IPL 2022: ಐಪಿಎಲ್ ಪ್ಲೇ ಆಫ್ ಪಂದ್ಯಗಳಿಗೆ ಸ್ಟೇಡಿಯಂ ಫಿಕ್ಸ್

IPL 2022: ಹೊಸ ಎರಡು ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ಹೋಮ್​ ಗ್ರೌಂಡ್​ನಲ್ಲಿ ಪ್ಲೇ ಆಫ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.

IPL 2022: ಐಪಿಎಲ್ ಪ್ಲೇ ಆಫ್ ಪಂದ್ಯಗಳಿಗೆ ಸ್ಟೇಡಿಯಂ ಫಿಕ್ಸ್
IPL 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 04, 2022 | 5:19 PM

ಈ ಬಾರಿಯ ಐಪಿಎಲ್​ನ ಲೀಗ್ ಪಂದ್ಯಗಳು ಮಹಾರಾಷ್ಟ್ರದ ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಯುತ್ತಿದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ಹಾಗೂ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿನ 15 ಪಂದ್ಯಗಳು ನಡೆಯಲಿದೆ. ಇದಾದ ಬಳಿಕ 4 ಪ್ಲೇ ಆಫ್ ಪಂದ್ಯಗಳು ಜರುಗಲಿದೆ. ಆದರೆ ಇದುವರೆಗೆ ಪ್ಲೇಆಫ್​ನ 4 ಪಂದ್ಯಗಳು ಎಲ್ಲಿ ಆಯೋಜಿಸಲಿದೆ ಎಂಬುದರ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಪ್ಲೇ ಆಫ್ ಪಂದ್ಯಗಳನ್ನು ಲಕ್ನೋ ಮತ್ತು ಅಹಮದಾಬಾದ್‌ ಸ್ಟೇಡಿಯಂಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.

ಹೊಸ ಎರಡು ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ಹೋಮ್​ ಗ್ರೌಂಡ್​ನಲ್ಲಿ ಪ್ಲೇ ಆಫ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದ್ದು, ಹೀಗಾಗಿ ಲಕ್ನೋ ಮತ್ತು ಅಹಮದಾಬಾದ್​ನ ಸ್ಟೇಡಿಯಂಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸಲಾಗಿದೆ.

ಅದರಂತೆ ಮೊದಲ ಕ್ವಾಲಿಫೈಯರ್ ಮತ್ತು ಮೊದಲ ಎಲಿಮಿನೇಟರ್ ಅನ್ನು ಲಕ್ನೋದಲ್ಲಿ ಆಡಲಾಗುತ್ತದೆ. ಎರಡನೇ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯವನ್ನು ಅಹಮದಾಬಾದ್‌ನಲ್ಲಿ ನಡೆಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಈ ಎರಡು ಸ್ಟೇಡಿಯಂಗಳಲ್ಲಿ ಐಪಿಎಲ್ ಪ್ಲೇಆಫ್ ಪಂದ್ಯಗಳು ನಡೆಯುವುದು ಬಹುತೇಕ ಖಚಿತ ಎನ್ನಬಹುದು.

ಐಪಿಎಲ್ ಉಳಿದ​ ಪಂದ್ಯಗಳ ವೇಳಾಪಟ್ಟಿ:

12. ಏಪ್ರಿಲ್ 4, ರಾತ್ರಿ 7.30, ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್‌ಜೈಂಟ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

13. ಏಪ್ರಿಲ್ 5, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಾಂಖೆಡೆ ಸ್ಟೇಡಿಯಂ)

14. ಏಪ್ರಿಲ್ 6, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ (ಎಂಸಿಎ ಸ್ಟೇಡಿಯಂ ಪುಣೆ)

15. ಏಪ್ರಿಲ್ 7, ರಾತ್ರಿ 7.30, ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

16. ಏಪ್ರಿಲ್ 8, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ (ಬ್ರಬೋರ್ನ್ ಸ್ಟೇಡಿಯಂ)

17. ಏಪ್ರಿಲ್ 9, ಮಧ್ಯಾಹ್ನ 3.30, ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಡಿವೈ ಪಾಟೀಲ್ ಸ್ಟೇಡಿಯಂ)

18. ಏಪ್ರಿಲ್ 9, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ (ಎಂಸಿಎ ಸ್ಟೇಡಿಯಂ ಪುಣೆ)

19. ಏಪ್ರಿಲ್ 10, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಬ್ರಬೋರ್ನ್ ಸ್ಟೇಡಿಯಂ)

20. ಏಪ್ರಿಲ್ 10, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ವಾಂಖೆಡೆ ಸ್ಟೇಡಿಯಂ)

21. ಏಪ್ರಿಲ್ 11, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

22. ಏಪ್ರಿಲ್ 12, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಡಿವೈ ಪಾಟೀಲ್ ಸ್ಟೇಡಿಯಂ)

23. ಏಪ್ರಿಲ್ 13, ರಾತ್ರಿ 7.30, ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ ಪುಣೆ)

24. ಏಪ್ರಿಲ್ 14, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಗುಜರಾತ್ ಟೈಟಾನ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

25. ಏಪ್ರಿಲ್ 15, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಬ್ರಬೋರ್ನ್ ಸ್ಟೇಡಿಯಂ)

26. ಏಪ್ರಿಲ್ 16, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಬ್ರಬೋರ್ನ್ ಸ್ಟೇಡಿಯಂ)

27. ಏಪ್ರಿಲ್ 16, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಾಂಖೆಡೆ ಸ್ಟೇಡಿಯಂ)

28. ಏಪ್ರಿಲ್ 17, ಮಧ್ಯಾಹ್ನ 3.30, ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಡಿವೈ ಪಾಟೀಲ್ ಸ್ಟೇಡಿಯಂ)

29. ಏಪ್ರಿಲ್ 17, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

30. ಏಪ್ರಿಲ್ 18, ರಾತ್ರಿ 7.30, ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಬ್ರಬೋರ್ನ್ ಸ್ಟೇಡಿಯಂ)

31. ಏಪ್ರಿಲ್ 19, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಡಿವೈ ಪಾಟೀಲ್ ಸ್ಟೇಡಿಯಂ)

32. ಏಪ್ರಿಲ್ 20, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

33. ಏಪ್ರಿಲ್ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

34. ಏಪ್ರಿಲ್ 22, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

35. ಏಪ್ರಿಲ್ 23, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

36. ಏಪ್ರಿಲ್ 23, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಬ್ರಬೋರ್ನ್ ಸ್ಟೇಡಿಯಂ

37. ಏಪ್ರಿಲ್ 24, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ (ವಾಂಖೆಡೆ ಸ್ಟೇಡಿಯಂ)

38. ಏಪ್ರಿಲ್ 25, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ವಾಂಖೆಡೆ ಸ್ಟೇಡಿಯಂ)

39. 26 ಏಪ್ರಿಲ್ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

40. ಏಪ್ರಿಲ್ 27, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಸನ್ ರೈಸರ್ಸ್ ಹೈದರಾಬಾದ್ (ವಾಂಖೆಡೆ ಸ್ಟೇಡಿಯಂ)

41. ಏಪ್ರಿಲ್ 28, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ವಾಂಖೆಡೆ ಸ್ಟೇಡಿಯಂ)

42. ಏಪ್ರಿಲ್ 29, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

43. ಏಪ್ರಿಲ್ 30, ಮಧ್ಯಾಹ್ನ 3.30, ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬ್ರಬೋರ್ನ್ ಸ್ಟೇಡಿಯಂ)

44. ಏಪ್ರಿಲ್ 30, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

45. ಮೇ 1, ಮಧ್ಯಾಹ್ನ 3.30, ಡೆಲ್ಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ವಾಂಖೆಡೆ ಸ್ಟೇಡಿಯಂ)

46. ​​ಮೇ 1, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

47. ಮೇ 2, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್ (ವಾಂಖೆಡೆ ಸ್ಟೇಡಿಯಂ)

48. ಮೇ 3, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

49. ಮೇ 4, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

50. ಮೇ 5, ಸಂಜೆ 7.30, ಡೆಲ್ಲಿ ಕ್ಯಾಪಿಟಲ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಬ್ರಬೋರ್ನ್ ಸ್ಟೇಡಿಯಂ)

51. ಮೇ 6, ಸಂಜೆ 7.30, ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್ (ಬ್ರಬೋರ್ನ್ ಸ್ಟೇಡಿಯಂ)

52. ಮೇ 7, ಸಂಜೆ 3.30 ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ (ವಾಂಖೆಡೆ ಸ್ಟೇಡಿಯಂ)

53. ಮೇ 7, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

54. ಮೇ 8, ಮಧ್ಯಾಹ್ಯ 3.30, ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಾಂಖೆಡೆ ಸ್ಟೇಡಿಯಂ)

55. ಮೇ 8, ಸಂಜೆ 7.30, ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

56. ಮೇ 9, ಸಂಜೆ 7.30, ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

57. ಮೇ 10, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್ (ಎಂಸಿಎ ಸ್ಟೇಡಿಯಂ, ಪುಣೆ)

58. ಮೇ 11, ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

59. ಮೇ 12 ಮೇ 7.30 PM ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ (ವಾಂಖೆಡೆ ಸ್ಟೇಡಿಯಂ)

50. ಮೇ 13, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ (ಬ್ರಬೋರ್ನ್ ಸ್ಟೇಡಿಯಂ)

61. ಮೇ 14, ಸಂಜೆ 7.30 ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್ (ಎಂಸಿಎ ಸ್ಟೇಡಿಯಂ, ಪುಣೆ)

62. ಮೇ 15, ಮಧ್ಯಾಹ್ಯ 3.30 ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ (ವಾಂಖೆಡೆ ಸ್ಟೇಡಿಯಂ)

63. ಮೇ 15, ಸಂಜೆ 7.30 ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಬ್ರಬೋರ್ನ್ ಸ್ಟೇಡಿಯಂ)

64. ಮೇ 16, ಸಂಜೆ 7.30, ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

65. ಮೇ 17, ಸಂಜೆ 7.30 ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್ (ವಾಂಖೆಡೆ ಸ್ಟೇಡಿಯಂ)

66. ಮೇ 18, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಡಿವೈ ಪಾಟೀಲ್ ಸ್ಟೇಡಿಯಂ)

67. ಮೇ 19, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ (ವಾಂಖೆಡೆ ಸ್ಟೇಡಿಯಂ)

68. ಮೇ 20. ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಬ್ರಬೋರ್ನ್ ಸ್ಟೇಡಿಯಂ)

69. ಮೇ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ವಾಂಖೆಡೆ ಸ್ಟೇಡಿಯಂ)

70. ಮೇ 22, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ (ವಾಂಖೆಡೆ ಸ್ಟೇಡಿಯಂ)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ