Credit Card Billing Cycle: ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬದಲಿಸಿಕೊಳ್ಳಲು ಒಂದು ಬಾರಿಯ ಅವಕಾಶ ನೀಡಿದ ಆರ್‌ಬಿಐ
ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬದಲಿಸಿಕೊಳ್ಳಲು ಕ್ರೆಡಿಟ್ ಕಾರ್ಡ್ದಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ನೀಡಿದೆ. ಇದರ ಅನುಕೂಲ ಏನು ಎಂಬ ಬಗ್ಗೆಯೂ ಇಲ್ಲಿ ಮಾಹಿತಿ ಇದೆ.
ಗ್ರಾಹಕರಿಗೆ ಅನುಕೂಲ ಆಗಲಿ ಎಂಬ ದೃಷ್ಟಿ ಇಟ್ಟುಕೊಂಡು ಆರ್‌ಬಿಐ (Reserve Bank Of India) ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ನಿಯಮಾವಳಿಗಳನ್ನು ಹೊರತಂದಿದೆ. ಇದರ ಭಾಗವಾಗಿ ಗ್ರಾಹಕರು ತಮ್ಮ ಇಚ್ಛೆಗೆ ಅನುಗುಣವಾಗಿ ಬಿಲ್ಲಿಂಗ್ ಸೈಕಲ್ ಅನ್ನು ಮಾರ್ಪಡಿಸಲು ಒಂದು ಬಾರಿ ಅವಕಾಶವನ್ನು ನೀಡಬೇಕು ಎಂದು ಸಲಹೆ ನೀಡಲಾಗಿದೆ. ರಿಸರ್ವ್ ಬ್ಯಾಂಕ್ ತಿಳಿಸಿರುವ ಪ್ರಕಾರ, ಬಿಲ್ಲಿಂಗ್ ಸೈಕಲ್ ಅಥವಾ ಬಿಲ್ಲಿಂಗ್ ಅವಧಿಯು ಕಾರ್ಡ್-ವಿತರಕರು ಸಂಗ್ರಹಿಸಿದ ಎರಡು ಸತತ ಬಿಲ್‌ಗಳ ಮುಕ್ತಾಯ ದಿನಾಂಕಗಳ ಮಧ್ಯದ ನಿಯಮಿತ ಅವಧಿಯಾಗಿದೆ. ಜುಲೈ 1, 2022ರಿಂದ ಜಾರಿಗೆ ಬರುವಂತೆ ಅದೇ ನಿಬಂಧನೆ ಅಥವಾ ತೀರ್ಮಾನ ನೀಡಲಾಗುವುದು.
ಕ್ರೆಡಿಟ್ ಕಾರ್ಡ್‌ನಲ್ಲಿ ಬಿಲ್ಲಿಂಗ್ ಅವಧಿ ಮುಗಿದ 15-25 ದಿನಗಳ ನಂತರ ಪಾವತಿ ದಿನಾಂಕವು ಸಾಮಾನ್ಯವಾಗಿ ಬೀಳುತ್ತದೆ. ಬಿಲ್ಲಿಂಗ್ ಅವಧಿಯಲ್ಲಿ ನಡೆಸಿದ ವಹಿವಾಟುಗಳಿಗಾಗಿ ಕ್ರೆಡಿಟ್ ಕಾರ್ಡ್ ಹೊಂದಿರುವವರು ಬಿಲ್ಲಿಂಗ್ ಸೈಕಲ್ ಪ್ರಾರಂಭದಿಂದ ಪಾವತಿಯ ದಿನಾಂಕದವರೆಗೆ ಬಡ್ಡಿರಹಿತ ಅವಧಿಯನ್ನು ಪಡೆಯುತ್ತಾರೆ. ನಿಗದಿತ ದಿನಾಂಕದ ನಂತರ ಮಾಡಿದ ಪಾವತಿಗಳು ಕ್ರೆಡಿಟ್ ಸ್ಕೋರ್‌ನ ಮೇಲೆ ಪರಿಣಾಮ ಬೀರುವುದರ ಜೊತೆಗೆ ವಿಳಂಬ ಶುಲ್ಕ ಮತ್ತು ಬಡ್ಡಿಗೆ ಒಳಪಟ್ಟಿರುತ್ತವೆ.
ಬಿಲ್ಲಿಂಗ್ ಅವಧಿಯನ್ನು ಒಂದು-ಬಾರಿ ಆಯ್ಕೆಯಾಗಿ ಬದಲಾಯಿಸಲು ಅನುಮತಿಸುವ ಹೊಸ ತೀರ್ಮಾನದೊಂದಿಗೆ ನಿಮ್ಮ ಅನುಕೂಲಕ್ಕಾಗಿ ಮತ್ತು ನಗದು ಹರಿವಿನ ಪ್ರಕಾರ ಪಾವತಿಯ ದಿನಾಂಕವು ಬರುವ ರೀತಿಯಲ್ಲಿ ಬಿಲ್ಲಿಂಗ್ ಸೈಕಲ್ ಅನ್ನು ಆಯ್ಕೆ ಮಾಡಬಹುದು. ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೂ ಇದು ಅನುಕೂಲಕರ ಆಗಿರುತ್ತದೆ. ಆದ್ದರಿಂದ ಇಲ್ಲಿ ಮತ್ತೊಮ್ಮೆ ನಿಮ್ಮ ಅಂತಿಮ ಉದ್ದೇಶವನ್ನು ಪೂರೈಸಲು ಒಂದು ಬಾರಿ ಮಾರ್ಪಾಡು ಆಯ್ಕೆಯನ್ನು ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಮಿತಿ ಜಾಸ್ತಿ ಇರುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ