Edible Oil: ಬೆಲೆ ಇಳಿಕೆಗಾಗಿ ಖಾದ್ಯ ತೈಲ ಮೇಲಿನ ತೆರಿಗೆ ಇಳಿಕೆಗೆ ಮುಂದಾದ ಕೇಂದ್ರ ಸರ್ಕಾರ
ಖಾದ್ಯ ತೈಲ ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅದರ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಕ್ಕೆ ಕೇಂದ್ರ ಸರ್ಕಾರವು ಯೋಜನೆ ರೂಪಿಸಿದೆ.
ಕೆಲವು ಖಾದ್ಯ ತೈಲಗಳ (Edible Oil) ಮೇಲಿನ ತೆರಿಗೆ ಕಡಿತ ಮಾಡುವುದಕ್ಕೆ ಭಾರತ ಯೋಜನೆ ರೂಪಿಸುತ್ತಿದೆ. ಒಂದು ಕಡೆ, ರಷ್ಯಾ- ಉಕ್ರೇನ್ ಯುದ್ಧ ಹಾಗೂ ಮತ್ತೊಂದು ಕಡೆ ಇಂಡೋನೇಷ್ಯಾದಿಂದ ತಾಳೆ ಎಣ್ಣೆಯ ರಫ್ತು ನಿಷೇಧಿಸಿದ ಮೇಲೆ ಭಾರತದ ದೇಶೀ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ವಿಶ್ವದ ಟಾಪ್ ಖಾದ್ಯ ತೈಲ ಆಮದುದಾರ ದೇಶ ಭಾರತ. ಇದೀಗ ಕಚ್ಚಾ ತಾಳೆ ಎಣ್ಣೆ ಮೇಲಿನ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಶೇ 5ರಷ್ಟು ಇದ್ದಿದ್ದನ್ನು ಕಡಿತ ಮಾಡಲು ಮುಂದಾಗಿದೆ. ಆದರೆ ಹೊಸ ತೆರಿಗೆ ಮೊತ್ತವು ಈಗಲೂ ನಿರಾಶಾದಾಯಕ ಎಂದು ಜನರು ಹೇಳುತ್ತಾರೆ. ಸೆಸ್ ಅನ್ನು ಕೆಲವು ವಸ್ತುಗಳ ಮೇಲೆ ಮೂಲಭೂತ ತೆರಿಗೆ ದರಗಳ ಮೇಲೆ ವಿಧಿಸಲಾಗುತ್ತದೆ. ಮತ್ತು ಕೃಷಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ. ಕಚ್ಚಾ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಈಗಾಗಲೇ ರದ್ದುಗೊಳಿಸಲಾಗಿದೆ.
ಹಣಕಾಸು ಸಚಿವಾಲಯವು ಕರೆಗೆ ಮತ್ತು ಕಾಮೆಂಟ್ ಕೋರಿದ್ದಕ್ಕೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಕೃಷಿ ಮತ್ತು ಆಹಾರ ಸಚಿವಾಲಯಗಳು ಕೂಡ ಕಾಮೆಂಟ್ ಮಾಡಲು ತಕ್ಷಣವೇ ಲಭ್ಯವಾಗಿಲ್ಲ. ಭಾರತವು ತನ್ನ ಅಗತ್ಯಗಳಿಗೆ ಶೇ 60ರಷ್ಟನ್ನು ಆಮದಿನ ಮೇಲೆ ಅವಲಂಬಿಸಿರುವುದರಿಂದ ವಿಶೇಷವಾಗಿ ಸಸ್ಯಜನ್ಯ ಎಣ್ಣೆಯ ಬೆಲೆಗಳು ಗಗನಕ್ಕೇರಲು ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ಏರುತ್ತಿರುವ ಬೆಲೆಗಳು, ಉಕ್ರೇನ್‌ನ ಮೇಲೆ ರಷ್ಯಾದ ಯುದ್ಧವು ಸೂರ್ಯಕಾಂತಿ ಎಣ್ಣೆಯ ರಫ್ತುಗಳನ್ನು ತಡೆ ಮಾಡಿದ ನಂತರ ಬೆಲೆ ಇನ್ನಷ್ಟು ವಿಸ್ತರಿಸಿತು. ಖಾದ್ಯ ತೈಲಗಳ ಅತಿದೊಡ್ಡ ಸಾಗಣೆದಾರರಾದ ಇಂಡೋನೇಷ್ಯಾ ತನ್ನ ದೇಶೀಯ ಮಾರುಕಟ್ಟೆಯನ್ನು ರಕ್ಷಿಸಲು ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧವನ್ನು ವಿಧಿಸಿತು.
ತಾಳೆ, ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ಮೂಲಕ ಮತ್ತು ಸಂಗ್ರಹವನ್ನು ತಡೆಯಲು ದಾಸ್ತಾನುಗಳನ್ನು ಸೀಮಿತಗೊಳಿಸುವ ಮೂಲಕ ಭಾರತವು ಈ ಹಿಂದೆ ಬೆಲೆಗಳನ್ನು ಕಡಿತಗೊಳಿಸಲು ಪ್ರಯತ್ನಿಸಿದೆ. ಈ ಕ್ರಮಗಳು ಹೆಚ್ಚಿನ ಖರೀದಿಗಳ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಇದು ಅಂತರರಾಷ್ಟ್ರೀಯ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿತು. ದೇಶೀಯ ಪೂರೈಕೆಯನ್ನು ಹೆಚ್ಚಿಗೆ ಮಾಡುವುದಕ್ಕೆ ಸಹಾಯ ಮಾಡಲು ಕಚ್ಚಾ ವಿಧದ ಕ್ಯಾನೋಲಾ ಎಣ್ಣೆ, ಆಲಿವ್ ಎಣ್ಣೆ, ಭತ್ತದ ಹೊಟ್ಟಿನ ಎಣ್ಣೆ ಮತ್ತು ತಾಳೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ 35ರಿಂದ 5ಕ್ಕೆ ಕಡಿತಗೊಳಿಸಲು ಸರ್ಕಾರವು ಈಗ ನೋಡುತ್ತಿದೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Thu, 5 May 22