LIC ಬಳಿ ಇದೆ ವಾರಸುದಾರರಿಲ್ಲದ 21,336 ಕೋಟಿ ರೂಪಾಯಿ! ಪಾಲಿಸಿದಾರರು ಅದನ್ನು ವಾಪಸ್ ಪಡೆಯುವ ಕ್ರಮ ಇಲ್ಲಿ ವಿವರಿಸಲಾಗಿದೆ
ಪಾಲಿಸಿದಾರರು ತಮಗೆ ಸಲ್ಲಬೇಕಾದ ಹಣವನ್ನು ಪಾಲಿಸಿ ವಿವರ ನೀಡಿ, ಆನ್ಲೈನ್ ಮೂಲಕ ವಾಪಸ್ ಪಡೆಯಬಹುದು. Unclaimed amount ಅಂದರೆ ಡೆತ್ ಕ್ಲೈಂ, ಮೆಚ್ಯುರಿಟಿ ಕ್ಲೈಂ, ಸರ್ವೈವಲ್ ಬೆನಿಫಿಟ್ಸ್, ಇನ್ಡೆಮ್ನಿಟಿ ಕ್ಲೈಂ ಮತ್ತು ಪ್ರೀಮಿಯಂ ಮೊತ್ತವಾಗಿರಬಹುದು.
ದೇಶದ ಬೃಹತ್ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ ಬಳಿ ವಾರಸುದಾರರು ಇಲ್ಲದ ಬೃಹತ್ ಮೊತ್ತ ಇದೆ. LIC ಸಂಸ್ಥೆಯಲ್ಲಿ ವಾರಸುದಾರರು ಇಲ್ಲದ ಒಟ್ಟು ಮೊತ್ತ (Unclaimed Funds) ಎಷ್ಟಿದೆಯೆಂದರೆ ಅಂದಾಜು 21,336 ಕೋಟಿ ರೂಪಾಯಿ. ಇದರ ಬಗ್ಗೆ LIC ಸಹ ಕಾಲಕಾಲಕ್ಕೆ ತನ್ನ ಪಾಲಿಸಿದಾರರ ಜೊತೆ ಸಂಪರ್ಕ ಸಾಧಿಸಿ, ಸೂಕ್ತ ದಾಖಲೆ ಸಲ್ಲಿಸಿ, ಹಣ ವಾಪಸ್ ಪಡೆಯುವಂತೆ ತಿಳಿಯಹೇಳುತ್ತಿರುತ್ತದೆ. ಆ ವಿವರಗಳನ್ನೆಲ್ಲಾ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುತ್ತಿರುತ್ತದೆ ಎಂಬುದು ಗಮನಾರ್ಹ.
ಇದರ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವೂ ಸ್ಪಷ್ಟ ನಿಲುವು ಹೊಂದಿದೆ. ಅದರಂತೆ ಕಳೆದ 10 ವರ್ಷಗಳಿಂದೀಚೆಗೆ ಯಾರೆಲ್ಲಾ ಪಾಲಿಸಿ ತೆಗೆದುಕೊಂಡು (LIC policyholders), ಪ್ರೀಮಿಯಂ ತುಂಬದೆಯೋ, ಅಥವಾ ಮತ್ಯಾವುದೋ ಕಾರಣಕ್ಕಾಗಿ LIC ಬಳಿಯೇ ಈ ಮೊತ್ತವನ್ನು ಬಿಟ್ಟಿದ್ದಾರೋ ಅವರೆಲ್ಲಾ ಸೂಕ್ತ ದಾಖಲೆಗಳನ್ನು ನೀಡಿ ತಮಗೆ ಸೇರಬೇಕಾದ ಅರ್ಹ ಮೊತ್ತವನ್ನು ವಾಪಸ್ ಪಡೆಯಬಹುದು ಎಂದು ತಿಳಿಸಿದೆ. ಪಾಲಿಸಿ ಮಾಡಿಸಿದ ನಂತರದ ಅವಧಿಯಲ್ಲಿ ಹತ್ತಲ್ಲ, 25 ವರ್ಷದವರೆಗೂ ಪಾಲಿಸಿದಾರ ಅಥವಾ ವಾರಸುದಾರ ಈ ಮೊತ್ತವನ್ನು ಸೂಕ್ತ ದಾಖಲೆ ನೀಡಿ, ವಾಪಸ್ ಪಡೆಯಬಹುದಾಗಿದೆ.
LIC Policy unclaimed amount ವಾಪಸ್ ಪಡೆಯುವ ವಿಧಾನ, ಅಗತ್ಯ ದಾಖಲೆಗಳು ಏನೇನು? ಪಾಲಿಸಿದಾರರು ತಮಗೆ ಸಲ್ಲಬೇಕಾದ ಹಣವನ್ನು ಪಾಲಿಸಿ ವಿವರ ನೀಡಿ, ಆನ್ಲೈನ್ ಮೂಲಕ ವಾಪಸ್ ಪಡೆಯಬಹುದು. Unclaimed amount ಅಂದರೆ ಡೆತ್ ಕ್ಲೈಂ, ಮೆಚ್ಯುರಿಟಿ ಕ್ಲೈಂ, ಸರ್ವೈವಲ್ ಬೆನಿಫಿಟ್ಸ್, ಇನ್ಡೆಮ್ನಿಟಿ ಕ್ಲೈಂ ಮತ್ತು ಪ್ರೀಮಿಯಂ ಮೊತ್ತವಾಗಿರಬಹುದು. ಈ ಕೆಳಗಿನ ವಿವರ ನಮೂದಿಸಬೇಕು.
LIC policy number, Policy-holder’s name, Date of birth, PAN card,
ಹಾಗಾದ್ರೆ ಬನ್ನೀ ಪ್ರೊಸೀಜರ್ ಏನಿದೆ ತಿಳಿಯೋಣ: ಹಂತ 1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಂತ 2: ಎಲ್ಲಾ ಅಗತ್ಯ ವಿವರ ಸಲ್ಲಿಸಿ, ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಹಂತ 3: ವಿವರ ಸಲ್ಲಿಸಿದ ಬಳಿಕ ಎಷ್ಟು ಮೊತ್ತ ಇದೆ ಎಂಬುದನ್ನು ನಿಮ್ಮ ಖಾತೆಯಲ್ಲಿ ತೋರಿಸುತ್ತದೆ. ಹಂತ 4: ಖಾತೆಯಲ್ಲಿ ಮೊತ್ತ ಎಷ್ಟಿದೆ ಎಂಬುದು ತೋರಿಸಿದಾಗ ಅದನ್ನು ಕ್ಲೈಂ ಮಾಡಲು KYC ಪ್ರೊಸೀಜರ್ ಅನುಸರಿಸಬೇಕು. ಹಂತ 5: ಪಾಲಿಸಿದಾರ ಅಥವಾ ವಾರಸುದಾರ ಸಲ್ಲಿಸಿರುವ ವಿವರ ನಿಖರವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕವಷ್ಟೇ, LIC ಮುಂದಿನ ವಿಧಾನ ಅನುಸರಿಸುತ್ತದೆ. ಹಂತ 6: ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಅನುಸರಿಸುತ್ತಾ ಪಾಲಿಸಿದಾರರು ಒದಗಿಸಿರುವ ಬ್ಯಾಂಕ್ ಖಾತೆಗೇ ನಿಗದಿತ ಮೊತ್ತವನ್ನು ವಿದ್ಯುನ್ಮಾನ ವಿಧಾನದ ಮೂಲಕ LIC ಹಣ ವರ್ಗಾಯಿಸುತ್ತದೆ.
ಪಾಲಿಸಿ ಮೊತ್ತದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:16 pm, Wed, 11 May 22