ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ; ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ ಘೋಷಣೆ

ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ; ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ ಘೋಷಣೆ
ಅತ್ಯಾಚಾರ ನಿಲ್ಲಿಸಿ

ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಪದೇಪದೆ ಅತ್ಯಾಚಾರ ನಡೆಸುತ್ತಿದ್ದ ತಂದೆಯ ಕೃತ್ಯದ ವಿಚಾರ ಆ ಮಗುವಿನ ಅಜ್ಜಿಯಿಂದಲೇ ಬೆಳಕಿಗೆ ಬಂದಿದೆ. ವೃದ್ಧೆ ತನ್ನ ಮೊಮ್ಮಗಳ ಪರವಾಗಿ ನಿಂತು ಮಗನ ವಿರುದ್ಧ ದೂರು ನೀಡಿದ್ದರು.

TV9kannada Web Team

| Edited By: Sushma Chakre

Apr 05, 2022 | 8:42 PM

ಮುಂಬೈ: ತನ್ನ ಅಪ್ರಾಪ್ತ ಮಗಳ ಮೇಲೆ ಪದೇಪದೆ ಅತ್ಯಾಚಾರ (Rape) ನಡೆಸಿದ ತಂದೆಗೆ ವಿಶೇಷ ನ್ಯಾಯಾಲಯವು 25 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಮೊಮ್ಮಗಳಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ ಹುಡುಗಿಯ ಅಜ್ಜಿಯನ್ನು ಶ್ಲಾಘಿಸಿದೆ. ವಿಶೇಷ ನ್ಯಾಯಾಧೀಶರಾದ ಭಾರ್ತಿ ಕಾಳೆ ಕಳೆದ ವಾರ ಆರೋಪಿಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತ ಮಾಡಿದ ಅಪರಾಧಕ್ಕೆ ಆತನನ್ನು ತಪ್ಪಿತಸ್ಥನೆಂದು ಘೋಷಿಸಿದ್ದರು. ಆ ತೀರ್ಪಿನ ವಿವರವಾದ ಆದೇಶ ಇಂದು ಲಭ್ಯವಾಯಿತು. ಸಂತ್ರಸ್ತೆ ತನ್ನ ಅಜ್ಜಿ, ತಂದೆ, ಚಿಕ್ಕಪ್ಪ ಮತ್ತು ಇಬ್ಬರು ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದಳು. ಕೌಟುಂಬಿಕ ಕಲಹದ ಕಾರಣದಿಂದ 7 ವರ್ಷಗಳ ಹಿಂದೆ ಆಕೆಯ ತಾಯಿ ತನ್ನ ತಂದೆಯನ್ನು ತೊರೆದಿದ್ದಳು.

ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆಯ ವಿಷಯ ತಿಳಿದ ಸಂತ್ರಸ್ತೆಯ ಅಜ್ಜಿ ದೂರು ದಾಖಲಿಸಿದ್ದಾರೆ. ಅಂತಹ ವೃದ್ಧಾಪ್ಯದಲ್ಲಿಯೂ ಮೊಮ್ಮಗಳ ಪರವಾಗಿ ನ್ಯಾಯವನ್ನು ಕೋರಿದ್ದಕ್ಕಾಗಿ ಸಂತ್ರಸ್ತೆಯ ಅಜ್ಜಿಯನ್ನು ಪ್ರಶಂಸಿಸಬೇಕಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ತಂದೆಯು ಭದ್ರತೆ, ನಂಬಿಕೆ ಮತ್ತು ಪ್ರೀತಿಯ ಅಡಿಪಾಯವನ್ನು ಹಾಕುತ್ತಾನೆ. ತನ್ನ ಮಕ್ಕಳಿಗಾಗಿ ಏನೇನೋ ತ್ಯಾಗ ಮಾಡುತ್ತಾನೆ. ತನ್ನ ಮಗಳ ಜೀವವನ್ನು ಸುರಕ್ಷಿತವಾಗಿಸುತ್ತಾನೆ ಮತ್ತು ಅವಳನ್ನು ನೋಯಿಸದಂತೆ ರಕ್ಷಿಸುತ್ತಾನೆ. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತೆಯ ತಂದೆಯೇ ಅವಳಿಗೆ ಅಪಾರ ನೋವನ್ನುಂಟುಮಾಡಿದ್ದಾರೆ. ಬಾಲ್ಯದ ಆಘಾತವು ಬಾಲಕಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯವು ಆತಂಕ ಹೊಂದಿದೆ ಎಂದು ಕೋರ್ಟ್​ ಹೇಳಿದೆ.

ಆ ವ್ಯಕ್ತಿ ತನ್ನ ಮಗಳನ್ನು ಹುಡುಗರೊಂದಿಗೆ ಆಟವಾಡಲು ಬಿಟ್ಟಿರಲಿಲ್ಲ. ಆಕೆ ಹುಡುಗರೊಂದಿಗೆ ಮಾತನಾಡದಂತೆ ತಡೆದಿದ್ದ ಎಂದು ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ, ಆ ಬಾಲಕಿ ಹಾಗೂ ಆಕೆಯ ತಂದೆಯ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಆರೋಪಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದಲ್ಲದೆ, ಸಣ್ಣ ಕೊಠಡಿಯಲ್ಲಿ ಸುಮಾರು 7ರಿಂದ 8 ವ್ಯಕ್ತಿಗಳು ತಂಗಿದ್ದ ಕಾರಣ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಹೆಚ್ಚು ಅಸಂಭವವಾಗಿದೆ ಎಂದು ಅವರು ವಾದಿಸಿದ್ದರು.

ಇದನ್ನೂ ಓದಿ: Crime News: ರಾತ್ರಿ ಬಸ್​ನಲ್ಲಿ ಮೈ-ಕೈ ಮುಟ್ಟಿದವನಿಗೆ ಪಿನ್​ನಲ್ಲಿ ಚುಚ್ಚಿ, ಪೊಲೀಸ್ ಠಾಣೆಗೆ ಎಳೆದೊಯ್ದ ಮಹಿಳೆ

Crime News: ತಮಿಳುನಾಡಿನಲ್ಲಿ ಐವರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಕುಡಿದ ಅಮಲಿನಲ್ಲಿ ತಾವಾಗೇ ಸಿಕ್ಕಿಬಿದ್ದ ಕಾಮುಕರು

Follow us on

Related Stories

Most Read Stories

Click on your DTH Provider to Add TV9 Kannada