LIC IPO Allotment Status: ಎಲ್​ಐಸಿ ಐಪಿಒ ಹಂಚಿಕೆ ಮೇ 12ಕ್ಕೆ ಸಾಧ್ಯತೆ; ಆನ್​ಲೈನ್​ನಲ್ಲಿ ಸ್ಥಿತಿ ತಿಳಿಯಲು ಹೀಗೆ ಮಾಡಿ

ಎಲ್​ಐಸಿ ಐಪಿಒದಲ್ಲಿ ಷೇರು ಹಂಚಿಕೆ ಆಗಿದೆಯೇ ಎಂಬುದನ್ನು ಆನ್​ಲೈನ್ ಮೂಲಕ ಪರಿಶೀಲಿಸುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ.

LIC IPO Allotment Status: ಎಲ್​ಐಸಿ ಐಪಿಒ ಹಂಚಿಕೆ ಮೇ 12ಕ್ಕೆ ಸಾಧ್ಯತೆ; ಆನ್​ಲೈನ್​ನಲ್ಲಿ ಸ್ಥಿತಿ ತಿಳಿಯಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on:May 12, 2022 | 11:11 AM

ಎಲ್​ಐಸಿ ಇಂಡಿಯಾ ಐಪಿಒ (LIC IPO) ಬಿಡ್ಡಿಂಗ್ ಪೂರ್ತಿಯಾದ ಮೇಲೆ ಎಲ್ಲರ ಕಣ್ಣು ಅದರ ವಿತರಣೆ ದಿನಾಂಕದ ಕಡೆ ಇದ್ದು, ಮೇ 12ರ ಗುರುವಾರ ವಿತರಿಸಬಹುದು ಎಂಬ ನಿರೀಕ್ಷೆ ಇದೆ. ಯಾರು ಈ ಸಾರ್ವಜನಿಕ ಇಶ್ಯೂಗೆ ಅರ್ಜಿ ಹಾಕಿಕೊಂಡಿದ್ದಾರೋ ಅಂಥವರು ಎಲ್ಐಸಿ ಐಪಿಒ ವಿತರಣೆ ಸ್ಥಿತಿಯನ್ನು ಆನ್​ಲೈನ್​ ಮೂಲಕ ಪರಿಶೀಲಿಸಬಹುದು. ಬಿಎಸ್​ಇ ವೆಬ್​ಸೈಟ್ ಅಥವಾ ಅದರ ರಿಜಿಸ್ಟ್ರಾರ್ KFin ಟೆಕ್ನಾಲಜೀಸ್ ಲಿಮಿಟೆಡ್ ಅಧಿಕೃತ ವೆಬ್​ಸೈಟ್​ನಲ್ಲಿ ನೋಡಬಹುದು. ಆದರೆ ಷೇರು ಹಂಚಿಕೆ ಮುಗಿದಿದೆ ಎಂದಾದ ಮೇಲಷ್ಟೇ ಎಲ್​ಐಸಿ ಐಪಿಒ ವಿತರಣೆ ಸ್ಥಿತಿಯನ್ನು ಪರಿಶೀಲಿಸಬಹುದು.

ಎಲ್​ಐಸಿ ಐಪಿಒ ಹಂಚಿಕೆ ಸ್ಥಿತಿ ಪರಿಶೀಲಿಸಲು ನೇರ ಲಿಂಕ್​ಗಳು

ಈ ಮೇಲೆ ತಿಳಿಸಿದಂತೆ ಎಲ್​ಐಸಿ ಐಪಿಒ ಷೇರು ಹಂಚಿಕೆ ಬಗ್ಗೆ ಬಿಡ್ಡರ್​ಗಳು ತಿಳಿಯುವುದು ಕಷ್ಟದ ವಿಚಾರ ಏನಲ್ಲ. ಬಿಎಸ್​ಇ ಅಧಿಕೃತ ವೆಬ್​ಸೈಟ್- bseindia.com ಅಥವಾ KFin ಟೆಕ್ನಾಲಜೀಸ್ ಲಿಮಿಟೆಡ್ ಅಧಿಕೃತ ವೆಬ್​ಸೈಟ್​- karisma.kfintech.comನಲ್ಲಿ ಪರಿಶೀಲಿಸಬಹುದು. ಇನ್ನೂ ಸುಲಭ ಆಗಬೇಕು ಅಂದರೆ, ನೇರ ಲಿಂಕ್​ಗಳಾದ bseindia.com/investors/appli_check.aspx ಹಾಗೂ ris.kfintech.com/ipostatus/ipos.aspx ಮೂಲಕ ಇನ್ನೂ ಸಲೀಸಾಗಿ ತಿಳಿಯಬಹುದು.

ಬಿಎಸ್​ಇ ವೆಬ್‌ಸೈಟ್‌ನಲ್ಲಿ ಎಲ್​ಐಸಿ ಐಪಿಒ ಹಂಚಿಕೆ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು

ಮೇಲೆ ತಿಳಿಸಿದಂತೆ, ಬಿಡ್​ದಾರರು ನೇರ ಬಿಎಸ್ಇ ಲಿಂಕ್‌ನಲ್ಲಿ ಲಾಗಿನ್ ಮಾಡಬಹುದು ಹಾಹಗೂ ಒಂದಾದ ಮೇಲೆ ಒಂದರಂತೆ ಕೆಳಗೆ ತಿಳಿಸಲಾದ ಹಂತವನ್ನು ಅನುಸರಿಸಬಹುದು: 1] ನೇರ ಬಿಎಸ್​ಇ ಲಿಂಕ್‌ನಲ್ಲಿ ಲಾಗಿನ್ ಮಾಡಿ – bseindia.com/investors/appli_check.aspx;

2] LIC IPO ಆಯ್ಕೆ ಮಾಡಿ;

3] ನಿಮ್ಮ LIC IPO ಅರ್ಜಿ ಸಂಖ್ಯೆಯನ್ನು ನಮೂದಿಸಿ;

4] ನಿಮ್ಮ ಪ್ಯಾನ್ ವಿವರಗಳನ್ನು ನಮೂದಿಸಿ;

5] ‘ನಾನು ರೋಬೋಟ್ ಅಲ್ಲ’ ಕ್ಲಿಕ್ ಮಾಡಿ; ಮತ್ತು

6] ‘ಸಲ್ಲಿಸು’ (submit) ಬಟನ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ LIC IPO ಹಂಚಿಕೆ ಸ್ಥಿತಿಯು ಕಂಪ್ಯೂಟರ್ ಮಾನಿಟರ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್ ಪರದೆಯಲ್ಲಿ ಲಭ್ಯವಾಗುತ್ತದೆ.

KFintech ವೆಬ್‌ಸೈಟ್‌ನಲ್ಲಿ ಎಲ್​ಐಸಿ ಐಪಿಒ ಹಂಚಿಕೆ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?

ಅಧಿಕೃತ ರಿಜಿಸ್ಟ್ರಾರ್‌ನ ವೆಬ್‌ಸೈಟ್‌ನಲ್ಲಿ ಎಲ್​ಐಸಿ ಐಪಿಒ ಹಂಚಿಕೆ ಸ್ಥಿತಿಯನ್ನು ಪರಿಶೀಲಿಸಲು ಬಯಸುವವರು, ಅವರು ಮೇಲಿನ ನೇರ KFintech ಲಿಂಕ್‌ನಲ್ಲಿ ಲಾಗಿನ್ ಮಾಡಬಹುದು ಮತ್ತು ಕೆಳಗಿನ ಹಂತ ಹಂತದ ಮಾರ್ಗದರ್ಶಿಯನ್ನು ಅನುಸರಿಸಬಹುದು:

1] ನೇರ KFintech ಲಿಂಕ್‌ನಲ್ಲಿ ಲಾಗಿನ್ ಮಾಡಿ — ris.kfintech.com/ipostatus/ipos.aspx;

2] LIC IPOನಲ್ಲಿ ಕ್ಲಿಕ್ ಮಾಡಿ;

3] ಅಪ್ಲಿಕೇಷನ್ ಸಂಖ್ಯೆ ಅಥವಾ ಡಿಪಿಐಡಿ/ಕ್ಲೈಂಟ್ ಐಡಿ ಅಥವಾ ಪ್ಯಾನ್ ಒಂದನ್ನು ಆಯ್ಕೆ ಮಾಡಿ (ಅಪ್ಲಿಕೇಷನ್ ಸಂಖ್ಯೆಯನ್ನು ತೆಗೆದುಕೊಳ್ಳೋಣ);

4] LIC IPO ಅರ್ಜಿ ಸಂಖ್ಯೆಯನ್ನು ನಮೂದಿಸಿ;

5] ಕ್ಯಾಪ್ಚಾವನ್ನು ಭರ್ತಿ ಮಾಡಿ; ಮತ್ತು

6] ‘ಸಲ್ಲಿಸು’ (submit) ಬಟನ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಎಲ್​ಐಸಿ ಐಪಿಒ ಹಂಚಿಕೆ ಸ್ಥಿತಿಯು ಕಂಪ್ಯೂಟರ್ ಮಾನಿಟರ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್ ಪರದೆಯಲ್ಲಿ ಲಭ್ಯವಾಗುತ್ತದೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒಗೆ ಮೇ 9ರ ಅಂತಿಮ ದಿನಕ್ಕೆ ಒಟ್ಟು 2.95 ಪಟ್ಟು ಬೇಡಿಕೆ

Published On - 11:07 am, Thu, 12 May 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು