RR vs RCB: ಐಪಿಎಲ್​ನ ಬಲಿಷ್ಠ ತಂಡಗಳ ಮುಖಾಮುಖಿ; ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್-11

RR vs RCB Playing XI IPL 2022: ಐಪಿಎಲ್ 2022 ರ 15ನೇ ಆವೃತ್ತಿಯ ಅತ್ಯಂತ ಬಲಿಷ್ಠ ತಂಡಗಳೆಂದು ಪರಿಗಣಿಸಲಾದ ಎರಡು ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

RR vs RCB: ಐಪಿಎಲ್​ನ ಬಲಿಷ್ಠ ತಂಡಗಳ ಮುಖಾಮುಖಿ; ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್-11
RR vs RCB
Follow us
TV9 Web
| Updated By: ಪೃಥ್ವಿಶಂಕರ

Updated on: Apr 04, 2022 | 5:05 PM

ಐಪಿಎಲ್ 2022 (IPL 2022) ರ 15ನೇ ಆವೃತ್ತಿಯ ಅತ್ಯಂತ ಬಲಿಷ್ಠ ತಂಡಗಳೆಂದು ಪರಿಗಣಿಸಲಾದ ಎರಡು ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ರಾಜಸ್ಥಾನ ತಂಡ ಎರಡು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ನಂಬರ್ ಒನ್ ಸ್ಥಾನದಲ್ಲಿದ್ದರೆ, ಆರ್‌ಸಿಬಿ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತು ಏಳನೇ ಸ್ಥಾನದಲ್ಲಿದೆ. ರಾಜಸ್ಥಾನ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಅದೇ ಹೊತ್ತಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ಬೆಂಗಳೂರು ತಂಡ ಈ ಪಂದ್ಯವನ್ನು ಪ್ರವೇಶಿಸುತ್ತಿದೆ. ಮುಂಬೈ ವಿರುದ್ಧ ರಾಜಸ್ಥಾನ ಪ್ರದರ್ಶನ ನೀಡಿದ ರೀತಿ ರಾಜಸ್ಥಾನದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಮತ್ತೊಂದೆಡೆ, ನಾವು ಬೆಂಗಳೂರಿನ ಬಗ್ಗೆ ಮಾತನಾಡುವುದಾದರೆ, ಈ ತಂಡವು ಎರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಬಲ ಸ್ಕೋರ್ ಮಾಡಿದ ನಂತರವೂ ಈ ತಂಡವು ಸೋಲನುಭವಿಸಿತು. ಆದರೆ ಅದು ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾವನ್ನು ಸೋಲಿಸಿತು.

ರಾಜಸ್ಥಾನ ತಂಡದಲ್ಲಿ ಬದಲಾವಣೆ? ನಾವು ರಾಜಸ್ಥಾನದ ಬಗ್ಗೆ ಮಾತನಾಡಿದರೆ, ತಂಡದ ಬ್ಯಾಟಿಂಗ್ ತುಂಬಾ ಪ್ರಬಲವಾಗಿದೆ. ಮುಂಬೈ ವಿರುದ್ಧ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿದ್ದರು. ದೇವದತ್ತ ಪಡಿಕ್ಕಲ್, ನಾಯಕ ಸಂಜು ಸ್ಯಾಮ್ಸನ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದೇ ಸಮಯದಲ್ಲಿ, ಶಿಮ್ರಾನ್ ಹೆಟ್ಮೆಯರ್ ಕಳೆದ ಎರಡು ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲಿ ಬಿರುಗಾಳಿಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಪಂದ್ಯದಲ್ಲಿ ರಾಜಸ್ಥಾನ ಬದಲಾವಣೆ ಮಾಡಬಹುದು. ಇದುವರೆಗೆ ಕೇವಲ ಮೂವರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಈ ಪಂದ್ಯದಲ್ಲಿ, ರಿಯಾನ್ ಪರಾಗ್‌ಗೆ ಕೊಕ್ ನೀಡಿ ರಾಸಿ ವಾನ್ ಡೆರ್ ಡುಸ್ಸೆನ್‌ಗೆ ಅವಕಾಶ ನೀಡಬಹುದು. ಅಲ್ಲದೆ ಬೌಲಿಂಗ್ ಬಲಿಷ್ಠವಾಗಿದ್ದರೂ ಬದಲಾಗುವ ಸಾಧ್ಯತೆ ಇಲ್ಲ.

ಬೆಂಗಳೂರು ತಂಡದ ಕತೆಯೇನು? ಗ್ಲೆನ್ ಮ್ಯಾಕ್ಸ್‌ವೆಲ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ ಆದರೆ ಅವರ ಲಭ್ಯತೆಯ ಬಗ್ಗೆ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಮ್ಯಾಕ್ಸ್‌ವೆಲ್ ಆಡಿದರೆ, ಶೆರ್ಫೇನ್ ರುದರ್‌ಫೋರ್ಡ್ ಬೆಂಚ್ ಕಾಯಬೇಕಾಗಬಹುದು. ಉಳಿದಂತೆ ಈ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಇಲ್ಲ.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್-11 ಹೀಗಿವೆ ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಾಸಿ ವಾನ್ ಡೆರ್ ಡುಸ್ಸೆನ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್ (WK), ಶೆರ್ಫೇನ್ ರುದರ್‌ಫೋರ್ಡ್ / ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಇದನ್ನೂ ಓದಿ:IPL 2022: ಕಳೆದ ಸೀಸನ್‌ನ ಸೂಪರ್​​ಸ್ಟಾರ್​ಗಳು ಈ ಆವೃತ್ತಿಯ ಮೊದಲ 3 ಪಂದ್ಯಗಳಲ್ಲಿ ಟುಸ್​ ಪಟಾಕಿ