LIC IPO GMP: ಎಲ್​ಐಸಿ ಐಪಿಒಗೆ ಗ್ರೇ ಮಾರ್ಕೆಟ್​ನಲ್ಲಿ ಕುಸಿದ ಪ್ರೀಮಿಯಂ; ವಿತರಣೆಗಿಂತ ಕಡಿಮೆಗೆ ಲಿಸ್ಟಿಂಗ್ ಆಗುತ್ತಾ?

ಗ್ರೇ ಮಾರ್ಕೆಟ್​ ಪ್ರೀಮಿಯಂ ಪ್ರಕಾರ ಎಲ್ಐಸಿ ಐಪಿಒ ಲಿಸ್ಟಿಂಗ್ ಅಲ್ಪ ಪ್ರಮಾಣದ ರಿಯಾಯಿತಿಯೊಂದಿಗೆ ಆಗಬಹುದು ಎನ್ನಲಾಗುತ್ತಿದೆ.

LIC IPO GMP: ಎಲ್​ಐಸಿ ಐಪಿಒಗೆ ಗ್ರೇ ಮಾರ್ಕೆಟ್​ನಲ್ಲಿ ಕುಸಿದ ಪ್ರೀಮಿಯಂ; ವಿತರಣೆಗಿಂತ ಕಡಿಮೆಗೆ ಲಿಸ್ಟಿಂಗ್ ಆಗುತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 11, 2022 | 11:41 AM

ಎಲ್​ಐಸಿ ಐಪಿಒ (LIC IPO) ಸಬ್​ಸ್ಕ್ರಿಪ್ಷನ್ ಮೇ 9ನೇ ತಾರೀಕಿಗೆ ಮುಕ್ತಾಯ ಆಗಿದೆ. ಯಾರು ಬಿಡ್ ಮಾಡಿದ್ದರೋ ಅವರೀಗ ವಿತರಣೆ ಆಗಬಹುದಾ ಎಂದು ಕಾಯುತ್ತಿದ್ದಾರೆ. ಮೇ 12ನೇ ತಾರೀಕಿನಂದು ಷೇರು ವಿತರಣೆ ಆಗುವ ಸಾಧ್ಯತೆ ಇದೆ. ಆದರೆ ಎಲ್​ಐಸಿ ಐಪಿಒ ಜಿಎಂಪಿ (ಗ್ರೇ ಮಾರ್ಕೆಟ್ ಪ್ರೀಮಿಯಂ) ಹತ್ತಿರ ಹತ್ತಿರ ಒಂದು ವಾರದಿಂದ ಸತತವಾಗಿ ಕಡಿಮೆ ಆಗುತ್ತಲೇ ಬರುತ್ತಿದೆ. ವಿಶ್ಲೇಷಕರ ಪ್ರಕಾರ, ಇವತ್ತಿಗೆ (ಮೇ 11, 2022ಕ್ಕೆ) ಗ್ರೇ ಮಾರ್ಕೆಟ್​ನಲ್ಲಿ 8 ರೂಪಾಯಿ ರಿಯಾಯಿತಿಗೆ ಎಲ್​ಐಸಿ ಷೇರುಗಳ ಬೆಲೆ ಇದೆ. ಸೆಕೆಂಡರಿ ಮಾರ್ಕೆಟ್​ನಲ್ಲಿ ದುರ್ಬಲ ಭಾವನೆಗಳ ಕಾರಣಕ್ಕೆ ಎಲ್​ಐಸಿ ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂ ಕಳೆದ ಒಂದು ವಾರದಿಂದ ಸತತವಾಗಿ ಇಳಿಕೆ ಆಗುತ್ತಿದೆ ಮತ್ತು ಇದೀಗ ವಿತರಣೆ ಬೆಲೆಗಿಂತ ಕೆಳಗೆ ಇಳಿದಿದೆ. ಇವತ್ತಿಗೆ (ಮೇ 11) ಮೈನಸ್ 8 ಹಾಗೂ ನಿನ್ನೆಯ ಗ್ರೇ ಮಾರ್ಕೆಟ್ ಪ್ರೀಮಿಯಂಗಿಂತ ರೂ. 33 ಕಡಿಮೆಗಿದೆ. ಮೇ 10ನೇ ತಾರೀಕು ಗ್ರೇ ಮಾರ್ಕೆಟ್ ಪ್ರೀಮಿಯಂ ಪ್ಲಸ್ 25 ರೂಪಾಯಿ ಇತ್ತು.

ಇನ್ನೇನು ಐಪಿಒ ಸಬ್​ಸ್ಕ್ರಿಪ್ಷನ್ ಶುರುವಾಗಬೇಕು ಅಂತಿದ್ದಾಗ 92 ರೂಪಾಯಿ ತನಕ ಇತ್ತು. ಆದರೆ ಆ ನಂತರದಲ್ಲಿ ಜಾಗತಿಕವಾಗಿಯೇ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ಭಾವನೆಗಳು ಕಾಣಿಸಿಕೊಳ್ಳಲು ಆರಂಭವಾದ ಮೇಲೆ ಇದರ ಬೆಲೆ ಕೂಡ ಇಳಿಯಲು ಆರಂಭವಾಯಿತು. ಗ್ರೇ ಮಾರ್ಕೆಟ್​ ಅನ್ನು ಅನುಸರಿಸುವವರ ಪ್ರಕಾರ, ದೊಡ್ಡ ಹೂಡಿಕೆದಾರರ ಭಾಗವಹಿಸುವಿಕೆ ಕಡಿಮೆ ಆಗಿದ್ದು ಮತ್ತು ಮಾರುಕಟ್ಟೆ ಭಾವನೆಯಲ್ಲಿನ ಹಿಂಜರಿಕೆ ಸೇರಿ ಎಲ್​ಐಸಿ ಲಿಸ್ಟಿಂಗ್​ಗೆ ಪೆಟ್ಟು ನೀಡುತ್ತಿದೆ.

ಮೈನಸ್ 8 ರೂಪಾಯಿ ಗ್ರೇ ಮಾರ್ಕೆಟ್ ಪ್ರೀಮಿಯಂನಲ್ಲಿ ಎಲ್​ಐಸಿ ಐಪಿಒ ಇದೆ ಅಂದರೆ, ಲಿಸ್ಟಿಂಗ್ 941 ರೂಪಾಯಿಗೆ (949- 8) ಆಗಬಹುದು ಎಂಬ ನಿರೀಕ್ಷೆ ಇದೆ ಎಂದರ್ಥ. ಗ್ರೇ ಮಾರ್ಕೆಟ್ ಅನುಸರಿಸಿ ಹೇಳುವುದಾದರೆ, ಸ್ವಲ್ಪ ಮಟ್ಟಿಗೆ ರಿಯಾಯಿತಿಯಲ್ಲಿ ಲಿಸ್ಟಿಂಗ್ ಆಗಬಹುದು.

ಒಟ್ಟಾರೆಯಾಗಿ ಎಲ್​ಐಸಿ ಐಪಿಒ 2.95 ಪಟ್ಟು ಸಬ್​ಸ್ಕ್ರೈಬ್ ಆಗಿದೆ. ಕಂಪೆನಿಯ ಷೇರಿಗೆ ತಲಾ 902ರಿಂದ 949 ದರ ನಿಗದಿ ಆಗಿದ್ದು, ಅರ್ಹ ಪಾಲಿಸಿದಾರರಿಗೆ 60 ರೂಪಾಯಿ ರಿಯಾಯಿತಿ ಮತ್ತು ರೀಟೇಲ್ ಬಿಡ್​ದಾರರು ಮತ್ತು ಕಂಪೆನಿ ಉದ್ಯೋಗಿಗಳು 45 ರೂಪಾಯಿ ರಿಯಾಯಿತಿ ಇದೆ.

ಎಲ್​ಐಸಿಯಲ್ಲಿನ ಶೇ 3.5ರಷ್ಟು ಪಾಲನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರವು 20,500 ಕೋಟಿ ರೂಪಾಯಿ ಸಂಗ್ರಹ ಮಾಡಲು ಮುಂದಾಗಿದೆ. 245 ಖಾಸಗಿ ಲೈಫ್ ಇನ್ಷೂರೆನ್ಸ್ ಕಂಪೆನಿಗಳನ್ನು ವಿಲೀನ ಹಾಗೂ ರಾಷ್ಟ್ರೀಕರಣಗೊಳಿಸುವ ಮೂಲಕ ಸೆಪ್ಟೆಂಬರ್ 1, 1956ರಂದು ಎಲ್​ಐಸಿ ಇಂಡಿಯಾ ರೂಪಿಸಲಾಯಿತು. ಆರಂಭಿಕ ಬಂಡವಾಳ 5 ಕೋಟಿ ರೂಪಾಯಿ ಇತ್ತು. ಇದರ ಉತ್ಪನ್ನಗಳ ಪೋರ್ಟ್​​ಫೋಲಿಯೋದಲ್ಲಿ 32 ವೈಯಕ್ತಿಕ ಯೋಜನೆಗಳಿವೆ (16 ಪಾರ್ಟಿಸಿಪೇಟಿಂಗ್ ಮತ್ತು 16 ನಾನ್ ಪಾರ್ಟಿಸಿಪೇಟಿಂಗ್) ಹಾಗೂ ಏಳು ವೈಯಕ್ತಿಕ ಐಚ್ಛಿಕ ರೈಡರ್ ಅನುಕೂಲಗಳಿದ್ದು, ಎಲ್​ಐಸಿಯಿಂದ 11 ಗುಂಪು ಉತ್ಪನ್ನಗಳಿವೆ.

ಎಲ್​ಐಸಿ ಐಪಿಒ ಲಿಸ್ಟಿಂಗ್ ಮೇ 17, 2022ರಂದು ಆಗುವ ಸಾಧ್ಯತೆ ಇದೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಎಲ್​ಐಸಿ ಆ್ಯಂಕರ್ ಬುಕ್​ನಲ್ಲಿ ಭಾಗವಹಿಸುತ್ತಿಲ್ಲ 28 ಮ್ಯೂಚುಯಲ್ ಫಂಡ್​ಗಳು: ಇಲ್ಲಿದೆ ಪಟ್ಟಿ

Published On - 11:41 am, Wed, 11 May 22

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ