AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಮಾತ್ರವಲ್ಲ, ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ; ಏನು ಕಾರಣ?

Stock markets in India and worldwide crash: ಜಾಗತಿಕವಾಗಿ ಎಲ್ಲಾ ದೇಶಗಳ ಷೇರುಪೇಟೆಗಳು ಸೋಮವಾರ ಭಾರೀ ಕುಸಿತ ಕಂಡಿವೆ. ಅಮೆರಿಕ, ಯೂರೋಪ್, ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ರಕ್ತದೋಕುಳಿ ಆಗುತ್ತಿದೆ. ಅಮೆರಿಕದ ನಾಸ್ಡಾಕ್, ಎಸ್ ಅಂಡ್ ಪಿ ಇತ್ಯಾದಿ ಸೂಚ್ಯಂಕಗಳು ಥರಗುಟ್ಟುತ್ತಿವೆ. ತೈವಾನ್, ಹಾಂಕಾಂಗ್​ನ ಪೇಟೆಗಳು ಅಕ್ಷರಶಃ ತಲ್ಲಣಗೊಂಡಿವೆ.

ಭಾರತ ಮಾತ್ರವಲ್ಲ, ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ; ಏನು ಕಾರಣ?
ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 07, 2025 | 11:42 AM

Share

ನವದೆಹಲಿ, ಏಪ್ರಿಲ್ 7: ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ರಕ್ತದೋಕುಳಿ (stock market blood bath) ಆಗುತ್ತಿದೆ. ಭಾರತದಲ್ಲಿ 23,000 ಗಡಿದಾಟಿ ಗೂಳಿ ಓಟದ (bull run) ಮುನ್ಸೂಚನೆ ನೀಡಿದ್ದ ನಿಫ್ಟಿ ಈಗ ಪ್ರಪಾತಕ್ಕೆ ಜಿಗಿಜಿಗಿದು ಬೀಳುತ್ತಿದೆ. 22,000 ಅಂಕಗಳ ಗಡಿಯೊಳಗೆ ಕಾಲಿಟ್ಟಿದೆ. ಸೆನ್ಸೆಕ್ಸ್​ನಲ್ಲೂ ಕೂಡ ರಕ್ತದೋಕುಳಿ ಆಗುತ್ತಿದೆ. ಬೆಳಗ್ಗೆ 11 ಗಂಟೆಯೊಳಗೆ ಶೇ. 3.77ರಷ್ಟು ಕುಸಿತವಾಗಿದೆ. ಬಿಎಸ್​​ಇ ಮತ್ತು ಎನ್​​ಎಸ್​​ಇನ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೂಡ ಕೆಂಪು ಬಣ್ಣದಲ್ಲಿವೆ. ಭಾರತ ಮಾತ್ರವಲ್ಲ, ಜಾಗತಿಕವಾಗಿ ಎಲ್ಲಾ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿವೆ. ಇದು ಬ್ಲ್ಯಾಕ್ ಮಂಡೇ ಎಂದು ಹೂಡಿಕೆದಾರರು ಕನವರಿಸುವಂತಾಗಿದೆ.

ಅಮೆರಿಕ, ಯೂರೋಪ್ ಮತ್ತು ಏಷ್ಯಾದ ಎಲ್ಲಾ ಷೇರು ಮಾರುಕಟ್ಟೆಗಳೂ ಸೋಮವಾರ ತತ್ತರಿಸಿಹೋಗಿವೆ. ಹೂಡಿಕೆದಾರರು ಸಿಕ್ಕಾಪಟ್ಟೆ ನಷ್ಟ ಮಾಡಿಕೊಂಡಿದ್ದಾರೆ. ಬೇರೆ ಜಾಗತಿಕ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದ ಸೆನ್ಸೆಕ್ಸ್, ನಿಫ್ಟಿ ಅನುಭವಿಸಿದ ನಷ್ಟ ಕಡಿಮೆ ಎಂದನಿಸುವಷ್ಟು ಬ್ಲಡ್ ಬಾತ್ ಆಗಿದೆ.

ಇದನ್ನೂ ಓದಿ:  ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?

ಇದನ್ನೂ ಓದಿ
Image
ಮಾರುಕಟ್ಟೆ ಅಲುಗಾಟದಲ್ಲೂ ವಾರನ್ ಬಫೆಟ್ ಆಸ್ತಿ ಹೆಚ್ಚಿದ್ದು ಹೇಗೆ?
Image
ಅಮೆರಿಕ ಅಮೆರಿಕ... ಒಂದೇ ದಿನ 200 ಲಕ್ಷ ಕೋಟಿ ರೂ ಗೋತಾ
Image
ವಿದೇಶೀ ಹೂಡಿಕೆದಾರರಿಗೆ ನಿಯಮ ಸಡಿಲಿಸಿದ ಸೆಬಿ
Image
ಷೇರು ಯಾವಾಗ ಮಾರಬೇಕು? ದೀರ್ಘಾವಧಿ ಇಟ್ಟುಕೊಳ್ಳಬೇಕಾ?

ಯಾವ್ಯಾವ ದೇಶಗಳಲ್ಲಿ ಇವತ್ತಿನ ಷೇರು ಮಾರುಕಟ್ಟೆ ಓಟ ಹೇಗಿದೆ? (ಬೆಳಗ್ಗೆ 11 ಗಂಟೆ)

  • ಭಾರತದ ಸೆನ್ಸೆಕ್ಸ್ ಸೂಚ್ಯಂಕ: ಶೇ. 3.78 ಕುಸಿತ
  • ಭಾರತದ ನಿಫ್ಟಿ ಸೂಚ್ಯಂಕ: ಶೇ 4 ಕುಸಿತ
  • ಅಮೆರಿಕದ ಡೌ ಜೋನ್ಸ್ ಫ್ಯೂಚರ್ಸ್: ಶೇ. 2.74 ಕುಸಿತ
  • ಅಮೆರಿಕದ ಎಸ್ ಅಂಡ್ ಪಿ 500 ಸೂಚ್ಯಂಕ: ಶೇ. 5.97 ಕುಸಿತ
  • ಅಮೆರಿಕದ ನಾಸ್ಡಾಕ್ ಸೂಚ್ಯಂಕ: ಶೇ. 5.73 ಕುಸಿತ
  • ಜಪಾನ್​​ನ ನಿಕ್ಕೀ 225 ಸೂಚ್ಯಂಕ: ಶೇ. 6.84 ಕುಸಿತ
  • ಹಾಂಕಾಂಗ್​​ನ ಹ್ಯಾಂಗ್ ಸೆಂಗ್ ಸೂಚ್ಯಂಕ: ಶೇ. 10.95 ಕುಸಿತ
  • ತೈವಾನ್​​ನ ವೇಟೆಡ್ ಸೂಚ್ಯಂಕ: ಶೇ. 9.72 ಕುಸಿತ
  • ಚೀನಾದ ಶಾಂಘೈ ಕಾಂಪೋಸಿಟ್: ಶೇ. 6.74 ಕುಸಿತ
  • ಕೊರಿಯಾದ ಕೋಸ್ಪಿ: ಶೇ. 5.18 ಕುಸಿತ
  • ಸಿಂಗಾಪುರದ ಸ್ಟ್ರೇಟ್ಸ್ ಟೈಮ್ಸ್: ಶೇ. 7.76 ಕುಸಿತ
  • ಇಂಡೋನೇಷ್ಯಾದ ಜಕಾರ್ತ ಕಾಂಪೊಸಿಟ್: ಶೇ. 3 ಕುಸಿತ
  • ಥಾಯ್ಲೆಂಡ್​​ನ ಎಸ್​​​ಇಟಿ ಇಂಡೆಕ್ಸ್: SE. 2.22 ಕುಸಿತ

ಜಾಗತಿಕವಾಗಿ ಷೇರು ಮಾರುಕಟ್ಟೆ ಕುಸಿಯುತ್ತಿರುವುದು ಯಾಕೆ?

ಮಾರುಕಟ್ಟೆಯ ರಕ್ತದೋಕುಳಿಗೆ ಪ್ರಮುಖ ಕಾರಣ ಎಂದರೆ ಟ್ಯಾರಿಫ್ ವಾರ್. ಅಮೆರಿಕ ಆರಂಭಿಸಿದ ಈ ಸುಂಕ ಸಮರ ಜಾಗತಿಕ ಮಹಾಯುದ್ಧವಾಗಿ ಪರಿಣಮಿಸಿದೆ. ಎಲ್ಲಾ ದೇಶಗಳ ಮೇಲೆ ಅಮೆರಿಕ ಟ್ಯಾರಿಫ್ ಹೇರಿಕೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಬೇರೆ ಬೇರೆ ದೇಶಗಳೂ ಕೂಡ ಅಮೆರಿಕದ ಮೇಲೆ ಪ್ರತಿಸುಂಕ ವಿಧಿಸತೊಡಗಿವೆ. ಚೀನಾ, ಕೆನಡಾ, ಮೆಕ್ಸಿಕೋ, ಈಗ ಯೂರೋಪಿಯನ್ ಯೂನಿಯನ್ ಕೂಡ ಅಮೆರಿಕದ ವಿರುದ್ಧ ಟೊಂಕ ಕಟ್ಟಿ ನಿಂತಿದೆ.

ಇದನ್ನೂ ಓದಿ: ಅಮೆರಿಕ ಷೇರುಮಾರುಕಟ್ಟೆ ಭಯಾನಕ ಕುಸಿತ; ಒಂದೇ ದಿನದಲ್ಲಿ 200 ಲಕ್ಷ ಕೋಟಿ ರೂ ನಷ್ಟ

ಈ ಟ್ಯಾರಿಫ್ ಯುದ್ಧದಲ್ಲಿ ಗೆಲ್ಲುವವರಿರೋದಿಲ್ಲ, ಎಲ್ಲರಿಗೂ ಸೋಲೇ. ಜಾಗತಿಕವಾಗಿ ಮತ್ತೆ ಹಣದುಬ್ಬರ ಏರಿಕೆ ಆಗಲಿದೆ. ಕಾರ್ಪೊರೇಟ್ ಸಂಸ್ಥೆಗಳ ಲಾಭ ಕಡಿಮೆ ಆಗಲಿದೆ. ಬೆಲೆ ಏರಿಕೆಯಿಂದಾಗಿ ಬಡ್ಡಿದರಗಳೂ ಹೆಚ್ಚಾಗಲಿವೆ. ಇದರಿಂದಾಗಿ ಷೇರು ಮಾರುಕಟ್ಟೆಯಿಂದ ಜನರು ಹೊರಬೀಳತೊಡಗಿದ್ದಾರೆ.

ಭಾರತದಲ್ಲಿ ಮಾರುಕಟ್ಟೆ ಕುಸಿಯಲು ಏನು ಕಾರಣ?

ಮೇಲೆ ತಿಳಿಸಿದ ಟ್ಯಾರಿಫ್ ಯುದ್ಧದ ಪರಿಣಾಮ ಭಾರತದ ಮೇಲೂ ಆಗಿದೆ. ಇದರ ಜೊತೆಗೆ, ವಿದೇಶೀ ಹೂಡಿಕೆದಾರರು ಮತ್ತೊಮ್ಮೆ ಹೊರನಡೆಯತೊಡಗಿದ್ದಾರೆ. ಜಾಗತಿಕವಾಗಿ ಎಲ್ಲಾ ಮಾರುಕಟ್ಟೆಗಳೂ ಕುಸಿಯುತ್ತಿರುವುದು ಭಾರತಕ್ಕೂ ಪರಿಣಾಮ ಬೀರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ