Indian Economy: ಭಾರತದ ಆರ್ಥಿಕತೆ ಮರಳಿ ಹಳಿಗೆ ಬರುತ್ತಿದೆ ಎನ್ನುತ್ತಿವೆ ಈ ಅಂಕಿ- ಅಂಶಗಳು
ಭಾರತದಲ್ಲಿ ನಿರುದ್ಯೋಗ ದರ ಸುಧಾರಿಸಿದೆ. ಕೊವಿಡ್19 ಬಿಕ್ಕಟ್ಟಿನಿಂದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿ ಇಲ್ಲಿ ಸಂಖ್ಯೆಗಳು ಕಣ್ಣೆದುರು ಇದೆ ಎಂದು ಸಿಎಂಐಇ ಡೇಟಾ ತೋರಿಸುತ್ತಿದೆ.
ನಿರುದ್ಯೋಗ ದರ (Unemployment Rate) ದೇಶದಲ್ಲಿ ಕಡಿಮೆ ಆಗುತ್ತಿದ್ದು, ನಿಧಾನವಾಗಿ ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಸಿಎಂಐಇ ದತ್ತಾಂಶ ತೋರಿಸಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ತಿಂಗಳ ಟೈಮ್ ಸರಣಿಯ ಡೇಟಾ ಬಹಿರಂಗ ಪಡಿಸಿರುವಂತೆ, ಒಟ್ಟಾರೆಯಾಗಿ ಭಾರತದ ನಿರುದ್ಯೋಗ ದರ 2022ರ ಫೆಬ್ರವರಿಯಲ್ಲಿ ಶೇ 8.10 ಇದ್ದದ್ದು ಮಾರ್ಚ್ ಹೊತ್ತಿಗೆ ಶೇ 7.6ಕ್ಕೆ ಕುಸಿದಿತ್ತು. ಏಪ್ರಿಲ್ 2ನೇ ತಾರೀಕಿನಂದು ಅನುಪಾತವು ಇನ್ನಷ್ಟು ಕುಸಿದು, ಶೇ 7.5 ಆಗಿದ್ದು, ನಗರ ನಿರುದ್ಯೋಗ ದರ ಶೇ 8.5 ಮತ್ತು ಗ್ರಾಮೀಣ ಭಾಗದ ದರ ಶೇ 7.1 ಇತ್ತು. ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಅರ್ಥಶಾಸ್ತ್ರ ವಿಷಯದ ನಿವೃತ್ತ ಪ್ರಾಧ್ಯಾಪಕ ಅಭಿರುಪ್ ಸರ್ಕಾರ್ ಮಾತನಾಡಿ, ಆದರೂ ಒಟ್ಟಾರೆಯಾಗಿ ನಿರುದ್ಯೋಗ ದರ ಕುಸಿಯುತ್ತಿದ್ದು, ಆದರೆ ಭಾರತದಂಥ “ಬಡ” ದೇಶಗಳಿಗೆ ಈಗಲೂ ಇದು ಬಹಳ ಹೆಚ್ಚು ಎನ್ನುತ್ತಾರೆ.
ಅನುಪಾತದಲ್ಲಿ ಇಳಿಕೆಯು ಆರ್ಥಿಕತೆಯು ಹಳಿಗೆ ಹಿಂತಿರುಗುತ್ತಿದೆ ಎಂಬುದರ ಸಂಕೇತ, ಏಕೆಂದರೆ ಎರಡು ವರ್ಷಗಳ ಕಾಲ ಕೊವಿಡ್-19 ಹೊಡೆತ ಬಿದ್ದಿದೆ ಎಂದು ಅವರ ಹೇಳಿದ್ದಾರೆ. “ಆದರೆ ಈಗಲೂ ಬಡ ದೇಶವಾದ ಭಾರತಕ್ಕೆ ನಿರುದ್ಯೋಗ ದರವು ಹೆಚ್ಚೇ. ಬಡ ಜನ, ಅದರಲ್ಲೂ ಗ್ರಾಮೀಣ ಪ್ರದೇಶದ ಜನ ನಿರುದ್ಯೋಗವನ್ನು ಎದುರಿಸುವುದು ಕಷ್ಟ ಇದ್ದು, ಆದ್ದರಿಂದಲೇ ತಮ್ಮ ಪಾಲಿಗೆ ಯಾವ ಕೆಲಸ ಸಿಗುತ್ತಿದೆಯೋ ಅದನ್ನು ಮಾಡುತ್ತಿದ್ದಾರೆ,” ಎಂದು ಸರ್ಕಾರ್ ಹೇಳಿದ್ದಾರೆ.
ದತ್ತಾಂಶದ ಪ್ರಕಾರ, ಮಾರ್ಚ್ನಲ್ಲಿ ಶೇ 26.7ರೊಂದಿಗೆ ಹರ್ಯಾಣ ಅತಿ ಹೆಚ್ಚಿನ ನಿರುದ್ಯೋಗ ದರ ಇತ್ತು. ಆನಂತರದ ಸ್ಥಾನದಲ್ಲಿ ರಾಜಸ್ಥಾನ, ಜಮ್ಮು- ಕಾಶ್ಮೀರ್ ತಲಾ ಶೇ 25ರಷ್ಟಿದೆ. ಬಿಹಾರ ಶೇ 14.4, ತ್ರಿಪುರಾ ಶೇ 14.1 ಮತ್ತು ಪಶ್ಚಿಮ ಬಂಗಾಲ ಶೇ 5.6ರಷ್ಟಿತ್ತು. 2021ರ ಏಪ್ರಿಲ್ನಲ್ಲಿ ಒಟ್ಟಾರೆ ನಿರುದ್ಯೋಗ ದರ ಶೇ 7.97ರಷ್ಟಿತ್ತು. ಆ ನಂತರ ಕಳೆದ ವರ್ಷ ಮೇ ತಿಂಗಳಲ್ಲಿ ಶೇ 11.84ಕ್ಕೆ ಏರಿತ್ತು. ಕರ್ನಾಟಕ ಮತ್ತು ಗುಜರಾತ್ನಲ್ಲಿ 2022ರ ಮಾರ್ಚ್ನಲ್ಲಿ ಕನಿಷ್ಠ ನಿರುದ್ಯೋಗ ದರ ಶೇ 1.8ರಷ್ಟು ದಾಖಲಾಗಿದೆ.
ಇದನ್ನೂ ಓದಿ: Unemployment: ದೇಶದ ಎಂಟು ಭಾಗಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ; ವಿವಿಧ ರಾಜ್ಯಗಳಲ್ಲಿ ಎರಡಂಕಿ ಮುಟ್ಟಿದ ದರ