EPF interest rate: ವಿಲೀನಗೊಳ್ಳದ ಇಪಿಎಫ್ ಖಾತೆಗೆ ಬಡ್ಡಿ ಹಣ ಕ್ರೆಡಿಟ್ ಆಗುತ್ತಾ? ಇಲ್ಲಿದೆ ಡೀಟೇಲ್ಸ್
EPF accounts to receive 8.25% interest for the year 2024-25: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ 2024-25ರ ಸಾಲಿಗೆ ಇಪಿಎಫ್ ಹಣಕ್ಕೆ ಶೇ. 8.25ರ ವಾರ್ಷಿಕ ಬಡ್ಡಿಯನ್ನು ಕ್ರೆಡಿಟ್ ಮಾಡಲಿದೆ. ಇದಕ್ಕೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಹಳೆಯದಾಗಿರುವ ಮತ್ತು ಇನಾಪರೇಟಿವ್ ಆಗಿರುವ ಇಪಿಎಫ್ ಖಾತೆಗಳಿಗೆ ಸರ್ಕಾರದಿಂದ ಬಡ್ಡಿ ಹಣ ಸಂದಾಯ ಆಗುವುದಿಲ್ಲ. 36 ತಿಂಗಳಿಗೂ ಹೆಚ್ಚು ಕಾಲ ಇಪಿಎಫ್ ಖಾತೆ ನಿಷ್ಕ್ರಿಯವಾಗಿದ್ದರೆ, ಅಂದರೆ ಯಾವುದೇ ಕೊಡುಗೆ ಇಲ್ಲದಿದ್ದರೆ ಅಂಥವು ಇನಾಪರೇಟಿವ್ ಅಕೌಂಟ್ ಎನಿಸುತ್ತವೆ.

ನವದೆಹಲಿ, ಮೇ 25: ಕಳೆದ ಹಣಕಾಸು ವರ್ಷಕ್ಕೆ (2024-25) ಇಪಿಎಫ್ (EPF) ಖಾತೆಗಳಲ್ಲಿರುವ ಹಣಕ್ಕೆ ಶೇ. 8.25ರಷ್ಟು ಬಡ್ಡಿ ನೀಡುವ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಹಣಕಾಸು ಸಚಿವಾಲಯದಿಂದ ಅನುಮೋದನೆ ಸಿಕ್ಕಿರುವ ಸಂಗತಿಯನ್ನು ಕಾರ್ಮಿಕ ಸಚಿವಾಲಯವು ಇಪಿಎಫ್ಒ ಸಂಸ್ಥೆಗೆ ತಿಳಿಸಿದೆ. ಇದರೊಂದಿಗೆ, ಇಪಿಎಫ್ ಖಾತೆಗಳಿಗೆ 2024-25ರ ಸಾಲಿಗೆ ಬಡ್ಡಿ ಜಮೆ ಮಾಡುವ ಅಂತಿಮ ಪ್ರಕ್ರಿಯೆ ಶುರುವಾಗಲಿದೆ. ಏಳು ಕೋಟಿಗೂ ಅಧಿಕ ಇಪಿಎಫ್ ಫಲಾನುಭವಿಗಳಿಗೆ ವಾರ್ಷಿಕ ಬಡ್ಡಿ ಸಿಗಲಿದೆ.
36 ತಿಂಗಳಿಗೂ ಅಧಿಕ ಕಾಲ ನಿಷ್ಕ್ರಿಯವಿರುವ ಖಾತೆಗೆ ಸಿಕ್ಕೋದಿಲ್ಲ ಬಡ್ಡಿ
ಒಂದು ಇಪಿಎಫ್ ಖಾತೆಗೆ 36 ತಿಂಗಳ ಕಾಲ ಯಾವುದೇ ಕೊಡುಗೆ (ಉದ್ಯೋಗಿ ಮತ್ತು ಕಂಪನಿ ವತಿಯಿಂದ) ಬೀಳದಿದ್ದರೆ ಅದು ಇನಾಪರೇಟಿವ್ ಅಕೌಂಟ್ ಎನಿಸುತ್ತದೆ. ಇಂಥ ಖಾತೆಗೆ ಬಡ್ಡಿ ಹಣ ಸಿಕ್ಕೋದಿಲ್ಲ. ಖಾತೆ ನಿಷ್ಕ್ರಿಯಗೊಂಡು 36 ತಿಂಗಳು, ಅಂದರೆ ಮೂರು ವರ್ಷದವರೆಗೂ ಬಡ್ಡಿ ಸಿಗುತ್ತಿರುತ್ತದೆ. ಅದಾದ ಬಳಿಕವಷ್ಟೇ ಬಡ್ಡಿ ಜಮೆಯಾಗುವುದು ನಿಲ್ಲುತ್ತದೆ.
ಇದನ್ನೂ ಓದಿ: ಇಪಿಎಫ್ ಮೇಲೆ ಶೇ. 8.25 ಬಡ್ಡಿದರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ
ವಿಲೀನಗೊಳ್ಳದ ಖಾತೆಗಳಿಗೂ ಇದು ಅನ್ವಯ
ನೀವು ಹಿಂದಿನ ಕಂಪನಿಗಳಲ್ಲಿ ಹೊಂದಿದ್ದ ಇಪಿಎಫ್ ಖಾತೆಗಳನ್ನು ನಿಮ್ಮ ಹೊಸ ಕೆಲಸದಲ್ಲಿನ ಇಪಿಎಫ್ ಖಾತೆಗೆ ವಿಲೀನಗೊಳಿಸದಿದ್ದರೆ ಬಡ್ಡಿ ಹಣ ಸಿಗುವ ಸಾಧ್ಯತೆ ಕಡಿಮೆ. ವಿಲೀನಗೊಳ್ಳದೆ 36 ತಿಂಗಳಿಗಿಂತ ಹೆಚ್ಚು ಕಾಲವಾಗಿರುವ ಹಳೆಯ ಇಪಿಎಫ್ ಖಾತೆಗಳಿಗೆ ಬಡ್ಡಿ ಸಿಕ್ಕೋದಿಲ್ಲ. ಹೀಗಾಗಿ, ಹಳೆಯ ಇಪಿಎಫ್ ಖಾತೆಗಳಿದ್ದರೆ ಅದನ್ನು ತಪ್ಪದೇ ಹೊಸ ಖಾತೆಗೆ ವಿಲೀನಗೊಳಿಸಿ.
ಶೇ. 8.25ರ ವಾರ್ಷಿಕ ಬಡ್ಡಿಹಣ ಸಣ್ಣ ಮೊತ್ತವಲ್ಲ. ಈಗಿರುವ ಬಹುತೇಕ ಬ್ಯಾಂಕುಗಳ ಗರಿಷ್ಠ ಎಫ್ಡಿ ದರಕ್ಕಿಂತ ಇದು ದೊಡ್ಡದು. ದೀರ್ಘಕಾಲದ ಹೂಡಿಕೆ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ಸಂಗತಿ.
ಇದನ್ನೂ ಓದಿ: EPFO: ಹಳೆಯ ಇಪಿಎಫ್ ಅಕೌಂಟ್ಗಳನ್ನು ಹೊಸ ಅಕೌಂಟ್ಗೆ ವಿಲೀನಗೊಳಿಸದಿದ್ದರೆ ಸಮಸ್ಯೆಗಳೇನು? ಇಲ್ಲಿದೆ ಡೀಟೇಲ್ಸ್
ಇಪಿಎಫ್ನ ಖಾತೆಯಲ್ಲಿರುವ ಎಷ್ಟು ಮೊತ್ತಕ್ಕೆ ಬಡ್ಡಿ ಸಿಗುತ್ತದೆ?
ಇಪಿಎಫ್ ಖಾತೆಯಲ್ಲಿರುವ ಇಡೀ ಮೊತ್ತಕ್ಕೆ ಬಡ್ಡಿ ಹಣ ಜಮೆ ಆಗುತ್ತದೆ. ಆದರೆ, ವರ್ಷದ ಕೊನೆಯಲ್ಲಿರುವ ಇಡೀ ಮೊತ್ತಕ್ಕೆ ಬಡ್ಡಿ ನೀಡಲಾಗುತ್ತದಾ? ಇಲ್ಲ. ಪ್ರತೀ ತಿಂಗಳಲ್ಲಿನ ಪಿಎಫ್ ಹಣಕ್ಕೆ ಬಡ್ಡಿ ನೀಡಲಾಗುತ್ತದೆ. ಉದಾಹರಣೆಗೆ, 2024ರ ಏಪ್ರಿಲ್ ತಿಂಗಳಲ್ಲಿ ಪಿಎಫ್ ಅಕೌಂಟ್ನಲ್ಲಿರುವ ಬ್ಯಾಲನ್ಸ್ 2,50,000 ರೂ ಇದ್ದಲ್ಲಿ, ಆ ಮೊತ್ತಕ್ಕೆ ವಾರ್ಷಿಕ ಶೇ. 8.25ರ ಲೆಕ್ಕದಲ್ಲಿ ಬಡ್ಡಿ ನೀಡಲಾಗುತ್ತದೆ. ಮೇ ತಿಂಗಳಲ್ಲಿ ಬ್ಯಾಲನ್ಸ್ 2,55,000 ರೂ ಇದ್ದರೆ, ಆ ಮೊತ್ತಕ್ಕೆ ಬಡ್ಡಿ ಕ್ರೆಡಿಟ್ ಮಾಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








