L&T Infotech And Mindtree Merger: ಎಲ್​ಅಂಡ್​ಟಿ ಇನ್​ಫೋಟೆಕ್ ಹಾಗೂ ಮೈಂಡ್​ಟ್ರೀ ವಿಲೀನ ಘೋಷಣೆ

ಎಲ್​ಅಂಡ್​ಟಿ ಇನ್ಫೋಟೆಕ್ ಮತ್ತು ಮೈಂಡ್​ ಟ್ರೀ ಕಂಪೆನಿಗಳ ವಿಲೀನದ ಬಗ್ಗೆ ಮೇ 6ನೇ ತಾರೀಕಿನ ಶುಕ್ರವಾರದಂದು ಘೋಷಣೆ ಮಾಡಲಾಗಿದೆ. ಆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

L&T Infotech And Mindtree Merger: ಎಲ್​ಅಂಡ್​ಟಿ ಇನ್​ಫೋಟೆಕ್ ಹಾಗೂ ಮೈಂಡ್​ಟ್ರೀ ವಿಲೀನ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 06, 2022 | 6:17 PM

ಲಾರ್ಸನ್ ಅಂಡ್ ಟೂಬ್ರೋ (L&T) ಮೇ 6ನೇ ತಾರೀಕಿನ ಶುಕ್ರವಾರದಂದು ಎರಡು ಸಾಫ್ಟ್​ವೇರ್ ಕಂಪೆನಿಗಳಾದ ಲಾರ್ಸನ್ ಅಂಡ್ ಟೂಬ್ರೋ ಇನ್​ಫೋಟೆಕ್ (LTI) ಮತ್ತು ಮೈಂಡ್​ಟ್ರೀ ವಿಲೀನದ ಬಗ್ಗೆ ಘೋಷಣೆ ಮಾಡಿದೆ. “ಎಲ್​ಟಿಐ ಮತ್ತು ಮೈಂಡ್​ಟ್ರೀ ಮಂಳಿ ನಿರ್ದೇಶಕರು ಆಯಾ ಸಭೆಯಲ್ಲಿ ಎರಡೂ ಕಂಪೆನಿಗಳ ಸಂಯೋಜಿತ ಒಗ್ಗೂಡುವಿಕೆಗೆ ಮೇ 6ರ ಶುಕ್ರವಾರ ಅನುಮತಿ ನೀಡಿದರು. ಈ ಎರಡೂ ಸ್ವತಂತ್ರವಾಗಿ ಲಿಸ್ಟೆಡ್ ಆದಂಥ ಲಾರ್ಸನ್ ಅಂಡ್ ಟೂಬ್ರೋ ಸಮೂಹದ ಐಟಿ ಸೇವೆಯ ಕಂಪೆನಿಗಳು,” ಎಂದು ಪತ್ರಿಕಾಹೇಳಿಕೆಯಲ್ಲಿ ತಿಳಿಸಲಾಗಿದೆ. ಎರಡೂ ಒಗ್ಗೂಡಿದ ಸಂಸ್ಥೆಯನ್ನು ಎಲ್​ಟಿಐ ಮೈಂಡ್​ಟ್ರೀ ಎಂದು ಕರೆಯಲಾಗುತ್ತದೆ. ಈ ಎರಡೂ ಕಂಪೆನಿಗಳ ಒಗ್ಗೂಡುವಿಕೆಗೆ ಸಂಬಂಧಿಸಿದಂತೆ ಷೇರುದಾರರು ಮತ್ತು ನಿಯಂತ್ರಕರ ಅನುಮತಿಗೆ ಒಳಪಟ್ಟಿದೆ ಎಂದು ಎಲ್​ಟಿಐ ಹೇಳಿದೆ. ಈ ವಿಲೀನ ಪ್ರಕ್ರಿಯೆ ಮುಗಿದ ಮೇಲೆ ಮೈಂಡ್​ಟ್ರೀ ಷೇರುದಾರರಿಗೆ ಆ ಕಂಪೆನಿಯಲ್ಲಿ ಇರುವ ಪ್ರತಿ 100 ಷೇರಿಗೆ ಎಲ್​ಟಿಐನ 73 ಷೇರು ದೊರೆಯುತ್ತದೆ.

ಹೊಸದಾಗಿ ವಿತರಣೆ ಮಾಡಿದ ಎಲ್​ಟಿಐ ಷೇರು ಎನ್​ಎಸ್​ಇ ಮತ್ತು ಬಿಎಸ್​ಇಯಲ್ಲಿ ಮತ್ತು ಎನ್​ಎಸ್​ಇಯಲ್ಲಿ ವಹಿವಾಟು ನಡೆಸಲಿದೆ. ವಿಲೀನದ ನಂತರ ಲಾರ್ಸನ್ ಅಂಡ್ ಟೂಬ್ರೋ ಲಿಮಿಟೆಡ್ ಕಂಪೆನಿಯು ಎಲ್​ಟಿಐ ಶೇ 68.73ರಷ್ಟು ಪಾಲನ್ನು ಹೊಂದಿರಲಿದೆ ಎಂದು ಎಲ್​ಅಂಡ್​ಟಿ ಇನ್​ಫೋಟೆಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. “ಎಲ್​ಟಿಐಮೈಂಡ್​ಟ್ರೀ” ಸಂಯೋಜಿತ ಸಂಸ್ಥೆಯನ್ನು ಮೈಂಡ್​ಟ್ರೀ ಸಿಇಒ ದೇಬಶಿಶ್ ಚಟರ್ಜಿ ಮುನ್ನಡೆಸಲಿದ್ದು, ಅವರು ಸಿಇಒ ಆಗಿರಲಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಎಲ್​ಅಂಡ್​ಟಿ ಇನ್​ಫೋಟೆಕ್ ಸಿಇಒ ಮತ್ತು ಎಂಡಿ ಸಂಜಯ್ ಜಲೋನಾ ರಾಜೀನಾಮೆ ನೀಡಿದ್ದಾರೆ.

ಸಾರ್ವಜನಿಕವಾಗಿ ಲಿಸ್ಟ್ ಮಾಡಲಾದ ಎರಡು ಸಾಫ್ಟ್‌ವೇರ್ ಸಂಸ್ಥೆಗಳ ವಿಲೀನವು ದೊಡ್ಡ ಐಟಿ ಹೊರಗುತ್ತಿಗೆ ಸಂಸ್ಥೆಗಳು ಸೈಬರ್‌ ಸೆಕ್ಯೂರಿಟಿ, ಆಟೊಮೇಷನ್ ಮತ್ತು ಮೆಷಿನ್-ಲರ್ನಿಂಗ್ ಬೆಂಬಲದಂತಹ ಕ್ಷೇತ್ರಗಳಿಗೆ ವಿಸ್ತರಿಸುತ್ತಿರುವ ಸಮಯದಲ್ಲಿ ಕಡಿಮೆ-ಮಾರ್ಜಿನ್ ಸಾಂಪ್ರದಾಯಿಕ ಬ್ಯಾಕ್-ರೂಮ್ ಸೇವೆಗಳನ್ನು ಮೀರಿ ಚಲಿಸುತ್ತದೆ. ಅಲ್ಲದೆ, ಸಾಫ್ಟ್‌ವೇರ್ ಕಂಪೆನಿಗಳು ಡಿಜಿಟಲೈಸೇಷನ್ಅಳವಡಿಸಿಕೊಳ್ಳುವ ವ್ಯವಹಾರಗಳಿಂದ ಬೇಡಿಕೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಇದು ಕೊವಿಡಗ-19 ಸಮಯದಲ್ಲಿ ವೇಗವನ್ನು ಹೆಚ್ಚಿಸಿತು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: HDFC-HDFC Bank Merger: ಎಚ್​ಡಿಎಫ್​ಸಿ- ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನದಿಂದ ಸಿಬ್ಬಂದಿ ಮೇಲೆ ಪರಿಣಾಮ ಇಲ್ಲ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ