RR vs RCB Head to Head: ಆರ್​ಸಿಬಿ- ರಾಜಸ್ಥಾನ ಹಣಾಹಣಿ; ಇಬ್ಬರ ಮುಖಾಮುಖಿಯಲ್ಲಿ ಬೆಂಗಳೂರೇ ಬೆಸ್ಟ್

IPL 2022 RR vs RCB Head to Head: ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇದುವರೆಗೆ 25 ಪಂದ್ಯಗಳು ನಡೆದಿದ್ದು, ಈ ಪೈಕಿ 12 ಪಂದ್ಯಗಳನ್ನು ಬೆಂಗಳೂರು ಗೆದ್ದಿದೆ. 10 ಪಂದ್ಯಗಳನ್ನು ರಾಜಸ್ಥಾನ ವಶಪಡಿಸಿಕೊಂಡಿದೆ.

RR vs RCB Head to Head: ಆರ್​ಸಿಬಿ- ರಾಜಸ್ಥಾನ ಹಣಾಹಣಿ; ಇಬ್ಬರ ಮುಖಾಮುಖಿಯಲ್ಲಿ ಬೆಂಗಳೂರೇ ಬೆಸ್ಟ್
RR vs RCB
Follow us
TV9 Web
| Updated By: ಪೃಥ್ವಿಶಂಕರ

Updated on: Apr 04, 2022 | 6:45 PM

ಐಪಿಎಲ್ (IPL 2022) ನ 13 ನೇ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Rajasthan Royals vs Royal Challengers Bangalore) ನಡುವೆ ಪೈಪೋಟಿ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಪ್ರಸಕ್ತ ಋತುವಿನಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ತೋರುತ್ತಿವೆ. RCB ಯ ಬ್ಯಾಟಿಂಗ್ ತುಂಬಾ ಪ್ರಬಲವಾಗಿದ್ದರೂ, ರಾಜಸ್ಥಾನ್ ರಾಯಲ್ಸ್ (RR vs RCB) ಬೌಲಿಂಗ್ ವಿಭಾಗ ಅದ್ಭುತವಾಗಿದೆ. ರಾಜಸ್ಥಾನ ಇಲ್ಲಿಯವರೆಗೆ ಎರಡು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಬೆಂಗಳೂರು ಒಂದು ಪಂದ್ಯವನ್ನು ಗೆದ್ದು ಒಂದು ಸೋತಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದರೆ, ನಂತರ ಈ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು 3 ವಿಕೆಟ್‌ಗಳಿಂದ ಸೋಲಿಸಿತು. ರಾಜಸ್ಥಾನ್ ರಾಯಲ್ಸ್ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.

ಈಗ ಪ್ರಶ್ನೆ ಏನೆಂದರೆ ಬೆಂಗಳೂರು ಮತ್ತು ರಾಜಸ್ತಾನದ ನಡುವೆ ಯಾರ ಮೇಲುಗೈ? ಅಂಕಿಅಂಶಗಳ ಬಗ್ಗೆ ಮಾತನಾಡುವುದಾದರೆ, ಬೆಂಗಳೂರು ತಂಡವು ರಾಜಸ್ಥಾನದ ವಿರುದ್ಧ ಪ್ರಾಬಲ್ಯ ಹೊಂದಿದೆ. ಆದರೆ ಈ ಗೆಲುವಿನ ಅಂತರವು ಕೇವಲ 2 ಪಂದ್ಯಗಳು ಮಾತ್ರ. ಕಳೆದ ಸೀಸನ್‌ನಲ್ಲಿ ಇಬ್ಬರ ನಡುವಿನ ಪೈಪೋಟಿ ಹೇಗಿತ್ತು ಮತ್ತು ಐದು ಪಂದ್ಯಗಳಲ್ಲಿ ಯಾವ ತಂಡ ಎಷ್ಟು ಪಂದ್ಯಗಳನ್ನು ಗೆದ್ದಿದೆ ಎಂಬುದನ್ನು ಮುಂದೆ ತಿಳಿಯಿರಿ?

ರಾಜಸ್ಥಾನ್ ರಾಯಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇದುವರೆಗೆ 25 ಪಂದ್ಯಗಳು ನಡೆದಿದ್ದು, ಈ ಪೈಕಿ 12 ಪಂದ್ಯಗಳನ್ನು ಬೆಂಗಳೂರು ಗೆದ್ದಿದೆ. 10 ಪಂದ್ಯಗಳನ್ನು ರಾಜಸ್ಥಾನ ವಶಪಡಿಸಿಕೊಂಡಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳು ಡ್ರಾಗೊಂಡಿದ್ದವು. ಕಳೆದ ಎರಡು ಸೀಸನ್‌ಗಳಲ್ಲಿ ರಾಜಸ್ಥಾನ ತಂಡಕ್ಕೆ ಒಂದೇ ಒಂದು ಪಂದ್ಯದಲ್ಲೂ ಬೆಂಗಳೂರು ತಂಡವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ.

ಕಳೆದ ಎರಡು ಸೀಸನ್‌ಗಳಲ್ಲಿ ಬೆಂಗಳೂರು ಮೇಲುಗೈ ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಕಳೆದ ವರ್ಷ ಬೆಂಗಳೂರು ತಂಡ ಮೊದಲು ರಾಜಸ್ಥಾನವನ್ನು 10 ವಿಕೆಟ್‌ಗಳಿಂದ ಸೋಲಿಸಿ ನಂತರ ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದಿತ್ತು. 2020ರಲ್ಲೂ ಬೆಂಗಳೂರು ರಾಜಸ್ಥಾನವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು. ಇದಾದ ಬಳಿಕ ಮತ್ತೆ ಬೆಂಗಳೂರು ತಂಡ 7 ವಿಕೆಟ್‌ಗಳ ಜಯ ಸಾಧಿಸಿತು. ಐಪಿಎಲ್ 2019 ರಲ್ಲಿ, ರಾಜಸ್ಥಾನ, ಬೆಂಗಳೂರನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಅಂದರೆ ಕಳೆದ ಐದು ಪಂದ್ಯಗಳಲ್ಲಿ ರಾಜಸ್ಥಾನ ಕೇವಲ ಒಂದು ಪಂದ್ಯವನ್ನು ಗೆದ್ದಿದೆ ಮತ್ತು ಬೆಂಗಳೂರು ನಾಲ್ಕರಲ್ಲಿ ಗೆದ್ದಿದೆ. ಆದರೆ, ಸದ್ಯ ರಾಜಸ್ಥಾನ್ ರಾಯಲ್ಸ್ ತೋರುತ್ತಿರುವ ಲಯವನ್ನು ನೋಡಿದರೆ ಬೆಂಗಳೂರು ತಂಡವನ್ನು ಸೋಲಿಸಲು ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರಾರ್, ಫಿನ್ ಜಾರ್ಫ್ ಅಲೆನ್, ಶೆರ್ಫಾನ್, ಸುಯಶ್ ಪ್ರಭುದೇಸಾಯಿ, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್, ಸಿದ್ಧಾರ್ಥ್ ಕೌಲ್.

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಶುಭಂ ಅಗರ್ವಾಲ್, ಧ್ರುವ್ ಜುರೆಲ್, ಕುಲದೀಪ್ ಯಾದವ್, ಕುಲದೀಪ್ ಸೇನ್, ತೇಜಸ್ ಬರೋಕಾ, ಅನುನಾ ಸಿಂಗ್, ಕೆಸಿ ಕಾರಿಯಪ್ಪ, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ರಾಸಿ ವ್ಯಾನ್ ಡೆರ್ ಡುಸ್ಸೆನ್, ನಾಥನ್ ಕೌಲ್ಟರ್ ನೈಲ್, ಜಿಮ್ಮಿಲ್, ಜಿಮ್ಮಿ ಮಿಚೆಲ್, ಕರುಣ್ ನಾಯರ್, ಒಬೆದ್ ಮೆಕಾಯ್, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್.

ಇದನ್ನೂ ಓದಿ:RR vs RCB: ಐಪಿಎಲ್​ನ ಬಲಿಷ್ಠ ತಂಡಗಳ ಮುಖಾಮುಖಿ; ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್-11