Indian Rupee Value: ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಭಾರೀ ಕುಸಿತ, ಯಾವ ದೇಶದ ವಿರುದ್ಧ ಎಷ್ಟಿದೆ ಗೊತ್ತಾ?
ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿದೆ. ಮೇ 9ನೇ ತಾರೀಕಿನ ಸೋಮವಾರಂದು ವಿಶ್ವದ ಪ್ರಮುಖ ಕರೆನ್ಸಿಗಳ ವಿರುದ್ಧದ ರೂಪಾಯಿ ಮೌಲ್ಯದ ವಿವರ ಇಲ್ಲಿದೆ.
ಉನ್ನತ ವ್ಯಾಸಂಗ, ಉದ್ಯೋಗ, ಪ್ರಯಾಣ, ಪ್ರವಾಸ, ಖರೀದಿ, ಆಮದು- ರಫ್ತು ಹೀಗೆ ಬೇರೆ ಬೇರೆ ವಿಚಾರಗಳಿಗೆ ವಿಶ್ವದ ಪ್ರಮುಖ ಕರೆನ್ಸಿಗಳ (Currency) ಮೌಲ್ಯ ತುಂಬ ಮುಖ್ಯವಾಗುತ್ತದೆ. ಮೇ 9ನೇ ತಾರೀಕಿನ ಸೋಮವಾರದಂದು ವಿವಿಧ ದೇಶಗಳ ಕರೆನ್ಸಿ ಮೌಲ್ಯ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಭಾರತದ ಕರೆನ್ಸಿಯಾದ ರೂಪಾಯಿ ಮೌಲ್ಯ ಯಾವ ದೇಶದ ಕರೆನ್ಸಿ ವಿರುದ್ಧ ಎಷ್ಟಿದೆ ಎಂಬ ವಿವರ ನಿಮ್ಮೆದುರು ಇದ್ದು, ಈ ವಿವರಗಳಿಂದ ನಿಮಗೆ ನೆರವಾಗಬಹುದು.
ಅಮೆರಿಕ ಯುಎಸ್ಡಿ 1ಕ್ಕೆ= 77.44 ಭಾರತದ ರೂಪಾಯಿ
ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ಗೆ= 95.56 ಭಾರತದ ರೂಪಾಯಿ
ಯುರೋಗೆ= 81.64 ಭಾರತದ ರೂಪಾಯಿ
ಚೀನಾದ ಯುವಾನ್= 11.52 ಭಾರತದ ರೂಪಾಯಿ
ಜಪಾನ್ನ ಯೆನ್= 0.59 (59 ಪೈಸೆ)
ಕುವೈತ್ ದಿನಾರ್= 252.32 ಭಾರತದ ರೂಪಾಯಿ
ಇರಾನ್ನ ರಿಯಾಲ್= 0.0018 ಪೈಸೆ
ಬಾಂಗ್ಲಾದೇಶ್ ಟಾಕಾ= 0.89 (88 ಪೈಸೆ)
ಶ್ರೀಲಂಕಾ ರೂಪಾಯಿ= 0.21 (21 ಪೈಸೆ)
ಪಾಕಿಸ್ತಾನದ ರೂಪಾಯಿ= 0.41 (41 ಪೈಸೆ)
ನೇಪಾಳದ ರೂಪಾಯಿ= 0.62 (62 ಪೈಸೆ)
ರಷ್ಯಾದ ರೂಬೆಲ್= 1.11 (1.17 ರೂ.)
ಅಂತರರಾಷ್ಟ್ರೀಯ ವಹಿವಾಟುಗಳಿಗೆ, ಅಂದರೆ ಕಚ್ಚಾ ತೈಲ, ಅನಿಲ ಖರೀದಿ ಸೇರಿದಂತೆ ಇತರ ವ್ಯವಹಾರಗಳಿಗೆ ಅಮೆರಿಕನ್ ಡಾಲರ್ ಬಳಸಲಾಗುತ್ತದೆ. ಆದರೆ ಯುನೈಟೆಡ್ ಕಿಂಗ್ಡಮ್ನ ಪೌಂಡ್ ಸ್ಟರ್ಲಿಂಗ್, ಯುರೋಪ್ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್ ದಿನಾರ್ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Rupee Hits All Time Low: ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ 77.31 ಮುಟ್ಟಿದ ರೂಪಾಯಿ ಮೌಲ್ಯ
Published On - 7:24 pm, Mon, 9 May 22