ಬೆಲೆ ಏರಿಕೆ ನಮಗೆ ನುಂಗಲಾರದ ತುತ್ತಾಗಿದೆ, ತಿಂಡಿ ಬೆಲೆ ಶೇ. 10 ಜಾಸ್ತಿ ಮಾಡ್ತಿದ್ದೇವೆ -ಸಹಿಸಿಕೊಳೀ ಎಂದ ಹೋಟೆಲು ಮಾಲೀಕರು

ಬೆಲೆ ಏರಿಕೆ ನಮಗೆ ನುಂಗಲಾರದ ತುತ್ತಾಗಿದೆ, ತಿಂಡಿ ಬೆಲೆ ಶೇ. 10 ಜಾಸ್ತಿ ಮಾಡ್ತಿದ್ದೇವೆ -ಸಹಿಸಿಕೊಳೀ ಎಂದ ಹೋಟೆಲು ಮಾಲೀಕರು
ಅಡುಗೆ ಎಣ್ಣೆ ಮತ್ತು ಜಿಲೇಬಿ ತಯಾರಿಕೆ (ಪ್ರಾತಿನಿಧಿಕ ಚಿತ್ರ)

ಅಡುಗೆ ಎಣ್ಣೆ, ಟೀ & ಕಾಫಿ ಪುಡಿ, ಎಲ್ಪಿಜಿ ಗ್ಯಾಸ್ ದರ ಹೆಚ್ಚಳ ಹಿನ್ನೆಲೆ ಹೋಟೆಲ್ಗಳಲ್ಲಿ ಊಟ, ಉಪಾಹಾರದ ದರ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಊಟದ ದರ ಏರಿಕೆ ಮಾಡಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ.

TV9kannada Web Team

| Edited By: Ayesha Banu

Apr 04, 2022 | 7:31 PM


ಬೆಂಗಳೂರು: ಕೊರೊನಾ ಹೊಡೆತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಜನ ಸಾಮಾನ್ಯರಿಗೆ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಿಸಿ ಶಾಕ್ ಕೊಟ್ಟಿದೆ. ಇದರ ಜೊತೆಗೆ ಈಗ ಹೋಟೆಲ್‌ಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೋಟೆಲ್‌, ಉಪಾಹಾರ ಮಂದಿರ ಮಾಲೀಕರು ತಿಂಡಿ, ಊಟ, ಟೀ, ಕಾಫಿ ಬೆಲೆಗಳಲ್ಲಿ ಏರಿಕೆ ಮಾಡಿದ್ದಾರೆ.

ಅಡುಗೆ ಎಣ್ಣೆ, ಟೀ & ಕಾಫಿ ಪುಡಿ, ಎಲ್ಪಿಜಿ ಗ್ಯಾಸ್ ದರ ಹೆಚ್ಚಳ ಹಿನ್ನೆಲೆ ಹೋಟೆಲ್ಗಳಲ್ಲಿ ಊಟ, ಉಪಾಹಾರದ ದರ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಊಟದ ದರ ಏರಿಕೆ ಮಾಡಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ. ಗ್ರಾಹಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ. ಊಟ, ಉಪಾಹಾರ, ಕಾಫಿ, ಟೀ ದರ ಶೇಕಡಾ 10ರಷ್ಟು ಹೆಚ್ಚಳವಾಗಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ.

ಆಡುಗೆ ಎಣ್ಣೆ, ಕಾಫೀ ಪುಡಿ, ಗ್ಯಾಸ್ ಮುಂತಾದ ಆಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹೋಟೆಲು ಮಾಲೀಕರಿಗೆ ನುಂಗಲಾರದ ತುತ್ತಾದಂತಾಗಿದೆ. ಆದರೆ ಈ ಸಂದರ್ಭದಲ್ಲಿ ಹೋಟೆಲ್ಗಳಲ್ಲಿ ಬೆಲೆ ಏರಿಕೆಯು ಅನಿವಾರ್ಯವಾಗಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶೇಕಡ 10ರಷ್ಟು ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡಿರುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಇನ್ನೊಂದು ವಾರದಲ್ಲಿ ಹೋಟೆಲ್‌ನಲ್ಲಿ ಬೆಲೆ ಏರಿಕೆ ಮಾಡಲಾಗುವುದು
ಇನ್ನೊಂದು ವಾರದಲ್ಲಿ ಹೋಟೆಲ್‌ನಲ್ಲಿ ಬೆಲೆ ಏರಿಕೆ ಮಾಡಲಾಗುವುದು ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ. ಇನ್ನೊಂದು ವಾರದಲ್ಲಿ ಹೋಟೆಲ್‌ನಲ್ಲಿ ಬೆಲೆ ಏರಿಕೆ ಮಾಡಲಾಗುವುದು. ಕನಿಷ್ಠ ಶೇ.10ರಷ್ಟು ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಯಾವ್ಯಾವ ತಿನಿಸು ದರ ಏರಿಕೆ ಎಂಬುದು ಆಯಾ ಹೋಟೆಲ್ ನವರಿಗೆ ಬಿಟ್ಟಿದ್ದು. ಗ್ಯಾಸ್, ಅಡುಗೆ ಎಣ್ಣೆ ನಿರಂತರವಾಗಿ ಏರಿಕೆಯಾಗುತ್ತಿದೆ. ತಿಂಡಿ ಐದು ರೂ. ಕಾಫಿ, ಟೀ ಎರಡು ರೂ. ಹೆಚ್ಚಳ ಆಗುತ್ತೆ. ವಿದ್ಯುತ್ ದರ ಏರಿಕೆಯೂ ಜಾಸ್ತಿ ಆಗಿರೋದ್ರಿಂದ ದರ ಏರಿಕೆ ಅನಿವಾರ್ಯ. ಸದ್ಯ ಬೆಂಗಳೂರು ನಗರದಲ್ಲಿ ದರ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಇದನ್ನೂ ಓದಿ: Investors Wealth: ಷೇರುಪೇಟೆ ಹೂಡಿಕೆದಾರರ ಸಂಪತ್ತು ಒಂದು ತಿಂಗಳಲ್ಲಿ 30 ಲಕ್ಷ ಕೋಟಿ ರೂಪಾಯಿ ಹೆಚ್ಚಳ

RR vs RCB Head to Head: ಆರ್​ಸಿಬಿ- ರಾಜಸ್ಥಾನ ಹಣಾಹಣಿ; ಇಬ್ಬರ ಮುಖಾಮುಖಿಯಲ್ಲಿ ಬೆಂಗಳೂರೇ ಬೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada