AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan 20th Installment: ಪಿಎಂ ಕಿಸಾನ್: ಅರ್ಹರಲ್ಲದ ರೈತರು ಯಾರು? 20ನೇ ಕಂತು ಯಾವಾಗ? ಇಲ್ಲಿದೆ ಡೀಟೇಲ್ಸ್

PM Kisan scheme: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 19ನೇ ಕಂತಿನ ಹಣ 2025ರ ಫೆಬ್ರುವರಿ 19ರಂದು ಬಿಡುಗಡೆ ಆಗಿತ್ತು. ಈಗ 20ನೇ ಕಂತಿನ ಹಂದ ನಿರೀಕ್ಷೆಯಲ್ಲಿ ಫಲಾನುಭವಿಗಳಿದ್ದಾರೆ. ಏಪ್ರಿಲ್​​ನಿಂದ ಜುಲೈವರೆಗಿನ ಅವಧಿಯ ಕಂತಿನ ಹಣ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ, ಯಾವಾಗ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ.

PM Kisan 20th Installment: ಪಿಎಂ ಕಿಸಾನ್: ಅರ್ಹರಲ್ಲದ ರೈತರು ಯಾರು? 20ನೇ ಕಂತು ಯಾವಾಗ? ಇಲ್ಲಿದೆ ಡೀಟೇಲ್ಸ್
ರೈತರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 07, 2025 | 5:43 PM

ಬೆಂಗಳೂರು, ಏಪ್ರಿಲ್ 7: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ಇಲ್ಲಿಯವರೆಗೆ 19 ಕಂತುಗಳ ಹಣ ಬಿಡುಗಡೆ ಆಗಿದೆ. 2018ರ ಡಿಸೆಂಬರ್ ತಿಂಗಳಲ್ಲಿ ಆರಂಭವಾದ ಈ ಸ್ಕೀಮ್​​ನಲ್ಲಿ ಕೇಂದ್ರ ಸರ್ಕಾರ ಫಲಾನುಭವಿ ರೈತರಿಗೆ ವರ್ಷಕ್ಕೆ ಮೂರು ಕಂತುಗಳನ್ನು ಬಿಡುಗಡೆ ಮಾಡುತ್ತದೆ. ಪ್ರತೀ ಕಂತು ಎರಡು ಸಾವಿರ ರೂ ಮೊತ್ತದ್ದಾಗಿರುತ್ತದೆ. ದೇಶಾದ್ಯಂತ 8-12 ಕೋಟಿ ಫಲಾನುಭವಿಗಳಿದ್ದಾರೆ. 19ನೇ ಕಂತಿನ ಹಣವನ್ನು 2025ರ ಫೆಬ್ರುವರಿ 19ರಂದು ಬಿಡುಗಡೆ ಮಾಡಲಾಗಿತ್ತು. ಒಟ್ಟು 9.8 ಕೋಟಿ ರೈತರಿಗೆ ಸುಮಾರು 20,000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಈಗ 20ನೇ ಕಂತಿನ ಹಣಕ್ಕೆ ಎದುರು ನೋಡಲಾಗುತ್ತಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತುಗಳನ್ನು ನೀಡಲಾಗುತ್ತದೆ. ಡಿಸೆಂಬರ್​​​ನಿಂದ ಮಾರ್ಚ್​​​ವರೆಗೆ, ಏಪ್ರಿಲ್​​ನಿಂದ ಜುಲೈವರೆಗೆ, ಆಗಸ್ಟ್​​ನಿಂದ ನವೆಂಬರ್​​ವರೆಗೆ ಈ ಮೂರು ಸೀಸನ್​​ಗಳಲ್ಲಿ ಸರ್ಕಾರ 2,000 ರೂ ನೀಡುತ್ತದೆ. ಡಿಸೆಂಬರ್​​ನಿಂದ ಮಾರ್ಚ್​​ವರೆಗಿನ ಅವಧಿಯ ಕಂತನ್ನು ಫೆಬ್ರುವರಿ 19ರಂದು ಬಿಡುಗಡೆ ಮಾಡಲಾಗಿತ್ತು. ಏಪ್ರಿಲ್​​ನಿಂದ ಜುಲೈವರೆಗಿನ ಅವಧಿಯ ಕಂತಿನ ಹಣವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ, ಅದೇ ತಿಂಗಳು ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಖಚಿತವಾಗಿ ಹೇಳಲು ಅಸಾಧ್ಯ. ಏಪ್ರಿಲ್​​ನಿಂದ ಜುಲೈವರೆಗಿನ ನಾಲ್ಕು ತಿಂಗಳಲ್ಲಿ ಯಾವ ತಿಂಗಳು ಬೇಕಾದರೂ ಹಣ ಬಿಡುಗಡೆ ಮಾಡಬಹುದು.

ಇದನ್ನೂ ಓದಿ: ಹೊಸ 100 ರೂ ಮತ್ತು 200 ರೂ ಬ್ಯಾಂಕ್ ನೋಟುಗಳ ಬಿಡುಗಡೆ; ಹೀಗಿವೆ ಈ ನೋಟುಗಳು

ಇದನ್ನೂ ಓದಿ
Image
ಎಲ್​​​ಪಿಜಿ ಸಿಲಿಂಡರ್ ಬೆಲೆ 50 ರೂ ಹೆಚ್ಚಳ
Image
ಪೆಟ್ರೋಲ್, ಡೀಸಲ್ ಮೇಲೆ ಅಬಕಾರಿ ಸುಂಕ 2 ರೂ ಹೆಚ್ಚಳ
Image
ರೈತರು ಬೆಳೆ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Image
ಮರುಗಾಡಿನಲ್ಲಿ ಸೇಬು ಬೆಳೆದ ರಾಜಸ್ಥಾನದ ರೈತರು

ಪಿಎಂ ಕಿಸಾನ್ ಯೋಜನೆಗೆ ಅರ್ಹರು ಯಾರು?

ಪಿಎಂ ಕಿಸಾನ್ ಯೋಜನೆಯ ಉದ್ದೇಶವು ವ್ಯವಸಾಯ ಮಾಡುವ ರೈತರಿಗೆ ನೆರವಾಗಬೇಕು ಎಂಬುದು. ಸ್ವಂತ ಕೃಷಿ ಜಮೀನು ಹೊಂದಿರುವ ಯಾವುದೇ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ಯಾರ ಹೆಸರಿನಲ್ಲಿ ಜಮೀನು ಇರುವುದೋ ಅವರು ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ಆದರೆ, ರೈತರಾಗಿದ್ದರೂ ಯೋಜನೆಯಲ್ಲಿ ಕೆಲ ನಿರ್ಬಂಧಗಳಿವೆ. ಅವುಗಳ ವಿವರ ಮುಂದಿದೆ:

  • ಸಾಂಸ್ಥಿಕ ಭೂ ಹಿಡುವಳಿದಾರರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದವರು, ಮತ್ತು ಹಿಂದೆ ಆ ಹುದ್ದೆಯಲ್ಲಿದ್ದಂತಹವರು ರೈತರಾಗಿದ್ದರೂ ಪಿಎಂ ಕಿಸಾನ್ ಫಲಾನುಭವಿಯಾಗುವಂತಿಲ್ಲ.
  • ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ನಗರಪಾಲಿಕೆ ಮೇಯರ್, ಜಿಲ್ಲಾ ಪಂಚಾಯತ್ ಛೇರ್ಮನ್​​ಗಳು ಪಿಎಂ ಕಿಸಾನ್ ಯೋಜನೆಗೆ ಅನರ್ಹರಿರುತ್ತಾರೆ.
  • ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸಚಿವಾಲಯ, ಕಚೇರಿ, ಇಲಾಖೆಗಳಲ್ಲಿನ ಎಲ್ಲಾ ಹಾಲಿ ಉದ್ಯೋಗಿಗಳು ಹಾಗೂ ನಿವೃತ್ತ ಅಧಿಕಾರಿಗಳು.
  • ತಿಂಗಳಿಗೆ 10,000 ರೂಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು ಅನರ್ಹರಿರುತ್ತಾರೆ.
  • ಹಿಂದಿನ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು, ವೈದ್ಯರು, ಎಂಜಿನಿಯರು, ಸಿಎ, ಆರ್ಕಿಟೆಕ್ಟ್ ಇತ್ಯಾದಿ ವೃತ್ತಿಪರರು ಪಿಎಂ ಕಿಸಾನ್ ಯೋಜನೆ ಫಲಾನುಭವಿಯಾಗಲು ಅನರ್ಹರಾಗಿದ್ದಾರೆ.
  • ಹಾಗೆಯೇ, ಫಲಾನುಭವಿಯ ಕುಟುಂಬದಲ್ಲಿ ಯಾವೊಬ್ಬ ಸದಸ್ಯರೂ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ, ಅಂಥವರು ಪಿಎಂ ಕಿಸಾನ್ ಫಲಾನುಭವಿಯಾಗುವಂತಿಲ್ಲ.

ಹೆಚ್ಚಿನ ಮಾಹಿತಿಗೆ ಪಿಎಂ ಕಿಸಾನ್ ವೆಬ್​​​ಸೈಟ್​​ಗೆ ಭೇಟಿ ನೀಡಿ. ಅದರ ಲಿಂಕ್ ಇಲ್ಲಿದೆ: pmkisan.gov.in/

ಇದನ್ನೂ ಓದಿ: ಭಾರತ ಮಾತ್ರವಲ್ಲ, ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ; ಏನು ಕಾರಣ?

ಈ ವೆಬ್​​ಸೈಟ್​​ನಲ್ಲಿ ನೀವು ಫಲಾನುಭವಿಗಳ ಪಟ್ಟಿ ವೀಕ್ಷಿಸಬಹುದು. ಹೊಸದಾಗಿ ಯೋಜನೆಗೆ ನೊಂದಾಯಿಸಿಕೊಳ್ಳಬೇಕೆಂದಿದ್ದರೆ ಈ ವೆಬ್​​ಸೈಟ್ ಮೂಲಕವೇ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Mon, 7 April 25

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು