AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋರಾಟಗಳಿಗೆ ಜೆಡಿಎಸ್ ಆಹ್ವಾನಿಸದ ಬಿಜೆಪಿ, ಕ್ರಮೇಣ ಹೆಚ್ಚುತ್ತಿದೆ ಪಕ್ಷಗಳ ನಡುವಿನ ಕಂದರ

ಹೋರಾಟಗಳಿಗೆ ಜೆಡಿಎಸ್ ಆಹ್ವಾನಿಸದ ಬಿಜೆಪಿ, ಕ್ರಮೇಣ ಹೆಚ್ಚುತ್ತಿದೆ ಪಕ್ಷಗಳ ನಡುವಿನ ಕಂದರ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 07, 2025 | 9:08 PM

ಯಾಕೆ ದೂರ ದೂರ ಅಂತ ಕೇಳಿದರೆ ಎರಡೂ ಪಕ್ಷದ ನಾಯಕರು ಸಮಜಾಯಿಷಿಗಳನ್ನು ನೀಡುತ್ತಾರೆ. ಆದರೆ ಪ್ರಮುಖರು ಏನೇ ಹೇಳಿದರೂ ಪಕ್ಷಗಳ ನಡುವಿನ ಕಂದರ ಹೆಚ್ಚುತ್ತಾ ಸಾಗುತ್ತಿದೆ. ಜೆಡಿಎಸ್ ನಾಯಕರು ಈಗ ಬಹಿರಂಗವಾಗೇ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ, ಅದರೆ ಅವರ ಮಾತಿಗಳಿಗೆ ಕ್ಯಾರೆ ಅನ್ನದ ಬಿಜೆಪಿ ನಾಯಕರು ಜೆಡಿಎಸ್ ಗೆ ಆಹ್ವಾನವೀಯದೆ ಇವತ್ತು ಜನಾಕ್ರೋಶ ಯಾತ್ರೆ ಶುರುಮಾಡಿದ್ದಾರೆ.

ಬೆಂಗಳೂರು, ಏಪ್ರಿಲ್ 7: ದೋಸ್ತ್ ದೋಸ್ತ್ ನಾ ರಹಾ, ಪ್ಯಾರ್ ಪ್ಯಾರ್ ನಾ ರಹಾ………ಎನ್ನುವ ಹಳೆಯ ಹಿಂದಿ ಸಿನಿಮಾದ ಹಾಡು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ನೋಡುತ್ತಿದ್ದರೆ ನೆನಪಾಗೋದು ಸಹಜವೇ. ವಿಧಾನ ಸಭಾ ಚುನಾವಣೆಯ ನಂತರ ಮತ್ತು ಲೋಕಸಭಾ ಚುನಾವಣೆಗೆ ಮೊದಲು ಜೆಡಿಎಸ್​​ಗೆ ಅಳಿವು-ಉಳಿವಿನ ಸ್ಥಿತಿ ಎದುರಾಗಿದ್ದು ಸುಳ್ಳಲ್ಲ. ಪ್ರಾಯಶಃ ಕುಮಾರಸ್ವಾಮಿ ಬಿಜೆಪಿ ಜತೆ ಲೋಕಸಭಾ ಚುನಾವಣೆಗೆ ಮೊದಲು ಮೈತ್ರಿ ಮಾಡಿಕೊಂಡಿರದಿದ್ದರೆ ಅವರ 19 ಶಾಸಕರಲ್ಲಿ ಕೆಲವರು ನಿಷ್ಠೆ ಬದಲಾಯಿಸುತ್ತಿದ್ದರು. ಹಾಗೆ ನೋಡಿದರೆ ಬಿಜೆಪಿಗೆ ಜೆಡಿಎಸ್ ಜೊತೆ ಮೈತ್ರಿಯ ಅಗತ್ಯವಿರಲಿಲ್ಲ. ಈಗ ಅದು ನಿಚ್ಚಳವಾಗುತ್ತಿದೆ,  ಅದು ತನ್ನ ಹೋರಾಟಗಳಿಂದ ಜೆಡಿಎಸ್ ಅನ್ನು ದೂರ ಇಡುತ್ತಿದೆ.

ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಿಂದಲೇ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭಿಸಿದ ಬಿಜೆಪಿ ನಾಯಕರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ