AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Interest Rate: ಕೊಟಕ್​ ಮಹೀಂದ್ರಾ, ಬಂಧನ್​ ಬ್ಯಾಂಕ್​ನಿಂದ ಎಫ್​ಡಿ ಬಡ್ಡಿ ದರ ಏರಿಕೆ; ಇದೇ ಮಾರ್ಗದಲ್ಲಿ ಇನ್ನಷ್ಟು ಬ್ಯಾಂಕ್​ಗಳು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೋ ದರವನ್ನು ಹೆಚ್ಚಳ ಮಾಡಿದ ಮೇಲೆ ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಬಂಧನ್​ ಬ್ಯಾಂಕ್​ನಿಂದ ಬಡ್ಡಿ ದರ ಪರಿಷ್ಕರಣೆ ಮಾಡಲಾಗಿದೆ.

FD Interest Rate: ಕೊಟಕ್​ ಮಹೀಂದ್ರಾ, ಬಂಧನ್​ ಬ್ಯಾಂಕ್​ನಿಂದ ಎಫ್​ಡಿ ಬಡ್ಡಿ ದರ ಏರಿಕೆ; ಇದೇ ಮಾರ್ಗದಲ್ಲಿ ಇನ್ನಷ್ಟು ಬ್ಯಾಂಕ್​ಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 09, 2022 | 6:02 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ಪ್ರಮುಖ ಬಡ್ಡಿ ದರಗಳನ್ನು ಏರಿಕೆ ಮಾಡುತ್ತಿದ್ದಂತೆ ಬಹಳಷ್ಟು ಬ್ಯಾಂಕ್​ಗಳು ಎಫ್​ಡಿ ಮೇಲಿನ ಬಡ್ಡಿ ದರಗಳ ಹೆಚ್ಚಳಕ್ಕೆ ಮುಂದಾಗಿವೆ. ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೀಗೆ ಕನಿಷ್ಠ 5 ಬ್ಯಾಂಕ್​ಗಳು ಫಿಕ್ಸೆಡ್​ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ. ಹಣದುಬ್ಬರವನ್ನು ಹತೋಟಿಗೆ ತರಬೇಕು ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಈಚೆಗೆ 40 ಬೇಸಿಸ್ ಪಾಯಿಂಟ್ಸ್ ಏರಿಕೆ ಮಾಡಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಎಫ್​ಡಿ ಬಡ್ಡಿ ದರಗಳು ಮೇ 6ರಿಂದ ಜಾರಿಗೆ ಬಂದಿದೆ. 2 ಕೋಟಿ ರೂಪಾಯಿ ಒಳಗಿನ ಮೊತ್ತಕ್ಕೆ ಇದು ಅನ್ವಯ ಆಗುತ್ತದೆ. ಕಳೆದ ಗುರುವಾರದಂದು ನೀಡಿರುವ ಪತ್ರಿಕಾ ಹೇಳಿಕೆ ಪ್ರಕಾರ, ಕೊಟಕ್ ಮಹೀಂದ್ರಾ ಬ್ಯಾಂಕ್ ಎಫ್​ಡಿ ದರ 30ರಿಂದ 50 ಬಿಪಿಎಸ್​ ಹೆಚ್ಚಿಸಿದೆ. ಇನ್ನು ಬಂಧನ್ ಬ್ಯಾಂಕ್ 50 ಬಿಪಿಎಸ್​ ತನಕ ಜಾಸ್ತಿ ಮಾಡಿದ್ದರೆ, ಈ ದರವು 2 ಕೋಟಿ ರೂಪಾಯಿ ಒಳಗಿನ ಮೊತ್ತಕ್ಕೆ, ಮೇ 4ರ ಬುಧವಾರದಿಂದ ಅನ್ವಯಿಸುತ್ತದೆ.

ಕೊಟಕ್ ಮಹೀಂದ್ರಾ ಬ್ಯಾಂಕ್​ನಲ್ಲಿ 2 ಕೋಟಿ ರೂಪಾಯಿಯೊಳಗಿನ ಮೊತ್ತಕ್ಕೆ ನೀಡುತ್ತಿರುವ ಎಫ್​ಡಿ ಪರಿಷ್ಕೃತ ಬಡ್ಡಿ ದರ (ವಾರ್ಷಿಕ) 7ರಿಂದ 14 ದಿನ- ಜನ ಸಾಮಾನ್ಯರಿಗೆ: ಶೇ 2.50, ಹಿರಿಯ ನಾಗರಿಕರಿಗೆ ಶೇ 3

15ರಿಂದ 30 ದಿನ- ಜನ ಸಾಮಾನ್ಯರಿಗೆ: ಶೇ 2.50, ಹಿರಿಯ ನಾಗರಿಕರಿಗೆ ಶೇ 3

31ರಿಂದ 45 ದಿನ- ಜನ ಸಾಮಾನ್ಯರಿಗೆ: ಶೇ 3, ಹಿರಿಯ ನಾಗರಿಕರಿಗೆ ಶೇ 3.50

46ರಿಂದ 90 ದಿನ- ಜನ ಸಾಮಾನ್ಯರಿಗೆ: ಶೇ 3, ಹಿರಿಯ ನಾಗರಿಕರಿಗೆ ಶೇ 3.50

91ರಿಂದ 120 ದಿನ- ಜನ ಸಾಮಾನ್ಯರಿಗೆ: ಶೇ 3.50, ಹಿರಿಯ ನಾಗರಿಕರಿಗೆ ಶೇ 4

121ರಿಂದ 179 ದಿನ- ಜನ ಸಾಮಾನ್ಯರಿಗೆ: ಶೇ 3.50, ಹಿರಿಯ ನಾಗರಿಕರಿಗೆ ಶೇ 4

180 ದಿನ- ಜನ ಸಾಮಾನ್ಯರಿಗೆ: ಶೇ 4.75, ಹಿರಿಯ ನಾಗರಿಕರಿಗೆ ಶೇ 5.25

181ರಿಂದ 269 ದಿನ- ಜನ ಸಾಮಾನ್ಯರಿಗೆ: ಶೇ 4.75, ಹಿರಿಯ ನಾಗರಿಕರಿಗೆ ಶೇ 5.25

270 ದಿನ- ಜನ ಸಾಮಾನ್ಯರಿಗೆ: ಶೇ 4.75, ಹಿರಿಯ ನಾಗರಿಕರಿಗೆ ಶೇ 5.25

271ರಿಂದ 363 ದಿನ- ಜನ ಸಾಮಾನ್ಯರಿಗೆ: ಶೇ 4.75, ಹಿರಿಯ ನಾಗರಿಕರಿಗೆ ಶೇ 5.25

364 ದಿನ- ಜನ ಸಾಮಾನ್ಯರಿಗೆ: ಶೇ 5.25, ಹಿರಿಯ ನಾಗರಿಕರಿಗೆ ಶೇ 5.25

365ರಿಂದ 389 ದಿನ- ಜನ ಸಾಮಾನ್ಯರಿಗೆ: ಶೇ 5.40, ಹಿರಿಯ ನಾಗರಿಕರಿಗೆ ಶೇ 5.90

390 ದಿನ (12 ತಿಂಗಳು 25 ದಿನ)- ಜನ ಸಾಮಾನ್ಯರಿಗೆ: ಶೇ 5.50, ಹಿರಿಯ ನಾಗರಿಕರಿಗೆ ಶೇ 6

391 ದಿನದಿಂದ 23 ತಿಂಗಳಿಗಿಂತ ಕಡಿಮೆ- ಜನ ಸಾಮಾನ್ಯರಿಗೆ: ಶೇ 5.60, ಹಿರಿಯ ನಾಗರಿಕರಿಗೆ ಶೇ 6.10

23 ತಿಂಗಳು- ಜನ ಸಾಮಾನ್ಯರಿಗೆ: ಶೇ 5.60, ಹಿರಿಯ ನಾಗರಿಕರಿಗೆ ಶೇ 6.10

23 ತಿಂಗಳು 1 ದಿನದಿಂದ 2 ವರ್ಷಕ್ಕಿಂತ ಕಡಿಮೆ: ಜನ ಸಾಮಾನ್ಯರಿಗೆ: ಶೇ 5.60, ಹಿರಿಯ ನಾಗರಿಕರಿಗೆ ಶೇ 6.10

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: ಜನ ಸಾಮಾನ್ಯರಿಗೆ: ಶೇ 5.60, ಹಿರಿಯ ನಾಗರಿಕರಿಗೆ ಶೇ 6.10

3 ವರ್ಷದಿಂದ 4 ವರ್ಷಕ್ಕಿಂತ ಕಡಿಮೆ: ಜನ ಸಾಮಾನ್ಯರಿಗೆ: ಶೇ 5.75, ಹಿರಿಯ ನಾಗರಿಕರಿಗೆ ಶೇ 6.25

4 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ: ಜನ ಸಾಮಾನ್ಯರಿಗೆ: ಶೇ 5.75, ಹಿರಿಯ ನಾಗರಿಕರಿಗೆ ಶೇ 6.25

5 ವರ್ಷ ಮೇಲ್ಪಟ್ಟು 10 ವರ್ಷದೊಳಗೆ: ಜನ ಸಾಮಾನ್ಯರಿಗೆ: ಶೇ 5.75, ಹಿರಿಯ ನಾಗರಿಕರಿಗೆ ಶೇ 6.25

ಬಂಧನ್ ಬ್ಯಾಂಕ್​ನಲ್ಲಿ 2 ಕೋಟಿ ರೂಪಾಯಿಯೊಳಗಿನ ಮೊತ್ತಕ್ಕೆ ನೀಡುತ್ತಿರುವ ಎಫ್​ಡಿ ಪರಿಷ್ಕೃತ ಬಡ್ಡಿ ದರ (ವಾರ್ಷಿಕ) 7ರಿಂದ 14 ದಿನ- ಜನ ಸಾಮಾನ್ಯರಿಗೆ: ಶೇ 3, ಹಿರಿಯ ನಾಗರಿಕರಿಗೆ ಶೇ 3.75

15ರಿಂದ 30 ದಿನ- ಜನ ಸಾಮಾನ್ಯರಿಗೆ: ಶೇ 3, ಹಿರಿಯ ನಾಗರಿಕರಿಗೆ ಶೇ 3.75

31 ದಿನದಿಂದ 2 ತಿಂಗಳೊಳಗೆ- ಜನ ಸಾಮಾನ್ಯರಿಗೆ: ಶೇ 3.50, ಹಿರಿಯ ನಾಗರಿಕರಿಗೆ ಶೇ 4.25

2 ತಿಂಗಳಿಂದ 3 ತಿಂಗಳ ಒಳಗೆ- ಜನ ಸಾಮಾನ್ಯರಿಗೆ: ಶೇ 3.50, ಹಿರಿಯ ನಾಗರಿಕರಿಗೆ ಶೇ 4.25

3 ತಿಂಗಳಿಂದ 6 ತಿಂಗಳ ಒಳಗೆ- ಜನ ಸಾಮಾನ್ಯರಿಗೆ: ಶೇ 3.50, ಹಿರಿಯ ನಾಗರಿಕರಿಗೆ ಶೇ 4.25

6 ತಿಂಗಳಿಂದ 1 ವರ್ಷದೊಳಗೆ- ಜನ ಸಾಮಾನ್ಯರಿಗೆ: ಶೇ 4.50, ಹಿರಿಯ ನಾಗರಿಕರಿಗೆ ಶೇ 5.25

1 ವರ್ಷದಿಂದ 18 ತಿಂಗಳು- ಜನ ಸಾಮಾನ್ಯರಿಗೆ: ಶೇ 5.75, ಹಿರಿಯ ನಾಗರಿಕರಿಗೆ ಶೇ 6.50

18 ತಿಂಗಳು ಮೇಲ್ಪಟ್ಟು 2 ವರ್ಷಕ್ಕಿಂತ ಕಡಿಮೆ ಅವಧಿಗೆ- ಜನ ಸಾಮಾನ್ಯರಿಗೆ: ಶೇ 5.75, ಹಿರಿಯ ನಾಗರಿಕರಿಗೆ ಶೇ 6.50

2 ವರ್ಷದಿಂದ 3 ವರ್ಷದಿಂದ ಕಡಿಮೆ ಅವಧಿಗೆ- ಜನ ಸಾಮಾನ್ಯರಿಗೆ: ಶೇ 6.25, ಹಿರಿಯ ನಾಗರಿಕರಿಗೆ ಶೇ 7

3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಗೆ- ಜನ ಸಾಮಾನ್ಯರಿಗೆ: ಶೇ 6.25, ಹಿರಿಯ ನಾಗರಿಕರಿಗೆ ಶೇ 7

5 ವರ್ಷದಿಂದ 10 ವರ್ಷದೊಳಗೆ- ಜನ ಸಾಮಾನ್ಯರಿಗೆ: ಶೇ 5.60, ಹಿರಿಯ ನಾಗರಿಕರಿಗೆ ಶೇ 6.35

ಆರ್​ಬಿಐನಿಂದ ರೆಪೋ ದರ ಏರಿಕೆ ಆದ ಮೇಲೆ ಇನ್ನೂ ಹಲವು ಬ್ಯಾಂಕ್​ಗಳು ಎಫ್​ಡಿ ಬಡ್ಡಿ ದರಗಳನ್ನು ಏರಿಕೆ ಮಾಡಲಿವೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Repo Rate: ರೆಪೋ ದರ ಏರಿಕೆಯೊಂದಿಗೆ ಸಾಲದ ಕಂತು ಆಗಲಿದೆ ಭಾರಿ, ಬಡ್ಡಿ ದರ ದುಬಾರಿ; ಗೃಹ, ವಾಹನ ಮೊದಲಾದ ಸಾಲ ವಜ್ಜೆ

Published On - 5:34 pm, Mon, 9 May 22

ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ