IPL 2022: ಕಳೆದ ಸೀಸನ್‌ನ ಸೂಪರ್​​ಸ್ಟಾರ್​ಗಳು ಈ ಆವೃತ್ತಿಯ ಮೊದಲ 3 ಪಂದ್ಯಗಳಲ್ಲಿ ಟುಸ್​ ಪಟಾಕಿ

IPL 2022: ಐಪಿಎಲ್ 15ನೇ ಸೀಸನ್ ಈಗಷ್ಟೆ ಆರಂಭವಾಗಿದೆ. ಇಲ್ಲಿಯವರೆಗೆ ಎಲ್ಲಾ ತಂಡಗಳು ಮೊದಲ 3 ಪಂದ್ಯಗಳನ್ನು ಮಾತ್ರ ಆಡಿವೆ. ಆದರೆ, ಈ 3 ಪಂದ್ಯಗಳಲ್ಲಿ ಹಲವು ಸ್ಟಾರ್ ಆಟಗಾರರು ನೆಲಕಚ್ಚಿದ್ದಾರೆ. ಇವರಲ್ಲಿ 4 ಮಂದಿ ಐಪಿಎಲ್ 2021ರಲ್ಲಿ ಮಿಂಚು ಹರಿಸಿದ ಸೂಪರ್​ಸ್ಟಾರ್​ಗಳು ಇದ್ದಾರೆ.

ಪೃಥ್ವಿಶಂಕರ
|

Updated on:Apr 04, 2022 | 3:24 PM

ಐಪಿಎಲ್ ಎಂದರೆ ಯಾರಾದರೂ ಹೀರೋ ಆಗುವ ಮತ್ತು ಯಾರಾದರೂ ಶೂನ್ಯವಾಗುವ ಕ್ರಿಕೆಟ್ ಮೈದಾನ. ಕೆಲವರು ಇಲ್ಲಿ ಸ್ಟಾರ್ ಆಗುತ್ತಾರೆ ಮತ್ತು ಕೆಲವರು ನಿಷ್ಪ್ರಯೋಜಕರಾಗುತ್ತಾರೆ. ಐಪಿಎಲ್ 15ನೇ ಸೀಸನ್ ಈಗಷ್ಟೆ ಆರಂಭವಾಗಿದೆ. ಇಲ್ಲಿಯವರೆಗೆ ಎಲ್ಲಾ ತಂಡಗಳು ಮೊದಲ 3 ಪಂದ್ಯಗಳನ್ನು ಮಾತ್ರ ಆಡಿವೆ. ಆದರೆ, ಈ 3 ಪಂದ್ಯಗಳಲ್ಲಿ ಹಲವು ಸ್ಟಾರ್ ಆಟಗಾರರು ನೆಲಕಚ್ಚಿದ್ದಾರೆ. ಇವರಲ್ಲಿ 4 ಮಂದಿ ಐಪಿಎಲ್ 2021ರಲ್ಲಿ ಮಿಂಚು ಹರಿಸಿದ ಸೂಪರ್​ಸ್ಟಾರ್​ಗಳು ಇದ್ದಾರೆ. ಆದರೆ ಈ 15ನೇ ಆವೃತ್ತಿಯ ಮೊದಲ 3 ಪಂದ್ಯಗಳಲ್ಲಿ ಆ ಸೂಪರ್​ಸ್ಟಾರ್​ಗಳು ಫ್ಲಾಪ್ ಸ್ಟಾರ್​ಗಳಾಗಿದ್ದಾರೆ.

1 / 5
ರುತುರಾಜ್ ಗಾಯಕ್ವಾಡ್: ರನ್ ಗಳಿಸಿದ ವಿಷಯದಲ್ಲಿ ಐಪಿಎಲ್ 2021 ರ ಸೂಪರ್ ಸ್ಟಾರ್ ಆಗಿದ್ದ ರುತುರಾಜ್, CSK ಪರ 16 ಪಂದ್ಯಗಳಲ್ಲಿ 635 ರನ್ ಗಳಿಸಿದರು. ಕಳೆದ ಆವೃತ್ತಿಯಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದರು. ಜೊತೆಗೆ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು. ಆದರೆ ಐಪಿಎಲ್ 2022 ರಲ್ಲಿ ಅವರ ಕಥೆ ಇದಕ್ಕೆ ವಿರುದ್ಧವಾಗಿದೆ. ಈ ಆವೃತ್ತಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ 3 ರನ್ ಕೂಡ ಗಳಿಸಿಲ್ಲ. ಐಪಿಎಲ್ 2022 ರಲ್ಲಿ ಸಿಎಸ್‌ಕೆ ಪ್ರದರ್ಶನವು ಅತ್ಯಂತ ಕಳಪೆಯಾಗಿದ್ದರೆ, ರಿತುರಾಜ್ ಅವರ ಬ್ಯಾಟ್ ವೈಫಲ್ಯವು ದೊಡ್ಡ ಕಾರಣವಾಗಿದೆ.

2 / 5
ಶಾರುಖ್ ಖಾನ್: 2021 ರಲ್ಲಿ ಶಾರುಖ್ ಐಪಿಎಲ್ ಮೈದಾನಕ್ಕೆ ಬಂದಾಗ ಎಲ್ಲರ ಕಣ್ಣು ಅವರ ಮೇಲಿತ್ತು. ಶಾರುಖ್ ಖಾನ್ ಪಂಜಾಬ್ ಕಿಂಗ್ಸ್‌ಗಾಗಿ ಒಂದರ ನಂತರ ಒಂದು ಹಿಟ್ ಇನ್ನಿಂಗ್ಸ್ ಆಡುತ್ತಿದ್ದರು. ಐಪಿಎಲ್ 2021 ರಲ್ಲಿ, ಅವರು 11 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ 134.21 ಸ್ಟ್ರೈಕ್ ರೇಟ್‌ನಲ್ಲಿ 153 ರನ್ ಗಳಿಸಿದರು. ಈ ವೇಳೆ ಅವರು 9 ಬೌಂಡರಿ ಹಾಗೂ 10 ಸಿಕ್ಸರ್‌ಗಳನ್ನು ಬಾರಿಸಿದರು. ವಿಶೇಷವೆಂದರೆ ಶಾರುಖ್ ಖಾನ್ ಕಳೆದ ಋತುವಿನಲ್ಲಿ ಯಾವುದೇ ವಿಶೇಷವಾದ ದೊಡ್ಡ ಇನ್ನಿಂಗ್ಸ್ ಆಡದೆ, ಚಿಕ್ಕದಾದರೂ ಅಂತಹ ಇನಿಂಗ್ಸ್ ಆಡಿದ್ದು ತಂಡದ ಗೆಲುವಿಗೆ ಉಪಯುಕ್ತವಾಗಿತ್ತು. ಆದರೆ ಐಪಿಎಲ್ 2022 ರಲ್ಲಿ ಅವರ ತಂಡವು ಗೆಲ್ಲುತ್ತಿದೆ ಆದರೆ ಅವರ ಪ್ರದರ್ಶನವು ಅತ್ಯಲ್ಪವಾಗಿದೆ. ಕಳೆದ ಋತುವಿನ ಸ್ಪರ್ಶ ಅವರ ಬ್ಯಾಟಿಂಗ್‌ನಿಂದ ಕಾಣೆಯಾಗಿದೆ. ಮೊದಲ 3 ಪಂದ್ಯಗಳಲ್ಲಿ ಶಾರುಖ್ ಖಾನ್ 83.33 ಸ್ಟ್ರೈಕ್ ರೇಟ್‌ನಲ್ಲಿ 30 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

3 / 5
ವೆಂಕಟೇಶ್ ಅಯ್ಯರ್: ಐಪಿಎಲ್ 2021 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಆಡಿದ 10 ಪಂದ್ಯಗಳಲ್ಲಿ 41.11 ಸರಾಸರಿ ಮತ್ತು 128.47 ಸ್ಟ್ರೈಕ್ ರೇಟ್‌ನಲ್ಲಿ 370 ರನ್ ಗಳಿಸಿದರು. ಈ ಅವಧಿಯಲ್ಲಿ ಅವರು 4 ಅರ್ಧಶತಕಗಳನ್ನು ಗಳಿಸಿದರು. ಆದರೆ ಐಪಿಎಲ್ 2022 ರಲ್ಲಿ, ಅವರ ಬ್ಯಾಟಿಂಗ್ ಹೊಳಪು ಕಳೆದುಕೊಂಡಿದೆ. ಇದುವರೆಗೆ ಆಡಿದ 3 ಪಂದ್ಯಗಳಲ್ಲಿ 78.97 ಸ್ಟ್ರೈಕ್ ರೇಟ್‌ನೊಂದಿಗೆ 29 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

4 / 5
ಅವೇಶ್ ಖಾನ್: ಐಪಿಎಲ್ 2022 ರಲ್ಲಿ ತಂಡ ಬದಲಾದ ತಕ್ಷಣ ಅವೇಶ್ ಖಾನ್ ಆಟವೂ ಬದಲಾಗಿದೆ. ಕಳೆದ ಸೀಸನ್‌ನಂತೆ ಅವರು ವಿಕೆಟ್‌ಗಳನ್ನು ಪಡೆಯುತ್ತಿಲ್ಲ. ಐಪಿಎಲ್ 2021 ರಲ್ಲಿ, ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದಾಗ, ಅವರು 16 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದರು. ಈ ಆವೃತ್ತಿಯಲ್ಲಿ ಅಂದರೆ ಐಪಿಎಲ್ 2022 ರಲ್ಲಿ, ಲಕ್ನೋ ಸೂಪರ್ ಜೈಂಟ್ಸ್‌ ತಂಡದಲ್ಲಿ ಇದುವರೆಗೆ 2 ಪಂದ್ಯಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ.

5 / 5

Published On - 3:03 pm, Mon, 4 April 22

Follow us
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್