ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ! ಚಿಕ್ಕಮಗಳೂರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಅರೆಸ್ಟ್

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕ ಪ್ರಭು ನಾಯಕ್ ವಿದ್ಯಾರ್ಥಿನಿಯರಿಗೆ (Students) ಲೈಂಗಿಕ ಕಿರುಕುಳ ನೀಡುತ್ತಿದ್ದ ಅಂತ ಆರೋಪಿ ಕೇಳಿಬಂದಿದೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ! ಚಿಕ್ಕಮಗಳೂರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಅರೆಸ್ಟ್
ದೈಹಿಕ ಶಿಕ್ಷಕ ಪ್ರಭು ನಾಯಕ್
Follow us
| Updated By: sandhya thejappa

Updated on:Jan 22, 2022 | 1:01 PM

ಚಿಕ್ಕಮಗಳೂರು: ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಕ (Teacher) ಲೈಂಗಿಕ ಕಿರುಕುಳ (Sexual Harassment) ನೀಡಿರುವ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕ ಪ್ರಭು ನಾಯಕ್ ವಿದ್ಯಾರ್ಥಿನಿಯರಿಗೆ (Students) ಲೈಂಗಿಕ ಕಿರುಕುಳ ನೀಡುತ್ತಿದ್ದ ಅಂತ ಆರೋಪಿ ಕೇಳಿಬಂದಿದೆ. ಬಂಧಿತ ಪ್ರಭು ನಾಯಕ್ ಮೇಲೆ 11 ಎಫ್ಐಆರ್ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ದೈಹಿಕ ಶಿಕ್ಷಕ ನಾಪತ್ತೆಯಾಗಿದ್ದ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಎಸ್​ಪಿ ಸೂಚನೆ ನೀಡಿದ್ದು, ಎಸ್​ಪಿ ಆದೇಶದ ಮೇರೆಗೆ ಪೊಲೀಸರು ಅಲರ್ಟ್ ಆಗಿದ್ದಾರೆ.

ಪತ್ನಿಯ ಕೊಲೆಗೈದ ಪತಿ                                                                                                                                                                   ಪತ್ನಿಯನ್ನು ಪತಿ ಕೊಲೆಗೈದಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದಲ್ಲಿ ನಡೆದಿದೆ. ಪತ್ನಿ ಬಹಿರ್ದೆಸೆಗೆ ಹೋದ ವೇಳೆ ಪತಿ ಹತ್ತಾರು ಸಲ ಚಾಕಿವಿನಿಂದ ಇರಿದು ಕೊಲೆ ಮಾಡಿದ್ದಾನೆ. ರಮಿಜಾಬಿ (50) ಕೊಲೆಯಾದ ಮಹಿಳೆ. ಕಳೆದ ಹಲವಾರು ದಿನಗಳಿಂದ ಆರೋಪಿ ಮತ್ತೊಬ್ಬರೊಂದಿದೆ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಹೇಳುತ್ತಿದ್ದನಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳವಾಗುತ್ತಿತ್ತಂತೆ. ಪತ್ನಿ ಹೊರಗೆ ಹೋಗುತ್ತಿದ್ದನ್ನೆ ಕಾಯ್ದು ಕುಳಿತ ಪತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆನೇಕಲ್ ಪೊಲೀಸರ ಭರ್ಜರಿ ಕಾರ್ಯಚರಣೆ                                                                                                                                                ಆನೇಕಲ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಮನೆಗಳ್ಳರಿಂದ 35 ಲಕ್ಷದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ಗೃಹ ಮಂಡಳಿ ಬಡಾವಣೆಯ ಮನೆಯೊಂದರಲ್ಲಿ ಕಳ್ಳತನ ನಡೆಸಿದ್ದರು. ಕಳ್ಳತನ ನಡೆಸಿದ್ದ ಮೂರು ಆರೋಪಿಗಳನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ.

ದರೋಡೆ ಮಾಡಿದ್ದ ಆರೋಪಿ ಅರೆಸ್ಟ್                                                                                                                                                     ಬೆಂಗಳೂರಿನ SBI ಶಾಖೆಯಲ್ಲಿ ಸುಲಿಗೆ ಮಾಡಿದ್ದವನನ್ನು ಸೆರೆ ಹಿಡಿಯಲಾಗಿದೆ. ಸುಲಿಗೆ ಮಾಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಧೀರಜ್ ಎಂಬಾತತನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ 40 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ.  ಆನ್​​ಲೈನ್​ ಌಪ್​​ಗಳ ಮೂಲಕ ಲೋನ್ ಪಡೆದಿದ್ದ. ಸಾಲ ತೀರಿಸಲು ಸುಲಿಗೆ ಪ್ಲ್ಯಾನ್ ಮಾಡಿ ಬ್ಯಾಂಕ್​ಗೆ ನುಗ್ಗಿದ್ದ. ಮ್ಯಾನೇಜರ್​​ಗೆ ಚಾಕು ತೋರಿಸಿ ನಗದು, ಚಿನ್ನ ದರೋಡೆ ಮಾಡಿದ್ದ. ಜ.14ರಂದು ಸಿನಿಮೀಯ ರೀತಿ ಬ್ಯಾಂಕ್​​ಗೆ ನುಗ್ಗಿ ದರೋಡೆ ಮಾಡಿದ್ದ. 4 ಲಕ್ಷ, ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ ಧೀರಜ್​ನನ್ನು ಸದ್ಯ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ

ಬಾಗಿಲು ಲಾಕ್​ ಮಾಡಿಕೊಂಡು, ಪ್ಲಾಸ್ಟಿಕ್​ ಕುರ್ಚಿಯಿಂದ ಥಳಿಸಿದರು; ಕೇಂದ್ರ ಸಚಿವರ ವಿರುದ್ಧ ಇಬ್ಬರು ಅಧಿಕಾರಿಗಳಿಂದ ಗಂಭೀರ ಆರೋಪ

ಗೋವಾ ವಿಧಾನಸಭೆ ಚುನಾವಣೆ: ಬಿಜೆಪಿ ತೊರೆದ ಮನೋಹರ್ ಪರಿಕ್ಕರ್ ಪುತ್ರ, ಪಣಜಿಯಿಂದ ಸ್ಪರ್ಧಿಸುವುದಾಗಿ ಘೋಷಣೆ

Published On - 12:53 pm, Sat, 22 January 22