AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UAN activation: ಇಪಿಎಫ್​​ನ ಯುಎಎನ್ ನಂಬರ್ ಸಕ್ರಿಯಗೊಳಿಸಲು ಆಧಾರ್ ಫೇಸ್ ಅಥೆಂಟಿಕೇಶನ್ ಫೀಚರ್

UAN activation using Aadhaar based face authentication feature: ಇಪಿಎಫ್​​ಒದಿಂದ ಹೊಸ ಡಿಜಿಟಲ್ ಫೀಚರ್ ಪರಿಚಯವಾಗಿದೆ. ಉದ್ಯೋಗಿ ತಾನೇ ಸ್ವತಃ ಯುಎಎನ್ ಜನರೇಟ್ ಮಾಡಬಹುದು. ಯುಎಎನ್ ಆ್ಯಕ್ಟಿವೇಶನ್ ಕೂಡ ಮಾಡಬಹುದು. ಉಮಂಗ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್​​ಡಿ ಆ್ಯಪ್ ಮೂಲಕ ಯುಎಎನ್ ಸಂಖ್ಯೆ ಸೃಷ್ಟಿಸಲು ಸಾಧ್ಯ.

UAN activation: ಇಪಿಎಫ್​​ನ ಯುಎಎನ್ ನಂಬರ್ ಸಕ್ರಿಯಗೊಳಿಸಲು ಆಧಾರ್ ಫೇಸ್ ಅಥೆಂಟಿಕೇಶನ್ ಫೀಚರ್
ಇಪಿಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 08, 2025 | 6:55 PM

Share

ಬೆಂಗಳೂರು, ಏಪ್ರಿಲ್ 8: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​​ಒ (EPFO) ಹೊಸ ಫೀಚರ್ ಪರಿಚಯಿಸಿದೆ. ಇಲ್ಲಿ ಇಪಿಎಫ್ ಅಕೌಂಟ್ ಹೊಂದಿರುವ ಉದ್ಯೋಗಿಗಳು ಯೂನಿವರ್ಸಲ್ ಅಕೌಂಟ್ ನಂಬರ್ ಸೃಷ್ಟಿಸಲು ಅಥವಾ ಸಕ್ರಿಯಗೊಳಿಸಲು ಆಧಾರ್ ಆಧಾರಿತವಾದ ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ (Aadhaar based FAT) ಬಳಸುವ ಫೀಚರ್ ಅನ್ನು ಪರಿಚಯಿಸಲಾಗಿದೆ. ಇದರಿಂದ ಯುಎಎನ್ ಸಕ್ರಿಯಗೊಳಿಸುವ ಕ್ರಿಯೆ ಸುಗಮಗೊಳ್ಳಲಿದೆ.

ಯುಎಎನ್ ಎಂಬುದು ಇಪಿಎಫ್ ಖಾತೆ ಹೊಂದಿರುವ ಉದ್ಯೋಗಿಗೆ ಸೃಷ್ಟಿಸಲಾಗುವ ಅನನ್ಯ ಸಂಖ್ಯೆ. ಒಬ್ಬ ಉದ್ಯೋಗಿ ಒಂದೇ ಯುಎಎನ್ ಸಂಖ್ಯೆ ಇಟ್ಟುಕೊಳ್ಳಬಹುದು. ಈ ಸಂಖ್ಯೆ ಅಡಿಯಲ್ಲಿ ಆ ಉದ್ಯೋಗಿಯ ಎಲ್ಲಾ ಇಪಿಎಫ್ ಖಾತೆಗಳು ಸೇರುತ್ತವೆ. ಉದ್ಯೋಗಿಯು ಕೆಲಸ ಬದಲಿಸಿದಾಗ ಹೊಸ ಪಿಎಫ್ ಖಾತೆ ರಚನೆ ಮಾಡಲಾಗುತ್ತದಾದರೂ ಯುಎಎನ್ ಒಂದೇ ಇರುತ್ತದೆ. ಹೊಸ ಉದ್ಯೋಗ ಸ್ಥಳದಲ್ಲಿ ಯುಎಎನ್ ನಂಬರ್ ತಿಳಿಸಿದರೆ ಸಾಕು, ಇಪಿಎಫ್ ಖಾತೆಗೆ ಯುಎಎನ್ ಅನ್ನು ಲಿಂಕ್ ಮಾಡಬಹುದು.

ಉದ್ಯೋಗಿ ಕೆಲಸ ಮಾಡುವ ಕಂಪನಿ ವತಿಯಿಂದ ಯುಎಎನ್ ಸೃಷ್ಟಿಸಲಾಗುತ್ತದೆ. ಈ ವೇಳೆ, ತಂದೆಯ ಹೆಸರು, ಮೊಬೈಲ್ ನಂಬರ್ ಇತ್ಯಾದಿ ವೈಯಕ್ತಿಕ ಮಾಹಿತಿಯಲ್ಲಿ ತಪ್ಪುಗಳಾಗುವುದು ಸಾಮಾನ್ಯವಾಗಿದೆ. ಹಾಗೆಯೇ, ಯುಎಎನ್ ರಚಿಸಲಾದರೂ ಆ ಬಗ್ಗೆ ಉದ್ಯೋಗಿಗೆ ಅರಿವಿರುವುದಿಲ್ಲ. ಎಷ್ಟೋ ಬಾರಿ ಉದ್ಯೋಗಿಗೆ ತನ್ನ ಯುಎಎನ್ ಸಂಖ್ಯೆ ಏನು ಎಂಬುದು ಗೊತ್ತಿರುವುದಿಲ್ಲ. ಇದರಿಂದಾಗಿ ಸಾಕಷ್ಟು ಯುಎಎನ್​​ಗಳು ಸಕ್ರಿಯಗೊಳ್ಳದೇ ಹಾಗೇ ಇವೆ.

ಇದನ್ನೂ ಓದಿ
Image
ಈ ಎರಡು ಕ್ರಮಗಳಿಂದ ಇಪಿಎಫ್​ ಪ್ರಕ್ರಿಯೆ ಮತ್ತಷ್ಟು ಸಲೀಸು
Image
ಈ ವರ್ಷದ ಪಿಎಫ್ ಹಣಕ್ಕೆ ಶೇ. 8.25 ಬಡ್ಡಿ
Image
2024-25ಕ್ಕೆ ಇಪಿಎಫ್ ಬಡ್ಡಿ ಶೇ. 8.25?
Image
ಹಳೆಯ ಇಪಿಎಫ್ ಹಣವನ್ನು ಹೊಸ ಖಾತೆಗೆ ರವಾನಿಸುವುದು ಹೇಗೆ?

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಠೇವಣಿ ಪ್ಲಾನ್ ಸಖತ್ ಆದಾಯ ಸೃಷ್ಟಿಸುವ ಮಾರ್ಗ

ಇಪಿಎಫ್​​ಒ ವತಿಯಿಂದ 1.26 ಕೋಟಿ ಯುಎಎನ್ ನೀಡಲಾಗಿದೆ. ಇದರಲ್ಲಿ ಶೇ. 35ರಷ್ಟು ಮಾತ್ರವೇ ಆ್ಯಕ್ಟಿವೇಟ್ ಆಗಿರುವುದು. ಯುಎಎನ್ ಆ್ಯಕ್ಟಿವೇಟ್ ಆಗಿದ್ದರೆ ಆನ್​​ಲೈನ್​​ನಲ್ಲಿ ಇಪಿಎಫ್ ವಹಿವಾಟನ್ನು ಸುಲಭವಾಗಿ ಮಾಡಬಹುದು.

ಉಮಂಗ್ ಆ್ಯಪ್​​ನಲ್ಲಿ ಫೇಸ್ ಅಥೆಂಟಿಕೇಶ್ ಮೂಲಕ ಯುಎಎನ್ ಸಕ್ರಿಯಗೊಳಿಸಿ…

ಉಮಂಗ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್​​​ಡಿ ಆ್ಯಪ್ ಮೂಲಕ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಯುಎಎನ್ ಜನರೇಟ್ ಮಾಡಬಹುದು. ಈ ಎರಡು ಆ್ಯಪ್​​ಗಳು ನಿಮ್ಮಲ್ಲಿ ಇಲ್ಲದಿದ್ದರೆ ಡೌನ್​​​ಲೋಡ್ ಮಾಡಿಕೊಳ್ಳಿ.

  • ಉಮಂಗ್ ಆ್ಯಪ್ ತೆರೆದು, ಯುಎಎನ್ ಸರ್ವಿಸಸ್ ಅಡಿಯಲ್ಲಿ ‘ಯುಎಎನ್ ಅಲಾಟ್ಮೆಂಟ್ ಅಂಡ್ ಆ್ಯಕ್ಟಿವೇಶನ್’ಗೆ ಹೋಗಿರಿ.
  • ಅಲ್ಲಿ ಆಧಾರ್ ನಂಬರ್ ನಮೂದಿಸಿ. ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನೂ ನಮೂದಿಸಿ.
  • ಒಟಿಪಿ ಸಲ್ಲಿಸಿ
  • ಬಳಿಕ ಮೊಬೈಲ್​​ನಲ್ಲೇ ಕ್ಯಾಮೆರಾ ಬಳಸಿ ನಿಮ್ಮ ಲೈವ್ ಫೋಟೋ ಸೆರೆಹಿಡಿಯಿರಿ.
  • ನಿಮ್ಮ ಆಧಾರ್ ಮಾಹಿತಿ ಸರಿ ಇದ್ದಲ್ಲಿ ಯುಎಎನ್ ಜನರೇಟ್ ಆಗುತ್ತದೆ.

ಇದನ್ನೂ ಓದಿ: ಎಲ್ಲಾ 15 ವರ್ಷಕ್ಕೂ ಒಂದೇ ಬಡ್ಡಿದರವಾ? ವರ್ಷದ ಕೊನೆಯಲ್ಲಿ ಮಾಡಿದ ಹೂಡಿಕೆಗೆ ಇಡೀ ವರ್ಷದ ಬಡ್ಡಿ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್

ಆಧಾರ್ ಮೂಲಕ ದೃಢೀಕರಣ ಆಗುವುದರಿಂದ ವ್ಯಕ್ತಿಯ ಗುರುತು ನಿಖರವಾಗಿರುತ್ತದೆ. ಬಹಳ ಸುಲಭವಾಗಿ ಯುಎಎನ್ ಜನರೇಟ್ ಮಾಡಬಹುದು. ಯುಎಎನ್ ಆ್ಯಕ್ಟಿವೇಶನ್ ಕೂಡ ಇದೇ ಪ್ರಕ್ರಿಯೆಯಲ್ಲಿ ಮಾಡಬಹುದು.

ಯುಎಎನ್ ಆ್ಯಕ್ಟಿವೇಟ್ ಆದ ಬಳಿಕ ಉದ್ಯೋಗಿಗಳು ಇಪಿಎಫ್​​ನ ಪಾಸ್​​ಬುಕ್ ಇತ್ಯಾದಿ ಸರ್ವಿಸ್​ಗಳನ್ನು ಪಡೆಯಬಹುದು. ಆನ್​ಲೈನ್​​ನಲ್ಲಿ ಇಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ