LIC unclaimed funds: ಭಾರತೀಯ ಜೀವ ವಿಮಾ ನಿಗಮದ ಬಳಿ ವಾರಸುದಾರರಿಲ್ಲದ ಒಟ್ಟು ಮೊತ್ತ ಎಷ್ಟಿದೆಯೆಂದರೆ ನಮ್ಮ ಬಿಬಿಎಂಪಿ ಬಜೆಟ್ನ ಎರಡು ಪಟ್ಟು ಜಾಸ್ತಿ ಇದೆ!
ಅಂದಹಾಗೆ LIC ಈ ಮೊತ್ತವನ್ನು ಲೆಕ್ಕ ಹಾಕಿರುವುದು 2021ರ ಸೆಪ್ಟೆಂಬರ್ನಲ್ಲಿ! ಈ Rs 21,336 crore unclaimed money ಯಾವುದಕ್ಕೆ ಸಮ ಅಂದರೆ ನಮ್ಮ ಬೆಂಗಳೂರು BBMPಯ ಲೇಟೆಸ್ಟ್ ಬಜೆಟ್ ಗಾತ್ರದ ಎರಡು ಪಟ್ಟು ಹೆಚ್ಚೇ ಇದೆ.
ಭಾರತೀಯ ಜೀವ ವಿಮಾ ನಿಗಮದ ಆರಂಭಿಕ ಸಾರ್ವಜನಿಕ ಷೇರು ಹೂಡಿಕೆ (ಎಲ್ಐಸಿ ಐಪಿಒ – Life Insurance Corporation IPO) ಸುಮಾರು ಮೂರು ಪಟ್ಟು ಹೆಚ್ಚು ಸಬ್ಸ್ಕ್ರೈಬ್ ಆಗಿದೆ. ಇದರ ಸಮ್ಮುಖದಲ್ಲಿ ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಇದೇ LIC ಸಂಸ್ಥೆಯ ಒಂದು ಲೆಕ್ಕದ ಬಾಬತ್ತು ಸಾರ್ವಜನಿಕ ವಲಯದಲ್ಲಿ ಆಗಾಗ ಸದ್ದು ಮಾಡುತ್ತಿರುತ್ತದೆ. ಇಷ್ಟು ದಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಯೆನಿಸಿದ್ದ LIC ಇನ್ನು, ಷೇರು ಕಂಪನಿಯಾಗಿ ಚಾಲ್ತಿಗೆ ಬರುತ್ತಿರುವುದರಿಂದ ಈ ಬಾರಿ ಆ ಒಂದು ಲೆಕ್ಕದ ಬಾಬತ್ತು ಮತ್ತೆ ಮುನ್ನೆಲೆಗೆ ಬಂದಿದೆ. ಅದುವೇ ವಾರಸುದಾರರು ಇಲ್ಲದ ಬೃಹತ್ ಮೊತ್ತ. ಹೌದು ಹಿಂದಿನ LIC ಸಂಸ್ಥೆಯಲ್ಲಿ ವಾರಸುದಾರರು ಇಲ್ಲದ ಒಟ್ಟು ಮೊತ್ತ (Unclaimed Funds) ಎಷ್ಟಿದೆಯೆಂದರೆ ಬರೋಬ್ಬರಿ ಅಂದಾಜು 21,336 ಕೋಟಿ ರೂಪಾಯಿ. ಅಬ್ಬಬ್ಬಾ ಈ ಪಾಟಿ ಹಣ ಗುಡ್ಡೆ ಹಾಕಿಕೊಂಡು LIC ಏನು ಮಾಡುತ್ತಿದೆ? ಏನು ಮಾಡುತ್ತದೆ? ಮುಂದೆ ಅದರ ಬಟವಾಡೆ ಹೇಗೆ? ಯಾರಿಗೆ ಸೇರುತ್ತದೆ, ಸಲ್ಲುತ್ತದೆ ಅಷ್ಟೊಂದು ಮೊತ್ತ ಎಂಬ ಸರಳ ಪ್ರಶ್ನೆಗಳು ಶ್ರೀಸಾಮಾನ್ಯನ ತಲೆಯಲ್ಲಿ ಅಂದಿನಿಂದ ಕೊರೆಯುತ್ತಾ ಬಂದಿದೆ. ಸರಳ ಲೆಕ್ಕಾಚಾರದಲ್ಲಿ ಹೇಳಬೇಕು ಅಂದರೆ ಈ ಮೊತ್ತದಲ್ಲಿ ಎರಡು ಮಾನವ ಸಹಿತ ಗಗನಯಾನಗಳನ್ನು (Gaganyaan) ಇಸ್ರೋ ಸಂಸ್ಥೆ ಯಶಸ್ವಿಯಾಗಿ ಕೈಗೊಳ್ಳಬಹುದಂತೆ!
ಯಾವುದೇ ಕಂಪನಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ತನ್ನ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡುವ ಮುನ್ನ ತನ್ನ ಬಂಡವಾಳ-ಜಾತಕವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (Securities and Exchange Board of India -Sebi ಸೆಬಿ) ಸಲ್ಲಿಸುವುದು ಕಡ್ಡಾಯ. ಅದರಂತೆ LIC IPO ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಸೆಬಿಗೆ ಸಲ್ಲಿಸಿರುವ ಡೀಟೇಲ್ ರಿಪೋರ್ಟ್ನಲ್ಲಿ ವಾರಸುದಾರರು ಇಲ್ಲದ ಒಟ್ಟು ಮೊತ್ತವನ್ನು ದಾಖಲಿಸಿದೆ. ಅದರಿಂದ LIC ಬಳಿ 21,336 ಕೋಟಿ ರೂಪಾಯಿ ವಾರಸುದಾರರು ಇಲ್ಲದ ನಿಧಿ ಇದೆಯೆಂದು ತಿಳಿದುಬಂದಿದೆ. ಅಂದಹಾಗೆ LIC ಈ ಮೊತ್ತವನ್ನು ಲೆಕ್ಕ ಹಾಕಿರುವುದು 2021ರ ಸೆಪ್ಟೆಂಬರ್ನಲ್ಲಿ! ಈ Rs 21,336 crore unclaimed money ಯಾವುದಕ್ಕೆ ಸಮ ಅಂದರೆ ನಮ್ಮ ಬೆಂಗಳೂರು BBMPಯ ಲೇಟೆಸ್ಟ್ ಬಜೆಟ್ ಗಾತ್ರದ ಎರಡು ಪಟ್ಟು ಹೆಚ್ಚೇ ಇದೆ.
ಇದರ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಒಂದು ನಿರ್ಣಯ ತೆಗೆದುಕೊಂಡಿದೆ. ಈ ಮೊತ್ತವು 2012ರಿಂದೀಚೆಗೆ ಕ್ರೋಢೀಕರಣಗೊಂಡಿದೆ. ಅದರಂತೆ ಕಳೆದ 10 ವರ್ಷಗಳಿಂದೀಚೆಗೆ ಯಾರೆಲ್ಲಾ ಪಾಲಿಸಿ ತೆಗೆದುಕೊಂಡು (policyholders), ಪ್ರೀಮಿಯಂ ತುಂಬದೆಯೋ, ಅಥವಾ ಮತ್ಯಾವುದೋ ಕಾರಣಕ್ಕಾಗಿ LIC ಬಳಿಯೇ ಈ ಮೊತ್ತವನ್ನು ಬಿಟ್ಟಿದ್ದಾರೋ ಅವರೆಲ್ಲಾ ಸೂಕ್ತ ದಾಖಲೆಗಳನ್ನು ನೀಡಿ ತಮಗೆ ಸೇರಬೇಕಾದ ಅರ್ಹ ಮೊತ್ತವನ್ನು ವಾಪಸ್ ಪಡೆಯಬಹುದು ಎಂದು ತಿಳಿಸಿದೆ.
ಇನ್ನು Insurance Regulatory and Development Authority of India ಪ್ರಕಾರ 10 ವರ್ಷಗಳ ಕಾಲ ಸಂಬಂಧಪಟ್ಟವರು ಯಾರೂ LIC ಸಂಸ್ಥೆಯಲ್ಲಿರುವ ತಮ್ಮ ಮೊತ್ತವನ್ನು ವಾಪಸ್ ಪಡೆಯದಿದ್ದರೆ ಪ್ರತಿ ವರ್ಷವೂ ಅಂತಹ ಮೊತ್ತವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ (Senior Citizens Welfare Fund -SCWF) ವರ್ಗಾಯಿಸಬೇಕು ಎಂಬ ಕಾನೂನು ಇದೆ. ಇದಕ್ಕೆ ಕೇಂದ್ರ ಸರ್ಕಾರವೂ ಅನುಮೋದನೆ ನೀಡಿದೆ. ಈ ಬಾಬತ್ತಿನಲ್ಲಿ 2019 ಸೆಪ್ಟೆಂಬರ್ 30 ರವರೆಗೂ 1,255 ಕೋಟಿ ರೂಪಾಯಿ ಮೊತ್ತವು SCWF ನಿಧಿಗೆ ಸಂದಾಯವಾಗಿದೆ. ಹಾಗಾದರೆ 10 ವರ್ಷದ ಬಳಿಕ ತನ್ನ ಹಣ SCWF ನಿಧಿಗೆ ವರ್ಗಾವಣೆಯಾಗಿದೆ ಎಂದು ಪಾಲಿಸಿದಾರ ಸುಮ್ಮನಾಗಬಹುದೇ? ಎಂಬ ಪ್ರಶ್ನೆಗೆ ಉತ್ತರ ಇದೆ. ಪಾಲಿಸಿ ಮಾಡಿಸಿದ ನಂತರದ ಅವಧಿಯಲ್ಲಿ ಹತ್ತಲ್ಲ, 25 ವರ್ಷದವರೆಗೂ ಪಾಲಿಸಿದಾರ ಅಥವಾ ವಾರಸುದಾರ ಈ ಮೊತ್ತವನ್ನು ಸೂಕ್ತ ದಾಖಲೆ ನೀಡಿ, ವಾಪಸ್ ಪಡೆಯಬಹುದಾಗಿದೆ.
ವಾರಸುದಾರರು ಇಲ್ಲದ ಮೊತ್ತದ (unclaimed funds) ಬಗ್ಗೆ ಭಾರತೀಯ ಜೀವ ವಿಮಾ ನಿಗಮವೂ ಸಹ ಕಾಲಕಾಲಕ್ಕೆ ತನ್ನ ಪಾಲಿಸಿದಾರರ ಜೊತೆ ಸಂಪರ್ಕ ಸಾಧಿಸಿ, ಸೂಕ್ತ ದಾಖಲೆ ಸಲ್ಲಿಸಿ, ಹಣ ವಾಪಸ್ ಪಡೆಯುವಂತೆ ತಿಳಿಯಹೇಳುತ್ತಿರುತ್ತದೆ. ಆ ವಿವರಗಳನ್ನೆಲ್ಲಾ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುತ್ತಿರುತ್ತದೆ ಎಂಬುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Wed, 11 May 22