ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ ಏನು?
ನಟ ಮಡೆನೂರು ಮತ್ತು ಅವರ ಸ್ನೇಹಿತೆಯ ವೈಯಕ್ತಿಕ ಜಗಳ ಬೀದಿಗೆ ಬಂದಿದೆ. ಆದರೆ ಈ ವಿವಾದದಲ್ಲಿ ಅನಗತ್ಯವಾಗಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಅಪ್ಪಣ್ಣ ಅವರ ಹೆಸರು ಕೂಡ ತಳುಕು ಹಾಕಿಕೊಂಡಿತು. ಈ ಕುರಿತು ಸ್ವತಃ ಅಪ್ಪಣ್ಣ ಅವರೇ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ.
ನಟ ಮಡೆನೂರು ಮನು (Madenur Manu) ಹಾಗೂ ಅವರ ಸ್ನೇಹಿತೆಯ ನಡುವಿನ ವೈಯಕ್ತಿಕ ಜಗಳ ಬೀದಿಗೆ ಬಂದಿದೆ. ಆದರೆ ಈ ವಿವಾದದಲ್ಲಿ ಅನಗತ್ಯವಾಗಿ ನಟ ಅಪ್ಪಣ್ಣ ಅವರ ಹೆಸರು ಕೂಡ ತಳುಕು ಹಾಕಿಕೊಂಡಿತು. ಈ ಬಗ್ಗೆ ಸ್ವತಃ ಅಪ್ಪಣ್ಣ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಅಮ್ಮ ನಮಗೆ ಬದುಕುವ ರೀತಿಯನ್ನು, ಇನ್ನೊಬ್ಬರನ್ನು ಗೌರವಿಸುವ ರೀತಿಯನ್ನು ಹೇಳಿಕೊಟ್ಟಿದ್ದಾಳೆ. ಬೇರೆಯವರ ಅನ್ನ ಕಿತ್ತುಕೊಂಡು ತಿನ್ನಬೇಡ. ನಿನ್ನ ಕಾಲಮೇಲೆ ನಿಂತುಕೊಂಡು ಬದುಕು ಅಂತ ಹೇಳಿಕೊಟ್ಟಿದ್ದಾಳೆ. ಅದೇ ಮಾರ್ಗದಲ್ಲಿ ನಾನು ಬದುಕುತ್ತಿದ್ದೇನೆ. ಜರ್ನಿಯಲ್ಲಿ ಎಲ್ಲರಿಗೂ ನೋವು ನಲಿವು ಇದ್ದೇ ಇರುತ್ತದೆ. ಗುರಿ ಬಿಡಬಾರದು. ಸುಸಂಸ್ಕೃತ ದಾರಿ ಮರೆಯಬಾರದು. ಸಂತ್ರಸ್ತೆಯ ಆಡಿಯೋ ಬಗ್ಗೆ ಆಕೆಯೇ ಸ್ಪಷ್ಟನೆ ನೀಡಿದ್ದಾರೆ. ಅಪ್ಪಣ್ಣನ ತಪ್ಪು ಇಲ್ಲ ಅಂತ ಆಕೆ ಹೇಳಿದ್ದಾರೆ. ಹಾಗಾಗಿ ಎಲ್ಲರಿಗೂ ಉತ್ತರ ಸಿಕ್ಕಿದೆ’ ಎಂದು ಅಪ್ಪಣ್ಣ (Appanna) ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
