Tata Motors: ಏಪ್ರಿಲ್ 23ರಿಂದ ಅನ್ವಯಿಸುವಂತೆ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಹೆಚ್ಚಳ

Tata Motors: ಏಪ್ರಿಲ್ 23ರಿಂದ ಅನ್ವಯಿಸುವಂತೆ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಹೆಚ್ಚಳ
ಸಾಂದರ್ಭಿಕ ಚಿತ್ರ

ಟಾಟಾ ಮೋಟಾರ್ಸ್​ನಿಂದ ಏಪ್ರಿಲ್​ 23ನೇ ತಾರೀಕಿನ ಶನಿವಾರದಿಂದ ಅನ್ವಯ ಆಗುವಂತೆ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.

TV9kannada Web Team

| Edited By: Srinivas Mata

Apr 23, 2022 | 4:12 PM

ಭಾರತದ ಪ್ರಮುಖ ವಾಹನ ತಯಾರಕ ಕಂಪೆನಿಯಾದ ಟಾಟಾ ಮೋಟಾರ್ಸ್​ನಿಂದ (Tata Motors) ಏಪ್ರಿಲ್ 23ನೇ ತಾರೀಕಿನ ಶನಿವಾರದಂದು ತನ್ನ ಪ್ರಯಾಣಿಕ ವಾಹನಗಳಾದ್ಯಂತ ಬೆಲೆ ಹೆಚ್ಚಳವನ್ನು ಘೋಷಣೆ ಮಾಡಲಾಗಿದೆ. ಇನ್​ಪುಟ್ ವೆಚ್ಚದಲ್ಲಿನ ಏರಿಕೆಯನ್ನು ಈಗಿನ ಬೆಲೆ ಹೆಚ್ಚಳವು ಭಾಗಶಃ ಸರಿದೂಗಿಸುತ್ತದೆ. “ಇಂದು (ಏಪ್ರಿಲ್ 23, 2022) ಜಾರಿಗೆ ಬರಲಿದೆ, ವೇರಿಯಂಟ್ ಮತ್ತು ಮಾಡೆಲ್ ಅನ್ನು ಅವಲಂಬಿಸಿ ವೇಯ್ಟೆಡ್ ಸರಾಸರಿ ಹೆಚ್ಚಳವು ಶೇ 1.1ರಷ್ಟು ಆಗಿದೆ,” ಎಂದು ಟಾಟಾ ಮೋಟಾರ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುಂಬೈ ಮೂಲದ ವಾಹನ ತಯಾರಕ ಕಂಪೆನಿಯಾದ ಟಾಟಾದಿಂದ ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಪಂಚ್ ಮತ್ತು ಹ್ಯಾರಿಯರ್‌ನಂತಹ ವಿವಿಧ ಮಾದರಿಗಳನ್ನು ಮಾರಾಟ ಮಾಡಲಾಗುತ್ತದೆ. ಕಳೆದ ಕೆಲವು ಸಮಯದಿಂದ ಉಕ್ಕು ಸೇರಿದಂತೆ ವಿವಿಧ ಲೋಹಗಳ ಬೆಲೆಯಲ್ಲಿ ಏರಿಕೆ ಆಗುತ್ತಾ ಬಂದಿದೆ. ಈ ಕಾರಣಕ್ಕೆ ಕಳೆದ ಒಂದು ವರ್ಷದಲ್ಲಿ ವಿವಿಧ ಕಾರು ತಯಾರಿಸುವ ಕಂಪೆನಿಗಳು ಹಲವು ಬಾರಿ ಬೆಲೆ ಏರಿಕೆಯನ್ನು ಮಾಡಿವೆ. ಇದೀಗ ಟಾಟಾ ಮೋಟಾರ್ಸ್​ನಿಂದ ಕೂಡ ದರ ಹೆಚ್ಚಳವು ಜಾರಿಗೆ ಬಂದಿದೆ.

ಇತ್ತೀಚೆಗೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್​ನಿಂದ ಅದರ ಎಲ್ಲ ಶ್ರೇಣಿಯ ಕಾರುಗಳ ಬೆಲೆಯಲ್ಲೂ ಹೆಚ್ಚಳ ಮಾಡಲಾಗಿದೆ. ಈ ಸಂದರ್ಭದಲ್ಲಿ ದೇಶದ ಪ್ರಮುಖ ಕಾರು ತಯಾರಿಕೆ ಕಂಪೆನಿಯಾದ ಮಾರುತಿ ಸುಜುಕಿ ನೀಡಿದ ಕಾರಣ ಸಹ ಕಚ್ಚಾ ವಸ್ತುಗಳ ಬೆಲೆ ಏರಿಕೆ ಎಂಬುದೇ ಆಗಿತ್ತು. ಬೆಲೆ ಹೆಚ್ಚಳದ ಹೊರೆಯ ಸ್ವಲ್ಪ ಭಾಗವನ್ನು ಮಾತ್ರ ಗ್ರಾಹಕರಿಗೆ ವರ್ಗಾವಣೆ ಮಾಡಲಾಗುವುದು ಎಂದು ಎಂಎಸ್​ಐ ತಿಳಿಸಿತ್ತು.

ಇದನ್ನೂ ಓದಿ: Tata Passenger Vehicle Loan : ಪ್ರಯಾಣಿಕರ ವಾಹನ ಸಾಲಕ್ಕೆ ಬಂಧನ್ ಬ್ಯಾಂಕ್​ ಜತೆ ಟಾಟಾ ಮೋಟಾರ್ಸ್ ಒಪ್ಪಂದ

Follow us on

Related Stories

Most Read Stories

Click on your DTH Provider to Add TV9 Kannada