Sign In

By signing in or creating an account, you agree with Associated Broadcasting Company's Terms & Conditions and Privacy Policy.

National Defence: ಭಾರತೀಯ ವಾಯುಪಡೆಗೆ ಬೇಕಿರುವ ಕ್ಲೋಸ್ ಇನ್ ವೆಪನ್ ಸಿಸ್ಟಮ್ ದೇಶೀಯ ನಿರ್ಮಾಣಕ್ಕೆ ಸರ್ವ ಪ್ರಯತ್ನ

ಶತ್ರುಗಳು ಆಕ್ರಮಣ ನಡೆಸಿದ ಸಂದರ್ಭದಲ್ಲಿ ದೇಶದ ಸೇನಾ ನೆಲೆಗಳು, ಯುದ್ಧ ಹಡಗುಗಳು ಮತ್ತು ವಾಯು ನೆಲೆಗಳ ರಕ್ಷಣೆಯ ವಿಚಾರದಲ್ಲಿ ಸಿಐಡಬ್ಲ್ಯುಎಸ್ ಮಹತ್ವದ ಪಾತ್ರ ನಿರ್ವಹಿಸುತ್ತವೆ.

National Defence: ಭಾರತೀಯ ವಾಯುಪಡೆಗೆ ಬೇಕಿರುವ ಕ್ಲೋಸ್ ಇನ್ ವೆಪನ್ ಸಿಸ್ಟಮ್ ದೇಶೀಯ ನಿರ್ಮಾಣಕ್ಕೆ ಸರ್ವ ಪ್ರಯತ್ನ
ಕ್ಲೋಸ್ ವೆಪನ್ ಸಿಸ್ಟಮ್ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 16, 2022 | 6:00 AM

ಭಾರತೀಯ ವಾಯುಪಡೆಯ (Indian Air Force – IAF) ಬಹುದಿನಗಳ ಬೇಡಿಕೆಯಾದ ಕ್ಲೋಸ್-ಇನ್ ವೆಪನ್ ಸಿಸ್ಟಮ್ಸ್ (ಸಿಐಡಬ್ಲ್ಯುಎಸ್) ಅವಶ್ಯತೆಯ ಪೂರೈಕೆಗಾಗಿ ಹಲವು ಭಾರತೀಯ ಕಂಪನಿಗಳಲ್ಲಿಯೇ ಪೈಪೋಟಿ ಏರ್ಪಟ್ಟಿದೆ. ಶತ್ರುಗಳು ಆಕ್ರಮಣ ನಡೆಸಿದ ಸಂದರ್ಭದಲ್ಲಿ ದೇಶದ ಸೇನಾ ನೆಲೆಗಳು, ಯುದ್ಧ ಹಡಗುಗಳು ಮತ್ತು ವಾಯು ನೆಲೆಗಳ ರಕ್ಷಣೆಯ ವಿಚಾರದಲ್ಲಿ ಸಿಐಡಬ್ಲ್ಯುಎಸ್ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಭಾರತೀಯ ಸಶಸ್ತ್ರ ಪಡೆಗಳಿಂದ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಿಐಡಬ್ಯುಎಸ್ ಪೂರೈಸಲು ಹಲವು ಕಂಪನಿಗಳಿಂದ ಕೊನೆಯ ಕ್ಷಣದ ಪ್ರಯತ್ನಗಳು ನಡೆಯುತ್ತಿವೆ. ಈ ಕುರಿತು ರಾಷ್ಟ್ರೀಯ ಭದ್ರತಾ ವಿಚಾರಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.

ಕ್ಲೋಸ್-ಇನ್ ವೆಪನ್ ಸಿಸ್ಟಮ್ಸ್ ವ್ಯವಸ್ಥೆಯಲ್ಲಿ ತುರ್ತು ಸಂದರ್ಭದಲ್ಲಿ ಸೇನಾ ನೆಲೆಗಳ ರಕ್ಷಣೆಗೆ ಬೇಕಿರುವ ಅಗತ್ಯ ಪರಿಕರಗಳು ಮತ್ತು ರಕ್ಷಣಾ ಉಪಕರಣಗಳು ಇರುತ್ತವೆ. ಈ ವ್ಯವಸ್ಥೆಯ ಖರೀದಿಗಾಗಿ ಡಿಸೆಂಬರ್ 2017ರ ಕೊನೆಯಲ್ಲಿ ನಿಯಮಿತ ಟೆಂಡರ್ ಬಿಡುಗಡೆ ಮಾಡಲಾಯಿತು. ಭಾರತೀಯ ಮೂಲದ ಕಂಪನಿಗಳಿಂದಲೇ ಖರೀದಿಸಲು 1.5 ಶತಕೋಟಿ ಡಾಲರ್ ಮಂಜೂರು ಮಾಡಲಾಗಿತ್ತು. ವಾಯುಪಡೆಯ ವಿಮಾನಗಳು, ಹೆಲಿಕಾಪ್ಟರ್, ಮಾನವ ರಹಿತ ವೈಮಾನಿಕ ಸಾಧನಗಳು ಮತ್ತು ಕ್ರೂಸ್ ಕ್ಷಿಪಣಿಗಳಿಂದ ವಾಯುನೆಲೆಗಳ ರಕ್ಷಣೆ ಮಾಡಿಕೊಳ್ಳಲು ಸಿಐಡಬ್ಲ್ಯುಎಸ್ ಅಗತ್ಯವಿದೆ. ಈ ಟೆಂಡರ್​ನಲ್ಲಿ ತಿಳಿಸಿದಂತೆ 244 ಗನ್​ಗಳ ಜೊತೆಗೆ ಬೆಂಕಿ ನಿಯಂತ್ರಣ ವ್ಯವಸ್ಥೆ ಮತ್ತು ಅಪಾಯದ ಮುನ್ನೆಚ್ಚರಿಕೆ ಕೊಡುವ ರಾಡಾರ್ ವ್ಯವಸ್ಥೆ, 2,04,000 ಕಾಡತೂಸುಗಳು ಅಗತ್ಯವಿದೆ. ಈ ಹೊಸ ಘಟಕಗಳನ್ನು ವಾಯುಪಡೆಯ ಸಿ2 ಘಟಕಗಳೊಂದಿಗೆ ಸಂಯೋಜಿಸಲು ಉದ್ದೇಶಿಸಲಾಗಿದೆ. ವಾಯುಪಡೆಯ ಸಿ2 ಘಟಕಗಳು ಅತ್ಯುತ್ತಮ ಕಮಾಂಡ್ ಮತ್ತು ಕಂಟ್ರೋಲ್ (ಸಿ2) ಕಾರ್ಯಾಚರಣೆಗಳು ಮತ್ತು ಸಂವಹನಗಳನ್ನು ಖಚಿತಪಡಿಸುವಲ್ಲಿ ಪ್ರಮುಖವಾಗಿರುತ್ತವೆ.

ನಿರ್ದಿಷ್ಟ ಕಾರ್ಯಗಳು ಆ ನೆಲೆಗೆ ನಿಯೋಜಿಸಲಾದ ಕೆಲಸ ಮತ್ತು ವೈಮಾನಿಕ ಸಾಧನಗಳನ್ನು ಅವಲಂಬಿಸಿರುತ್ತವೆ. ಇವು ಕಾರ್ಗೊ ಸಾರಿಗೆಯಿಂದ ಬಾಹ್ಯಾಕಾಶ ಸಿಸ್ಟಮ್​ಗಳು ಮತ್ತು ಪರಮಾಣು ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತವೆ. ಹಳೆಯ ಎಲ್/70 40ಎಂಎಂ ಮತ್ತು ಝೆಡ್ ಯು-23-2ಬಿ 23ಎಂಎಂ ಏರ್ ಡಿಫೆನ್ಸ್ ಗನ್​ಗಳಿಗೆ ಬದಲಾಗಿ ವಾಯುಪಡೆಯ ಸಿ2 ಸಿಸ್ಟಮ್​ಗಳನ್ನು ಉಪಯೋಗಿಸಲಾಗುವುದು. ಆದರೂ ವಿಶ್ವಸನೀಯ ಮೂಲದ ಪ್ರಕಾರ ಮೈಕ್ರೊ-ಯುಎಎಸ್ (ಮಾನವರಹಿತ ಏರ್ ಕ್ರಾಫ್ಟ್ ವ್ಯವಸ್ಥೆ) ಅಪಾಯವನ್ನು ಪರಿಹರಿಸಲು ಹೊಸದಾಗಿ ಎಕ್ಸ್​ಪ್ರೆಶನ್ ಆಫ್ ಇಂಟರೆಸ್ಟ್ ಸೂಚನೆ ಹೊರಡಿಸಬಹುದು ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಭದ್ರತಾ ಸಮಿತಿಯು ಅಗತ್ಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಇತ್ತೀಚೆಗಷ್ಟೇ ರಕ್ಷಣಾ ಉಪಕರಣಗಳಿಗಾಗಿ ಉಪಯೋಗಿಸುವ ಸಾಫ್ಟ್​ವೇರ್ ಒಂದನ್ನು ಭಾರತದಲ್ಲಿ ಸಿದ್ಧಪಡಿಸಬೇಕು ಎಂದು ತಿಳಿಸಿತು. ಲೀಲಾವು (ಬಿಡ್ಡಿಂಗ್) ಪ್ರಕ್ರಿಯೆಗೆ ಕೇವಲ ದೇಶಿ ಸಂಸ್ಥೆಗಳನ್ನು ಆಹ್ವಾನಿಸಲಾಗಿತ್ತು. ಆದರೆ ಅವು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಕೈಜೋಡಿಸಬಹುದಾಗಿತ್ತು. ಈ ಪ್ರಮುಖ ಸ್ಪರ್ಧಿಗಳಲ್ಲಿ ಒಂದು ಕಲ್ಯಾಣಿ ಸ್ಟ್ರಾಟಜಿಕ್ ಸಿಸ್ಟಮ್ಸ್ ಲಿಮಿಟೆಡ್ (ಕೆಎಸ್‌ಎಸ್‌ಎಲ್) ಆಗಿದ್ದು ಇದು ಈಗಾಗಲೇ ಸಿಐಡಬ್ಲ್ಯುಎಸ್ ಘಟಕವನ್ನು ಆಂತರಿಕವಾಗಿ ಪರೀಕ್ಷಿಸಿದೆ. ಗುಣಮಟ್ಟದ ಎಲ್ಲ ಅಗತ್ಯಗಳನ್ನು ಪೂರೈಸಿದೆ. ಸಿಸ್ಟಮ್ ಅನ್ನು ಮಾರ್ಚ್​ನಲ್ಲಿ ಡೆಫ್ ಎಕ್ಸ್​ಪೊದಲ್ಲಿ ಪ್ರದರ್ಶಿಸಬೇಕಿತ್ತು. ಕೆಎಸ್‌ಎಸ್‌ಎಲ್ ಅವರು ಸ್ವೀಡನ್​ನ ಬಿಎಇ ಸಿಸ್ಟಮ್ಸ್ ಜೊತೆ ಸಂಯೋಜಿತ ತಂತ್ರಜ್ಞಾನ ಪಾಲುದಾರಿಕೆ ಹೊಂದಿದ್ದು, ಈ ಸ್ವೀಡನ್ ಸಂಸ್ಥೆ ಹಗುರಾದ ಮತ್ತು ಚಿಕ್ಕ ಬೋಫೋರ್ಸ್ 40 ಎಂಕೆ4 ಗನ್ ತಯಾರಿಸಿ, ಅದಕ್ಕೆ ಹೆಚ್ಚು ಪ್ರಬಲವಾಗಿ ಸಿಡಿಯುವ ಮತ್ತು ಉತ್ತಮಗೊಳಿಸಿದ ಮದ್ದುಗಳನ್ನು ತುಂಬುವ ಸಾಮರ್ಥ್ಯದೊಂದಿಗೆ ಮೇಲ್ದರ್ಜೆಗೆ ಏರಿಸಿದೆ. ಕೆಎಸ್‌ಎಸ್ಎಲ್ ನ ಎರಡನೇ ಪಾಲುದಾರ ಸಂಸ್ಥೆ ಇಸ್ರೇಲಿನ ಐಎಐ ಆಗಿದ್ದು, ಇದು ಫೇಸ್ಡ್-ಅರೆ ರಡಾರ್ ಗಳನ್ನು ಮತ್ತು ಸೆನ್ಸರ್​ಗಳನ್ನು ತಯಾರಿಸುವಲ್ಲಿ ಸಹಕರಿಸುತ್ತದೆ.

ಎರಡನೇ ಖಾಸಗಿ ಸಂಸ್ಥೆ ಲಾರ್ಸನ್ ಅಂಡ್ ಟಬ್ರೊದ ಸುದರ್ಶನ್ ಸಿಐಡಬ್ಲ್ಯೂಎಸ್ ಪ್ರಯೋಗಗಳನ್ನು ಪೂರ್ಣಗೊಳಿಸಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಸುದರ್ಶನ್ ಬಗ್ಗೆ ಬಹಳ ಕಡಿಮೆ ಮಾಹಿತಿ ಲಭ್ಯವಿದೆಯಾದರೂ ಅದರಲ್ಲಿ ಫೈರ್ ಕಂಟ್ರೋಲ್ ರಡಾರ್, ಸರ್ಚ್ ರಡಾರ್, ಸಿ2 ಯೂನಿಟ್ ಮತ್ತು ಪ್ರೋಗ್ರಾಂ ಮಾಡಬಹುದಾದ ಮದ್ದಿನೊಂದಿಗೆ 40ಎಂಎಂ ಗನ್ ಇವೆ ಎಂದು ತಿಳಿದುಬಂದಿದೆ. ಅದರ ಸಿಐಡಬ್ಲ್ಯೂಎಸ್ ಏರ್ ಬಸ್ಟ್ ಸಾಮರ್ಥ್ಯ ಹೊಂದಿದೆ ಮತ್ತು ಪ್ರೀ-ಫ್ರ್ಯಾಗ್ಮೆಂಟೆಡ್ ಶೆಲ್​ಗಳನ್ನು ಉಪಯೋಗಿಸುತ್ತದೆ. ಇದು ಯಾವುದೇ ವಿದೇಶಿ ಪಾಲುದಾರರನ್ನು ಹೊಂದಿಲ್ಲ. ಸಿಐಡಬ್ಲ್ಯೂಎಸ್ ಶ್ರೇಣಿಯಲ್ಲಿರುವ ಸರ್ಕಾರ ನಡೆಸುವ ಸಂಸ್ಥೆಗಳೆಂದರೆ ಆರ್ಡ್ನನನ್ಸ್ ಫ್ಯಾಕ್ಟರಿ ಬೋರ್ಡ್ ಮತ್ತು ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್.

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಇದನ್ನೂ ಓದಿ: National Defence: ಭಾರತೀಯ ಸಶಸ್ತ್ರಪಡೆಗಳ ಬಲವರ್ಧನೆಗೆ ಬೇಕಿದೆ ಮಾರಿಟೈಮ್ ಥಿಯೇಟರ್ ಕಮಾಂಡ್

ಇದನ್ನೂ ಓದಿ: National Defence: ವಿದ್ಯುತ್ ಕ್ಷೇತ್ರದಲ್ಲಿ ಚೀನಾ ಮೇಲಿನ ಅವಲಂಬನೆ: ಭಾರತದ ಆರ್ಥ ವ್ಯವಸ್ಥೆಗೆ, ರಾಷ್ಟ್ರೀಯ ಭದ್ರತೆಗೆ ಮಾರಕ

ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ