ್ಸ್ ವಿಡಿಯೋ ಕುರಿತು ತಮಿಳುನಾಡು ಸೈಬರ್ ಸೆಲ್ (Cyber Cell) ತನಿಖೆ ಆರಂಭಿಸಿದೆ. ಶಿಕ್ಷಕಿಯಾಗಿರುವ ಮಹಿಳೆಯ ಪರಮಾಪ್ತರಾಗಿದ್ದ ಉದ್ಯಮಿಯೊಬ್ಬರು ಚಿತ್ರೀಕರಿಸಿದ ಈ ಅಶ್ಲೀಲ ವಿಡಿಯೋವನ್ನು ಅವರ ಕೆಲವು ಸ್ನೇಹಿತರು ಹಂಚಿಕೊಂಡಿದ್ದಾರೆ. ಹಣಕ್ಕಾಗಿ ಅಂತಾರಾಷ್ಟ್ರೀಯ ಅಶ್ಲೀಲ ವೆಬ್​ಸೈಟ್​ಗಳಿಗೆ ಸೆಕ್ಸ್​ ವಿಡಿಯೋ ಅಪ್ಲೋಡ್ ಮಾಡಲಾಗಿದೆಯೇ ಅಥವಾ ಕೆಲವೇ ಜನರ ನಡುವೆ ಈ ವಿಡಿಯೋ ಪ್ರಸಾರವಾಗಿದೆಯೇ ಎಂಬ ಬಗ್ಗೆ ಸೈಬರ್ ಸೆಲ್ ತನಿಖೆ ನಡೆಸುತ್ತಿದೆ.

ಮಧುರೈನ ಸರ್ಕಾರಿ ಶಾಲೆಯೊಂದರ 42 ವರ್ಷದ ಶಿಕ್ಷಕಿ ಮತ್ತು ಆಕೆಯ 39 ವರ್ಷದ ಪ್ರೇಮಿಯನ್ನು ಭಾನುವಾರ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಅಶ್ಲೀಲ ವಿಡಿಯೋವನ್ನು ಹಂಚಿಕೊಂಡ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಜಿಪಿ ಕಚೇರಿಯಿಂದ ಕಟ್ಟುನಿಟ್ಟಿನ ಸೂಚನೆಗಳಿವೆ ಎಂದು ಮಧುರೈ ಸೈಬರ್ ಸೆಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತಿಯಿಂದ ಬೇರ್ಪಟ್ಟಿದ್ದ ಮಹಿಳೆ 2010ರಲ್ಲಿ ಉದ್ಯಮಿ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಶಿಕ್ಷಕಿ 16 ವರ್ಷದ ಮೂವರು ವಿದ್ಯಾರ್ಥಿಗಳನ್ನು ತನ್ನ ಮನೆಗೆ ಕರೆತಂದು, ಅವರೊಂದಿಗೆ ತೀರಾ ಅನ್ಯೋನ್ಯವಾಗಿರುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ವಿಚಾರಣೆ ವೇಳೆ ಉದ್ಯಮಿ ಈ ವಿಡಿಯೋವನ್ನು ತನ್ನ ಕೆಲ ಸ್ನೇಹಿತರ ನಡುವೆ ಹರಿಬಿಟ್ಟಿದ್ದಾಗಿ ಬಹಿರಂಗಪಡಿಸಿದ್ದಾನೆ. ಇದರಿಂದಾಗಿ ಸೈಬರ್ ಸೆಲ್ ವಿಡಿಯೋವನ್ನು ಸ್ವೀಕರಿಸಿದ ಕೆಲವರನ್ನು ಪ್ರಶ್ನಿಸಿದೆ.

ಅಪ್ರಾಪ್ತ ಬಾಲಕರು ಆಕೆಯ ವಿರುದ್ಧ ದೂರು ನೀಡಿದ ನಂತರ ಮಧುರೈ ದಕ್ಷಿಣ ಎಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಮಹಿಳೆ ಮತ್ತು ಪುರುಷನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ವಿಡಿಯೋ ಪ್ರಸಾರ ಮಾಡಿದವರನ್ನು ವಿಚಾರಣೆ ನಡೆಸುತ್ತಿದ್ದು, ಅಗತ್ಯ ಬಿದ್ದರೆ ಬಂಧಿಸಲಾಗುವುದು ಎಂದು ಸೈಬರ್ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿ ಅರೆಸ್ಟ್, ರಕ್ತಸ್ರಾವದಿಂದ ಮೃತಪಟ್ಟ ಮಗು

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ! ಚಿಕ್ಕಮಗಳೂರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada