USD Vs Rupee Value: ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ನೆಲ ಕಚ್ಚಲು ಇಲ್ಲಿವೆ ಕಾರಣಗಳು
ಭಾರತದ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ. ಇದರ ಹಿಂದಿರುವ ಕಾರಣಗಳೇನು ಎಂಬ ವಿಶ್ಲೇಷಣೆ ಇಲ್ಲಿದೆ.
ಭಾರತೀಯ ರೂಪಾಯಿ ಮೌಲ್ಯ (Rupee Value) ಮೇ 10ನೇ ತಾರೀಕಿನ ಮಂಗಳವಾರದಂದು ಯುಎಸ್ ಡಾಲರ್ ವಿರುದ್ಧ 77.24ರಲ್ಲಿ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಮೂರನೇ ದಿನಕ್ಕೂ ನಷ್ಟವನ್ನು ವಿಸ್ತರಿಸಿದೆ. ಸೋಮವಾರದಂದು ರೂಪಾಯಿ ಮೌಲ್ಯವು 54 ಪೈಸೆಗಳಷ್ಟು ಕುಸಿದು, ಯುಎಸ್ ಡಾಲರ್ ಎದುರು 77.44ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿತು. ಅಮೆರಿಕನ್ ಕರೆನ್ಸಿಯ ಬಲ ಮತ್ತು ಅನಿಯಮಿತ ವಿದೇಶಿ ನಿಧಿಯ ಹೊರಹರಿವಿನಿಂದ ಒತ್ತಡಕ್ಕೆ ಒಳಗಾಯಿತು. ಶುಕ್ರವಾರ ರೂಪಾಯಿ 55 ಪೈಸೆ ಕುಸಿದು, 76.90ಕ್ಕೆ ತಲುಪಿತ್ತು. ವಿದೇಶೀ ವಿನಿಮಯ ವ್ಯಾಪಾರಿಗಳು ಹಾಗೂ ಮಾರುಕಟ್ಟೆ ಟ್ರ್ಯಾಕರ್‌ಗಳು ಹೇಳುವಂತೆ, ಯುಎಸ್‌ನಲ್ಲಿ ಹೆಚ್ಚುತ್ತಿರುವ ಬಾಂಡ್ ಯೀಲ್ಡ್ (ಇಳುವರಿಗಳ) ಮಧ್ಯೆ ಅಪಾಯವು ಕಡಿಮೆ ಆಗಿದೆ. ಮತ್ತು ಹಣದುಬ್ಬರದ ಬಗ್ಗೆ ಹೆಚ್ಚುತ್ತಿರುವ ಕಳವಳ ಜಾಗತಿಕ ಕೇಂದ್ರ ಬ್ಯಾಂಕ್‌ಗಳಿಂದ ಹೆಚ್ಚು ಆಕ್ರಮಣಕಾರಿ ದರ ಹೆಚ್ಚಳವನ್ನು ಉತ್ತೇಜಿಸುತ್ತಿವೆ.
ಬಲವಾದ ಡಾಲರ್ ಆನಂದ್ ರಾಠಿ ಷೇರುಗಳು ಮತ್ತು ಸ್ಟಾಕ್ ಬ್ರೋಕರ್ಸ್ ಕರೆನ್ಸಿ ಮತ್ತು ಎನರ್ಜಿ ಸಂಶೋಧನಾ ವಿಶ್ಲೇಷಕ ರಾಯ್ಸ್ ವರ್ಗೀಸ್ ಜೋಸೆಫ್ ಮಾತನಾಡಿ, ಡಾಲರ್‌ನ ಬಲವಾದ ಸ್ಥಾನ, ಈಕ್ವಿಟಿ ಮಾರುಕಟ್ಟೆಯಲ್ಲಿನ ತೀವ್ರ ಮಾರಾಟ ಮತ್ತು ಹೆಚ್ಚಿದ ಕಚ್ಚಾ ಬೆಲೆಗಳು ಹಾಗೂ ದೇಶೀಯ ಹಣದುಬ್ಬರವು ಭಾರತೀಯ ರೂಪಾಯಿ ಕುಸಿತದ ಹಿಂದಿನ ಕಾರಣಗಳಾಗಿವೆ ಎಂದಿದ್ದಾರೆ ಎಂಬುದಾಗಿ ಪಿಟಿಐ ವರದಿಯ ಮಾಡಿದೆ.
ಜೋಸೆಫ್ ಅವರು ಹೇಳಿರುವಂತೆ, ಭಾರತೀಯ ರೂಪಾಯಿಯ ಮೌಲ್ಯವು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬಲವಾದ ಡಾಲರ್ ಸೂಚ್ಯಂಕ ಮತ್ತು ಯುಎಸ್‌ನಲ್ಲಿ ಟ್ರೆಷರಿ ಯೀಲ್ಡ್ಗಳ ಮಧ್ಯೆ ಏಷ್ಯನ್ ದೇಶಗಳ ಕರೆನ್ಸಿ ದುರ್ಬಲತೆಯೂ ಸೇರಿದೆ.
“ಡಾಲರ್ ತನ್ನ ಪ್ರಮುಖ ಕರೆನ್ಸಿಗಳ ವಿರುದ್ಧ ವ್ಯಾಪಕವಾಗಿ ಏರಿದ ಕಾರಣ ರೂಪಾಯಿ ಸೋಮವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಕಳೆದ ವಾರದ ಕೇಂದ್ರ ಬ್ಯಾಂಕ್ ನೀತಿ ಕ್ರಮವು ಹೆಚ್ಚಿನ ಕರೆನ್ಸಿಗಳಲ್ಲಿ ಏರಿಳಿತಕ್ಕೆ ಕಾರಣವಾಯಿತು. ಬಲವಾದ ಡಾಲರ್ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆಯು ಒಟ್ಟಾರೆ ಮಾರುಕಟ್ಟೆ ಭಾವನೆಯನ್ನು ತೂಗುತ್ತಿದೆ,” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ವಿದೇಶೀ ವಿನಿಮಯ ಮತ್ತು ಬುಲಿಯನ್ ವಿಶ್ಲೇಷಕ ಗೌರಂಗ್ ಸೋಮಯ್ಯ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಭಾರೀ ಮಾರಾಟ ಅಮೆರಿಕನಲ್ಲಿನ ನೈಜ ದರಗಳು ಪಾಸಿಟಿವ್ ಆಗಿ ಮಾರ್ಪಟ್ಟಿದ್ದರಿಂದ ಈಕ್ವಿಟಿ ಮಾರುಕಟ್ಟೆಗಳು ತೀವ್ರ ಮಾರಾಟಕ್ಕೆ ಸಾಕ್ಷಿಯಾದವು. ಮುಂದೆ ಹಣದುಬ್ಬರವನ್ನು ಪಳಗಿಸಲು ಹೆಚ್ಚಿನ ದರ ಹೆಚ್ಚಳದ ಅಗತ್ಯವನ್ನು ಮೌಲ್ಯಮಾಪನ ಮಾಡುವ ಮೂಲಕ ಹೂಡಿಕೆದಾರರು ಅಪಾಯವನ್ನು ಎದುರಿಸುತ್ತಾರೆ ಎಂದು ಜೋಸೆಫ್ ಹೇಳಿದ್ದಾರೆ.
ದೇಶೀಯ ಹಣದುಬ್ಬರ ಏರಿದ ಕಚ್ಚಾ ತೈಲ ಬೆಲೆಗಳು ಮತ್ತು ಹೆಚ್ಚುತ್ತಿರುವ ದೇಶೀಯ ಹಣದುಬ್ಬರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮೇಲಿನ ಸ್ತರವನ್ನು ಮೀರಿರುವುದು, ದೇಶೀಯ ಸೆಕ್ಯೂರಿಟೀಸ್ಗಳಿಂದ ಮತ್ತಷ್ಟು ಎಫ್‌ಐಐ ಮಾರಾಟವನ್ನು ಉತ್ತೇಜಿಸಬಹುದು ಎಂದು ಜೋಸೆಫ್ ವಿವರಿಸಿದ್ದಾರೆ. ಈ ವಾರ ಭಾರತ ಮತ್ತು ಯುಎಸ್‌ನ ಹಣದುಬ್ಬರ ಅಂಕಿ-ಅಂಶಗಳ ಮೇಲೆ ಕೇಂದ್ರೀಕರಿಸಲಾಗುವುದು ಎಂದು ಸೋಮಯ್ಯ ಹೇಳಿದ್ದಾರೆ.
ಎಲ್‌ಕೆಪಿ ಸೆಕ್ಯೂರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಪ್ರಕಾರ, “ಡಾಲರ್ ಯುಎಸ್ಡಿ 104ಕ್ಕಿಂತ ಹೆಚ್ಚಿರುವುದು ಎಫ್‌ಐಐ ಉದಯೋನ್ಮುಖ ಮಾರುಕಟ್ಟೆಗಳಿಂದ ಆಕ್ರಮಣಕಾರಿಯಾಗಿ ನಿರ್ಗಮಿಸುತ್ತಿದೆ ಎಂದು ಸೂಚಿಸುತ್ತದೆ. ಅದೇ ರೀತಿ ಹೆಚ್ಚಿನ ಏರಿಳಿತದ ಸೂಚ್ಯಂಕವು ಯಾವುದೇ ಟ್ರೆಂಡ್ ಉಳಿಯುವುದಿಲ್ಲ ಎಂಬುದರ ಸೂಚಕವೂ ಹೌದು. ಹೆಚ್ಚಿನ ಹಣದುಬ್ಬರವು ಆಕ್ರಮಣಕಾರಿ ಲಿಕ್ವಿಡಿಟಿ ಒತ್ತಡದಿಂದ ಕೇಂದ್ರೀಯ ಬ್ಯಾಂಕ್ ಒತ್ತಡವನ್ನು ಹೆಚ್ಚಿಸುತ್ತದೆ. ಕಚ್ಚಾ ತೈಲ ಬೆಲೆಗಳು ಸಹ ಈಗ ಒಂದು ತಿಂಗಳಿನಿಂದ ಏರಿಕೆಯಾಗುತ್ತಿದ್ದು, ಇದು ರೂಪಾಯಿಯನ್ನು ಇನ್ನಷ್ಟು ದುರ್ಬಲಗೊಳಿಸಿದೆ.”
ಡಾಲರ್‌ಗೆ ರೂಪಾಯಿ “USD-INR (ಸ್ಪಾಟ್) ಪಾಸಿಟಿವ್ ಆಗಿ ವ್ಯಾಪಾರ ಮಾಡಲು ಮತ್ತು 77.20 ಮತ್ತು 77.80ರ ವ್ಯಾಪ್ತಿಯಲ್ಲಿ ಇರುವುದನ್ನು ನಾವು ನಿರೀಕ್ಷಿಸುತ್ತೇವೆ,” ಎಂದು ಸೋಮಯ್ಯ ಹೇಳಿದ್ದಾರೆ. “ಈ ಮಧ್ಯೆ ಮೇ 4ನೇ ತಾರೀಕಿನ ಆರ್‌ಬಿಐ ಸಭೆಯು ರೂಪಾಯಿಯನ್ನು ಬಲಪಡಿಸಲು ಸ್ವಲ್ಪ ಮಟ್ಟಿಗೆ ಏನೂ ಸಹಾಯ ಮಾಡಲಿಲ್ಲ. ಮುಂದೆ ರೂಪಾಯಿ ಮೌಲ್ಯವು 77.80ರ ಮಟ್ಟಕ್ಕೆ ದುರ್ಬಲಗೊಳ್ಳುವುದನ್ನು ನಾವು ನೋಡಬಹುದು,” ಎಂದು ಜೋಸೆಫ್ ಹೇಳಿದ್ದಾರೆ.
“ಡಾಲರ್ ಏರಿಕೆಯು ಬೆಲೆಗಳಿಗೆ ಪ್ರಮುಖ ಅಪಾಯವಾಗಿ ಇರುವುದರಿಂದ ರೂಪಾಯಿ ತನ್ನ ಇಳಿಮುಖದ ಪ್ರಯಾಣವನ್ನು ಮುಂದುವರೆಸುವುದನ್ನು ನಾನು ನೋಡುತ್ತೇನೆ. ಡಾಲರ್ ಸೂಚ್ಯಂಕವು ತಣ್ಣಗಾದರೆ ಮಾತ್ರ ರೂಪಾಯಿಗೆ ಪರಿಹಾರವನ್ನು ಕಾಣಬಹುದು,” ಎಂದು ತ್ರಿವೇದಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Indian Rupee Value: ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಭಾರೀ ಕುಸಿತ, ಯಾವ ದೇಶದ ವಿರುದ್ಧ ಎಷ್ಟಿದೆ ಗೊತ್ತಾ?