Edible Oil: ಏಪ್ರಿಲ್ 28ರಿಂದ ಇಂಡೋನೇಷ್ಯಾ ನಿಲ್ಲಿಸಲಿದೆ ತಾಳೆ ಎಣ್ಣೆ ರಫ್ತು; ಭಾರತದಲ್ಲಿ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ

ಇಂಡೋನೇಷ್ಯಾದಿಂದ ಏಪ್ರಿಲ್ 28ನೇ ತಾರೀಕಿನಿಂದ ತಾಳೆ ಎಣ್ಣೆ ರಫ್ತು ನಿಷೇಧ ಮಾಡಿರುವುದರಿಂದ ಭಾರತದಲ್ಲಿ ಬೆಲೆ ಏರಿಕೆ ಆಗಬಹುದು.

Edible Oil: ಏಪ್ರಿಲ್ 28ರಿಂದ ಇಂಡೋನೇಷ್ಯಾ ನಿಲ್ಲಿಸಲಿದೆ ತಾಳೆ ಎಣ್ಣೆ ರಫ್ತು; ಭಾರತದಲ್ಲಿ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 23, 2022 | 11:04 AM

ದೇಶೀಯ ಖಾದ್ಯ ತೈಲ (Edible Oil) ಬೆಲೆಗಳು ಈಗಾಗಲೇ ಹೆಚ್ಚಿದ್ದು, ತಾಳೆ ಎಣ್ಣೆಯ ವಿಶ್ವದ ಅತಿದೊಡ್ಡ ಉತ್ಪಾದಕ ದೇಶವಾದ ಇಂಡೋನೇಷ್ಯಾವು ಏಪ್ರಿಲ್ 28ರಿಂದ ರಫ್ತುಗಳನ್ನು ನಿಷೇಧಿಸುವುದರಿಂದ ಮತ್ತಷ್ಟು ಮೇಲೇರುವ ಸಾಧ್ಯತೆಗಳಿವೆ. ಅಂದಹಾಗೆ ಇಂಡೋನೇಷ್ಯಾ ಕೂಡ ದೇಶೀಯ ಕೊರತೆ ಮತ್ತು ಗಗನಕ್ಕೇರುತ್ತಿರುವ ಹೆಚ್ಚಿನ ಖಾದ್ಯ ತೈಲ ಬೆಲೆಗಳೊಂದಿಗೆ ಹೋರಾಡುತ್ತಿದೆ. ಚೀನಾ ಮತ್ತು ಭಾರತವು ಇಂಡೋನೇಷ್ಯಾದಿಂದ ತಾಳೆ ಎಣ್ಣೆಯನ್ನು ಅತಿ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದ್ದು, ಇದು ಪ್ರಪಂಚದ ಅರ್ಧಕ್ಕಿಂತ ಹೆಚ್ಚಿನ ಪೂರೈಕೆಯನ್ನು ಹೊಂದಿದೆ. ಅಡುಗೆ ಎಣ್ಣೆಯಿಂದ ಆರಂಭಗೊಂಡು ಸಂಸ್ಕರಿಸಿದ ಆಹಾರಗಳು, ಸೌಂದರ್ಯವರ್ಧಕಗಳು ಮತ್ತು ಜೈವಿಕ ಇಂಧನಗಳವರೆಗೆ ಹಲವು ಉತ್ಪನ್ನಗಳಲ್ಲಿ ತಾಳೆ ಎಣ್ಣೆಯನ್ನು ಬಳಸಲಾಗುತ್ತದೆ. ಇದು ವಿಶ್ವದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಸಸ್ಯಜನ್ಯ ಎಣ್ಣೆಯಾಗಿದೆ. ಮತ್ತು ಬಿಸ್ಕತ್ತುಗಳು, ಮಾರ್ಗರೀನ್, ಲಾಂಡ್ರಿ ಡಿಟರ್ಜೆಂಟ್​ಗಳು ಹಾಗೂ ಚಾಕೊಲೇಟ್ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ಜಾಗತಿಕ ಅಡುಗೆ ತೈಲದ ಬೆಲೆಗಳು ಈ ವರ್ಷ ಏರಿದ್ದು, ಇದು ಆ ಪ್ರದೇಶದಿಂದ ಸೂರ್ಯಕಾಂತಿ ಎಣ್ಣೆಯ ಸಾಗಣೆಯ ಮೇಲೆ ಪರಿಣಾಮ ಬೀರಿದೆ. ಕಪ್ಪು ಸಮುದ್ರವು ವಿಶ್ವದ ಸೂರ್ಯಕಾಂತಿ ಎಣ್ಣೆಯ ರಫ್ತಿನ ಶೇ 76ರಷ್ಟಿದೆ. ಇಂಡೋನೇಷ್ಯಾದಿಂದ ಸರಬರಾಜು ಸ್ಥಗಿತಗೊಂಡರೆ ಭಾರತಕ್ಕೆ ಪ್ರತಿ ತಿಂಗಳು ಸುಮಾರು 4 ಮಿಲಿಯನ್ ಟನ್ ತಾಳೆ ಎಣ್ಣೆಯ ನಷ್ಟವಾಗುತ್ತದೆ. ಉಕ್ರೇನ್ ಯುದ್ಧದ ನಂತರ ಭಾರತದ ಸೂರ್ಯಕಾಂತಿ ತೈಲ ಪೂರೈಕೆಯು ತಿಂಗಳಿಗೆ ಸುಮಾರು 1,00,000 ಟನ್‌ಗಳಿಗೆ ಅರ್ಧದಷ್ಟು ಕಡಿಮೆಯಾಗಿದೆ ಮತ್ತು ಇದು ಕುಟುಂಬಗಳ ಅಡುಗೆ ಮನೆ ವಿಚಾರಕ್ಕೆ ಬಂದಲ್ಲಿ ಸನ್ನಿವೇಶವನ್ನು ಇನ್ನಷ್ಟು ಹದಗೆಡಿಸಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ಮಧ್ಯೆ, ಭಾರತದ ಸಗಟು ಹಣದುಬ್ಬರವು ಈಗ ಒಂದು ವರ್ಷದಿಂದ ಎರಡಂಕಿಯಲ್ಲಿ ಉಳಿದಿದ್ದು, ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ಸರಕುಗಳ ಬೆಲೆಗಳಲ್ಲಿ ನಿರಂತರ ಏರಿಕೆಯ ಮಧ್ಯೆ ಮಾರ್ಚ್‌ನಲ್ಲಿ ಹಣದುಬ್ಬರ ದರವು ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಸಗಟು ಬೆಲೆ ಸೂಚ್ಯಂಕ (WPI) ಫೆಬ್ರವರಿಯಲ್ಲಿ ಶೇ 13.11ರಷ್ಟು ಇದ್ದದ್ದು ಮಾರ್ಚ್‌ನಲ್ಲಿ ಶೇ 14.55ರಷ್ಟು ಹೆಚ್ಚಾಗಿದೆ. ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಮದು ಮಾಡಿಕೊಳ್ಳಲು ಮತ್ತು ದೇಶದಲ್ಲಿ ಉತ್ಪಾದಿಸುವ ಎಣ್ಣೆಕಾಳುಗಳ ಖರೀದಿಯನ್ನು ಪ್ರಾರಂಭಿಸಲು ಭಾರತೀಯ ಕಂಪೆನಿಗಳನ್ನು ಒತ್ತಾಯಿಸಿದ್ದರು.

ಇದನ್ನೂ ಓದಿ: Edible Oil Price: ಅಡುಗೆಮನೆಗೆ ತಟ್ಟಿದ ಉಕ್ರೇನ್ ಸಂಘರ್ಷದ ಬಿಸಿ: ಖಾದ್ಯತೈಲದ ಬೆಲೆ ಶೇ 60ರಷ್ಟು ಏರಿಕೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್