Investors Wealth: ಷೇರುಪೇಟೆ ಹೂಡಿಕೆದಾರರ ಸಂಪತ್ತು ಒಂದು ತಿಂಗಳಲ್ಲಿ 30 ಲಕ್ಷ ಕೋಟಿ ರೂಪಾಯಿ ಹೆಚ್ಚಳ
ಕಳೆದ ಒಂದು ತಿಂಗಳಲ್ಲಿ ಷೇರುಪೇಟೆ ಹೂಡಿಕೆದಾರರ ಸಂಪತ್ತು 30 ಲಕ್ಷ ಕೋಟಿ ರೂಪಾಯಿ ಏರಿಕೆ ಆಗಿದೆ. ಇಂದಿನ ವಹಿವಾಟಿನಲ್ಲಿ ಷೇರುಪೇಟೆಯಲ್ಲಿ ಏನೇನಾಯಿತು ಎಂಬ ಮಾಹಿತಿ ಇಲ್ಲಿದೆ.
ಏಪ್ರಿಲ್ 4ನೇ ತಾರೀಕಿನ ಸೋಮವಾರದಂದು ಬಿಎಸ್ಇ ಸೆನ್ಸೆಕ್ಸ್ 60,000 ಪಾಯಿಂಟ್ಸ್ ಗಡಿ ದಾಟಿದೆ. ಮತ್ತು ಕಳೆದ ಒಂದು ತಿಂಗಳಲ್ಲಿ ಹೂಡಿಕೆದಾರರ ಸಂಪತ್ತು 30 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಉಕ್ರೇನ್- ರಷ್ಯಾ ಬಿಕ್ಕಟ್ಟು (Russia-Ukraine Crisis) ತಮಣಿ ಆಗುತ್ತಾ ಇದ್ದಂತೆ ಹಾಗೂ ಎರಡೂ ದೇಶಗಳ ಮಧ್ಯೆ ಶಾಂತಿ ಮಾತುಕತೆಯು ಪಾಸಿಟಿವ್ ಆದಂಥ ಫಲಿತಾಂಶ ತೋರಿದ ಹಿನ್ನೆಲೆಯಲ್ಲಿ ಖೀವ್ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ನಿರ್ಧರಿಸುವುದರೊಂದಿಗೆ ಈ ಏರಿಕೆಗೆ ಕಾರಣ ಆಯಿತು. ಅದರ ಫಲಿತಾಂಶವಾಗಿ ತೈಲದ ಬೆಲೆ ಬ್ಯಾರೆಲ್ಗೆ 105 ಅಮೆರಿಕನ್ ಡಾಲರ್ ಆಯಿತು. ಇದರಿಂದ ಭಾರತದಂಥ ನಿವ್ವಳ ತೈಲ ಆಮದುದಾರ ದೇಶಗಳಿಗೆ ದೊಡ್ಡ ನಿರಾಳ ಆದಂತಾಗಿದೆ. ಭಾರತದ ಈಕ್ವಿಟಿಯಲ್ಲಿ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮತ್ತು ಖರೀದಿ ಆಸಕ್ತಿ ತೋರಿದ್ದಾರೆ. ಇದಕ್ಕೂ ಮುನ್ನ ಹಣಕಾಸು ವರ್ಷದ ದ್ವಿತೀಯಾರ್ಧದಕ್ಕು 2.3 ಲಕ್ಷ ಕೋಟಿ ರೂಪಾಯಿಯಷ್ಟು ಮಾರಾಟ ಮಾಡಿದ್ದರು. ಅವರಿಂದಲೂ ಬೆಂಬಲ ಕಂಡುಬಂದಿದೆ.
ಕಳೆದ ವಾರದಲ್ಲಿ ವಿದೇಶೀ ಸಾಂಸ್ಥಿಕ ಹೂಡಿಕೆದಾರರು 5,590 ಕೋಟಿ ರೂಪಾಯಿಗೂ ಹೆಚ್ಚು ಖರೀದಿ ಮಾಡಿದ್ದಾರೆ. ಈಚಿನ ಇಳಿಕೆ ನಂತರ ಮಾರುಕಟ್ಟೆ ಸೂಕ್ತವಾದ ಮೌಲ್ಯಮಾಪನ ಆಗಿದೆ ಮತ್ತು ಫೆಡರಲ್ ರಿಸರ್ವ್ನಿಂದ ಭವಿಷ್ಯದ ದರ ಏರಿಕೆ ಬಗ್ಗೆ ಸ್ಪಷ್ಟ ದಿಕ್ಕು ದೊರೆತಿದೆ ಎಂಬ ಕಾರಣಗಳಿಗೆ ಎಫ್ಐಐ ಹರಿವು ಉತ್ತಮಗೊಂಡಿರಬಹುದು. ಬಿಎಸ್ಇ ಸೆನ್ಸೆಕ್ಸ್ 1335 ಪಾಯಿಂಟ್ಸ್ ಅಥವಾ ಶೇ 2.25ರಷ್ಟು ಮೇಲೇರಿ 60,611 ಪಾಯಿಂಟ್ಸ್ನಲ್ಲಿ ಸೋಮವಾರ ದಿನಾಂತ್ಯ ಕಂಡರೆ, ನಿಪ್ಟಿ 50 ಸೂಚ್ಯಂಕವು 382.95 ಪಾಯಿಂಟ್ಸ್ ಅಥವಾ ಶೇ 2.17ರಷ್ಟು ಹೆಚ್ಚಳವಾಗಿ, 18053.40 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿದೆ.
ಹೂಡಿಕೆದಾರರ ಸಂಪತ್ತು ಬಿಎಸ್ಇ ಮಾರುಕಟ್ಟೆ ಬಂಡವಾಳ ಮೌಲ್ಯದ ಮೂಲಕ 3.50 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಅಂದಹಾಗೆ ಎಚ್ಡಿಎಫ್ಸಿ-ಎಚ್ಡಿಎಫ್ಸಿ ಬ್ಯಾಂಕ್ ವಿಲೀನ ಬಗ್ಗೆ ಘೋಷಣೆ ಮಾಡಲಾಗಿದೆ. ವಿಲೀನ ಆದ ನಂತರ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಮೂರನೇ ಅತಿದೊಡ್ಡ ಕಾರ್ಪೊರೇಟ್ ಆಗಲಿದೆ. ಅದು ಸಹ ಇಂದಿನ ಏರಿಕೆಗೆ ತನ್ನದೇ ಕೊಡುಗೆ ನೀಡಿದೆ. ಒಟ್ಟುಗೂಡಿ ಎರಡರಿಂದಲೂ ಬೆಂಚ್ಮಾರ್ಕ್ ಸೂಚ್ಯಂಕದಿಂದ ಅತಿದೊಡ್ಡ ವೇಯ್ಟೇಜ್ ಆಗಿದೆ. ವಿಲೀನ ಸುದ್ದಿ ಹೊರಬಿದ್ದ ನಂತರ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಅದ್ಭುತ ಗಳಿಕೆ ಕಂಡವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಎಚ್ಡಿಎಫ್ಸಿ ಬ್ಯಾಂಕ್ ಶೇ 10.01 ಎಚ್ಡಿಎಫ್ಸಿ ಶೇ 9.29 ಅದಾನಿ ಪೋರ್ಟ್ಸ್ ಶೇ 4.17 ಎಚ್ಡಿಎಫ್ಸಿ ಲೈಫ್ ಶೇ 3.90 ಕೊಟಕ್ ಮಹೀಂದ್ರಾ ಶೇ 3.34
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಇನ್ಫೋಸಿಸ್ ಶೇ -1.08 ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -0.22 ಟೈಟನ್ ಕಂಪೆನಿ ಶೇ -0.15
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ