PPF Account: ಇನ್ನು ಮುಂದೆ ಮೆಚ್ಯೂರಿಟಿ ನಂತರ ಈ ಬಗೆಯ ಪಿಪಿಎಫ್ ಖಾತೆ ಅವಧಿ ವಿಸ್ತರಣೆ ಸಾಧ್ಯವಿಲ್ಲ
ಈ ಬಗೆಯ ಪಿಪಿಎಫ್ ಖಾತೆಯ ಅವಧಿಯನ್ನು ಇನ್ನು ವಿಸ್ತರಿಸಲು ಆಗುವುದಿಲ್ಲ ಎಂದು ಸೂಚನೆ ನೀಡಲಾಗುತ್ತಿದೆ. ಏಕೆ ಎಂಬ ಮಾಹಿತಿ ಇಲ್ಲಿದೆ.
ಹಿಂದೂ ಅವಿಭಜಿತ ಕುಟುಂಬಗಳ (HUF) ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಗಳನ್ನು ವಿಸ್ತರಿಸಲು ಆಗುವುದಿಲ್ಲ ಎಂದು ಅಂಚೆ ಕಚೇರಿಗಳು ತಮ್ಮ ಶಾಖೆಗಳಲ್ಲಿ ಸೂಚನೆ ಹಾಕಲು ಪ್ರಾರಂಭಿಸಿವೆ. 2005ರ ಏಪ್ರಿಲ್ವರೆಗೆ ವ್ಯಕ್ತಿಗಳನ್ನು ಹೊರತುಪಡಿಸಿ, ಹಿಂದೂ ಅವಿಭಕ್ತ ಕುಟುಂಬಗಳಂತಹ ಕೆಲವು ಘಟಕಗಳು ಪಿಪಿಎಫ್ ಖಾತೆಗಳನ್ನು ತೆರೆಯಲು ಮತ್ತು ಹೂಡಿಕೆ ಮಾಡಲು ಅನುಮತಿಸಲಾಗಿತ್ತು. ಆದರೆ 2005ರ ಮೇ ತಿಂಗಳಲ್ಲಿ ಕಾನೂನಿಗೆ ತಿದ್ದುಪಡಿ ಮಾಡಲಾಯಿತು. ಅದರಲ್ಲಿ ವ್ಯಕ್ತಿಗಳು ಮಾತ್ರ ಖಾತೆಗಳನ್ನು ತೆರೆಯಬಹುದು ಮತ್ತು ಪಿಪಿಎಫ್ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಸಂಬಂಧಪಟ್ಟ ವಿಷಯ ತಜ್ಞರು ಹೇಳುವಂತೆ, “ಜನಸಾಮಾನ್ಯರಿಗೆ ಭವಿಷ್ಯ ನಿಧಿಯನ್ನು ಸೃಷ್ಟಿಸುವುದು ಪಿಪಿಎಫ್ ಯೋಜನೆ ಪರಿಚಯದ ಉದ್ದೇಶವಾಗಿತ್ತು, ಇದರಲ್ಲಿ ಚಂದಾದಾರರು ಬಡ್ಡಿ, ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಕೆಲವು ಷರತ್ತುಗಳಿಗೆ ಒಳಪಟ್ಟು ಸಾಲಗಳನ್ನು ಪಡೆಯಬಹುದು ಅಥವಾ ಹಿಂಪಡೆಯಬಹುದು. ಆರಂಭದಲ್ಲಿ ಪಿಪಿಎಫ್ ಖಾತೆಗಳನ್ನು ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳಂತಹವು ಮಾತ್ರ ತೆರೆಯಬಹುದಾಗಿತ್ತು. ಆದರೆ ಕಾನೂನನ್ನು ನಂತರ ತಿದ್ದುಪಡಿ ಮಾಡಲಾಯಿತು. ಮೇ 13, 2005ರಿಂದ ಹಿಂದೂ ಅವಿಭಕ್ತ ಕುಟುಂಬಗಳು ಮತ್ತು ಇತರ ಘಟಕಗಳು ಖಾತೆಗಳನ್ನು ತೆರೆಯಲು ಅನುಮತಿಸಲಿಲ್ಲ. ಆದರೆ ಅದಾಗಲೇ ಖಾತೆ ತೆರೆದ ಹಿಂದೂ ಅವಿಭಕ್ತ ಕುಟುಂಬಗಳ ಆ ಕಾಲದ ಪಿಪಿಎಫ್ ಖಾತೆಗಳು ಮುಂದುವರಿಯಬಹುದು.
ಸರ್ಕಾರವು ಈಗ 1968ರ ಪಿಪಿಎಫ್ ಯೋಜನೆಯನ್ನು ಪಿಪಿಎಫ್ ಯೋಜನೆ 2019ರೊಂದಿಗೆ ಬದಲಾಯಿಸಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಈ ಹೊಸ ಯೋಜನೆಯು ವ್ಯಕ್ತಿಗಳು ಮಾತ್ರ ಪಿಪಿಎಫ್ ಖಾತೆಗಳನ್ನು ತೆರೆಯಬಹುದು ಮತ್ತು ಹೂಡಿಕೆ ಮಾಡಬಹುದು ಎಂದು ಮತ್ತೊಮ್ಮೆ ಹೇಳುತ್ತದೆ. ಪಿಪಿಎಫ್ ಯೋಜನೆ 2019 ಅನ್ನು ಪರಿಚಯಿಸುವ ಮೊದಲು, ಮೇ 13, 2005ರ ಹಿಂದೆ ತೆರೆಯಲಾದ ಹಿಂದೂ ಅವಿಭಕ್ತ ಕುಟುಂಬಗಳ ಪಿಪಿಎಫ್ ಖಾತೆಗಳ ಬಗ್ಗೆ ಸರ್ಕಾರವು 2010 ಮತ್ತು 2011 ರಲ್ಲಿ ಸ್ಪಷ್ಟೀಕರಣ ನೀಡಿತು. “ಡಿಸೆಂಬರ್ 2010ರಲ್ಲಿ ಪಿಪಿಎಫ್ ಯೋಜನೆಗೆ ಮಾಡಿದ ತಿದ್ದುಪಡಿಗಳ ಪ್ರಕಾರ, ಹಿಂದೂ ಅವಿಭಕ್ತ ಕುಟುಂಬಗಳು ಪಿಪಿಎಫ್ ಮೇ 13, 2005ರ ಮೊದಲು ತೆರೆಯಲಾದ ಖಾತೆಗಳನ್ನು ಆರಂಭಿಕ ಚಂದಾದಾರಿಕೆಯನ್ನು ಮಾಡಿದ ವರ್ಷದ ಅಂತ್ಯದಿಂದ 15 ವರ್ಷಗಳ ನಂತರ ಕ್ಲೋಸ್ ಮಾಡಲಾಗುತ್ತದೆ. ಹಿಂದೂ ಅವಿಭಕ್ತ ಕುಟುಂಬಗಳ ಚಂದಾದಾರರ ಕ್ರೆಡಿಟ್‌ಗೆ ನಿಂತಿರುವ ಸಂಪೂರ್ಣ ಮೊತ್ತವನ್ನು ಅದರ ಮೇಲೆ ಗಳಿಸಿದ ಬಡ್ಡಿಯೊಂದಿಗೆ ಪಾವತಿಸಲಾಗುತ್ತದೆ. ಹಿಂದೂ ಅವಿಭಕ್ತ ಕುಟುಂಬಗಳ ಪಿಪಿಎಫ್ ಖಾತೆಗಳ ಸಂದರ್ಭದಲ್ಲಿ 15 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದರೆ ಮಾರ್ಚ್ 31, 2011ರೊಳಗೆ ಖಾತೆಗಳನ್ನು ಮುಚ್ಚಲಾಗುವುದು.”
ಪಿಪಿಎಫ್ ಖಾತೆಯು 15 ವರ್ಷಗಳ ಮೆಚ್ಯೂರಿಟಿ ಅವಧಿಯೊಂದಿಗೆ ಬರುತ್ತದೆ. ಇದನ್ನು ಐದು ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಬಹುದು. ಈಗ ಏಪ್ರಿಲ್ 2005ರಲ್ಲಿ ಹಿಂದೂ ಅವಿಭಕ್ತ ಕುಟುಂಬಗಳು ಪಿಪಿಎಫ್ ಖಾತೆಯನ್ನು ತೆರೆಯಲಾಗಿದೆ ಎಂದು ಭಾವಿಸೋಣ. ಪಿಪಿಎಫ್ ಯೋಜನೆ ನಿಯಮಗಳ ಪ್ರಕಾರ, ಈ ಖಾತೆಯನ್ನು ಮಾರ್ಚ್ 31, 2006ರ ನಂತರದ 15 ವರ್ಷಗಳಲ್ಲಿ ಕ್ಲೋಸ್ ಮಾಡಬೇಕಾಗುತ್ತದೆ, ಅಂದರೆ ಏಪ್ರಿಲ್ 1, 2021 ಆಗುತ್ತದೆ. ನೀವು ಪಿಪಿಎಫ್ ಖಾತೆ ಅವಧಿ ವಿಸ್ತರಿಸಲು ಅಂಚೆ ಕಚೇರಿಗೆ ಭೇಟಿ ನೀಡಿದರೆ ಅದನ್ನು ವಿಸ್ತರಿಸಲು ಅನುಮತಿಸಲಾಗುವುದಿಲ್ಲ. ಮೆಚ್ಯೂರಿಟಿ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
“ಮೇ 13, 2005ರ ನಂತರ ಮುಕ್ತಾಯಗೊಂಡ ಹಿಂದೂ ಅವಿಭಕ್ತ ಕುಟುಂಬಗಳು ಪಿಪಿಎಫ್ ಖಾತೆಗಳು ಮತ್ತು ಮೇಲಿನ 2010 ತಿದ್ದುಪಡಿಯ ಮೊದಲು ಕ್ಲೋಸ್ ಆದವು, ಮುಕ್ತಾಯ ಅವಧಿಯ ನಂತರ ಉಳಿಸಿಕೊಂಡಿರುವ ಠೇವಣಿಗಳ ಮೇಲೆ ಪಿಪಿಎಫ್ ಬಡ್ಡಿದರವನ್ನು ಪಾವತಿಸಲಾಗುವುದು ಎಂದು 2011ರಲ್ಲಿ ಮತ್ತೊಂದು ಸ್ಪಷ್ಟೀಕರಣವನ್ನು ನೀಡಲಾಯಿತು. ಇದು ಷರತ್ತಿಗೆ ಒಳಪಟ್ಟಿರುತ್ತದೆ. ಡಿಸೆಂಬರ್ 2010ರ ನಂತರ ಹಿಂದೂ ಅವಿಭಕ್ತ ಕುಟುಂಬಗಳ ಪಿಪಿಎಫ್ ಖಾತೆಗಳನ್ನು ವಿಸ್ತರಿಸಲಾಗಿಲ್ಲ ಮತ್ತು ಹೆಚ್ಚಿನ ಚಂದಾದಾರಿಕೆಗಳಿಲ್ಲದೆ ಅಂತಹ ಖಾತೆಗಳಲ್ಲಿ ಠೇವಣಿಗಳನ್ನು ಉಳಿಸಿಕೊಳ್ಳಲಾಗಿದೆ,” ಎಂದು ವಿಷಯತಜ್ಞರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: PPF Benefits: ವರ್ಷದ ಈ ತಿಂಗಳ ಇಂಥ ದಿನಾಂಕದ ಮಧ್ಯೆ ಹೂಡಿಕೆ ಮಾಡಿದಲ್ಲಿ ಪಿಪಿಎಫ್ನಿಂದ ಹೆಚ್ಚಿನ ಅನುಕೂಲ