Repo Rate: ರೆಪೋ ದರ ಏರಿಕೆಯೊಂದಿಗೆ ಸಾಲದ ಕಂತು ಆಗಲಿದೆ ಭಾರಿ, ಬಡ್ಡಿ ದರ ದುಬಾರಿ; ಗೃಹ, ವಾಹನ ಮೊದಲಾದ ಸಾಲ ವಜ್ಜೆ

ಆರ್​ಬಿಐನಿಂದ ರೆಪೋ ದರ ಏರಿಕೆ ಘೋಷಣೆ ಮಾಡಿದ ನಂತರ ಬಡ್ಡಿ ದರ ಹಾಗೂ ಇಎಂಐ ಎರಡೂ ಹೆಚ್ಚಾಗಲಿದೆ. ಅದು ಹೇಗೆ ಎಂಬುದರ ವಿವರ ಇಲ್ಲಿದೆ.

Repo Rate: ರೆಪೋ ದರ ಏರಿಕೆಯೊಂದಿಗೆ ಸಾಲದ ಕಂತು ಆಗಲಿದೆ ಭಾರಿ, ಬಡ್ಡಿ ದರ ದುಬಾರಿ; ಗೃಹ, ವಾಹನ ಮೊದಲಾದ ಸಾಲ ವಜ್ಜೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 05, 2022 | 12:01 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೋ ದರವನ್ನು (Repo Rate) 40 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಲಾಗಿದೆ. ನಿರಂತರವಾಗಿ ಏರುತ್ತಲೇ ಸಾಗಿದ್ದ ಹಣದುಬ್ಬರದ ಒತ್ತಡವನ್ನು ಇಳಿಸಿಕೊಳ್ಳುವುದಕ್ಕೆ ಇಂಥದ್ದೊಂದು ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ನಗದು ಮೀಸಲು ಅನುಪಾತವನ್ನು (Cash Reserve Ratio) 50 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದ್ದು, ಶೇ 4.50 ತಲುಪಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಈ ಏರಿಕೆ ಮೂಲಕವಾಗಿ 83,711.55 ಕೋಟಿ ರೂಪಾಯಿಯ ಲಿಕ್ವಿಡಿಟಿಯನ್ನು ಕಡಿಮೆ ಮಾಡಿದಂತಾಗುತ್ತದೆ. ಈ ಸಿಆರ್​ಆರ್ ಹೆಚ್ಚಳವು ಮೇ 21ರ ಮಧ್ಯರಾತ್ರಿಯಿಂದ ಜಾರಿಗೆ ಬರುತ್ತದೆ ಎಂದಿದ್ದಾರೆ. ಕೊನೆಯದಾಗಿ ರೆಪೋ ದರವನ್ನು ಕಡಿತ ಮಾಡಿದ್ದು 2020ರ ಮೇ ತಿಂಗಳಲ್ಲಿ. ಆ ನಂತರ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಏರಿಕೆಯು ತಕ್ಷಣದಿಂದಲೇ ಅನ್ವಯಿಸುತ್ತದೆ. ನಗದು ಮೀಸಲು ಅನುಪಾತ ಕೂಡ 50 ಬಿಪಿಎಸ್​ ಹೆಚ್ಚಳ ಮಾಡಿರುವುದರಿಂದ ಬಡ್ಡಿ ದರದ ಮೇಲೆ ಇನ್ನಷ್ಟು ಪ್ರಭಾವ ಬೀರುತ್ತದೆ.

ಏನಿದು ರೆಪೋ ದರ ಮತ್ತು ಏಕೆ ಮುಖ್ಯ? ಯಾವಾಗೆಲ್ಲ ವಾಣಿಜ್ಯ ಬ್ಯಾಂಕ್​ಗಳ ಬಳಿ ಹಣಕ್ಕೆ ಕೊರತೆ ಬೀಳುತ್ತದೋ ಆಗ ಆರ್​ಬಿಐನ ಸಂಪರ್ಕಿಸಿ ಸಾಲ ಪಡೆದುಕೊಳ್ಳುತ್ತವೆ. ಈ ಬ್ಯಾಂಕ್​ಗಳಿಗೆ ನಿರ್ದಿಷ್ಟ ದರದಲ್ಲಿ ಆರ್​ಬಿಐ ಸಾಲ ನೀಡುತ್ತದೆ. ಅದನ್ನೇ ರೆಪೋ ದರ ಎನ್ನಲಾಗುತ್ತದೆ. ಈ ದರ ಏರಿಸಬೇಕೋ ಇಳಿಸಬೇಕೋ ಅಥವಾ ಬದಲಾವಣೆ ಮಾಡದೆ ಹಾಗೇ ಉಳಿಸಿಕೊಳ್ಳಬೇಕೋ ಎಂಬುದನ್ನು ಆರ್​ಬಿಐ ನಿಯಮಿತವಾಗಿ ನಿರ್ಧರಿಸುತ್ತದೆ. ಕೇಂದ್ರ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯ ನಿರ್ಧಾರವು ಲಿಕ್ವಿಡಿಟಿ ಮತ್ತು ಭಾರತೀಯ ಆರ್ಥಿಕತೆಯ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತದೆ. ಹಣದುಬ್ಬರ ನಿಯಂತ್ರಣ ವಿಚಾರಕ್ಕೆ ಬಂದಲ್ಲಿ ಅದನ್ನು ನಿಯಂತ್ರಿಸಲು ಆರ್​ಬಿಐ ಬಳಿ ಇರುವ ಸಾಧನವೇ ರೆಪೋ ದರ. ಇದನ್ನು ಏರಿಸುವುದೋ ಅಥವಾ ಇಳಿಸುವುದೋ ಮಾಡುವ ಮೂಲಕ ವಾಣಿಜ್ಯ ಬ್ಯಾಂಕ್​ಗಳಿಗೆ ಸಾಲವನ್ನು ಹೆಚ್ಚು ದುಬಾರಿ ಅಥವಾ ಅಗ್ಗ ಮಾಡಬಹುದು. ಇನ್ನು ರೆಪೋ ದರ ಏರಿಸಿದರೆ ಹಣದುಬ್ಬರ ಕಡಿಮೆ ಆಗುತ್ತದೆ. ಮತ್ತು ಅದೇ ರೀತಿ ರೆಪೋ ಇಳಿಸಿದರೆ ಹಣದುಬ್ಬರ ಹೆಚ್ಚುತ್ತದೆ.

ಗೃಹ ಸಾಲ, ವಾಹನ ಸಾಲ ಪಡೆಯುವವರ ಪಾಲಿಗೆ ಇದೆಂಥ ಅರ್ಥ? ಆರ್​ಬಿಐನ ಈ ನಿರ್ಧಾರದಿಂದ ಬ್ಯಾಂಕ್​ಗಳು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಆದ್ದರಿಂದ ಗೃಹ ಸಾಲ, ವಾಹನ ಸಾಲ ದುಬಾರಿ ಆಗಲಿದೆ. ಒಂದು ವೇಳೆ ಸಾಲ ತೆಗೆದುಕೊಳ್ಳುವ ಯೋಜನೆ ಇದ್ದರೆ ಶೀಘ್ರವೇ ಪಡೆಯುವುದು ಉತ್ತಮ. ಇಲ್ಲದಿದ್ದರೆ ಸಾಲದ ಮೇಲಿನ ಬಡ್ಡಿ ದರ ಶೀಘ್ರ ಏರಿಕೆ ಆಗಲು ಆರಂಭವಾಗುತ್ತದೆ. ಇಎಂಐಗಳು ಜಾಸ್ತಿ ಆಗುತ್ತವೆ. ಗೃಹ ಸಾಲ, ಕಾರಿನ ಸಾಲ, ಪರ್ಸನಲ್ ಲೋನ್ ಎಲ್ಲವೂ ದುಬಾರಿ ಆಗುತ್ತದೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Indian Economy: ಕೊರೊನಾ ಸಮಯದ ನಷ್ಟ ಸರಿತೂಗಿಸಲು ಭಾರತಕ್ಕೆ 15 ವರ್ಷ ಬೇಕಾಗಬಹುದು ಎನ್ನುತ್ತಿದೆ ಆರ್​ಬಿಐ

Published On - 12:01 pm, Thu, 5 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ