ಗೋಧಿ ಮತ್ತು ಮೋದಿ: ವಿಶ್ವದಲ್ಲೀಗ ಗೋಧಿ ಬಿಕ್ಕಟ್ಟಿನ ಆತಂಕ, ಸಹಾಯ ಮಾಡುವ ಸ್ಥಿತಿಯಲ್ಲಿದೆಯೇ ಭಾರತ

ಆಹಾರ ಬೆಲೆ ಏರಿಕೆಯ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ವಿಫಲವಾಗಿದ್ದು ಸಹ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ ಎನಿಸಿತ್ತು.

ಗೋಧಿ ಮತ್ತು ಮೋದಿ: ವಿಶ್ವದಲ್ಲೀಗ ಗೋಧಿ ಬಿಕ್ಕಟ್ಟಿನ ಆತಂಕ, ಸಹಾಯ ಮಾಡುವ ಸ್ಥಿತಿಯಲ್ಲಿದೆಯೇ ಭಾರತ
ಗೋಧಿ ಬೆಳೆ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 09, 2022 | 2:17 PM

ದೆಹಲಿ: ಜಗತ್ತಿನ ಪ್ರಮುಖ ಗೋಧಿ ಬೆಳೆಯುವ ದೇಶ ಉಕ್ರೇನ್​ ಮೇಲೆ ರಷ್ಯಾದ ದಾಳಿ ಆರಂಭವಾಗಿ ಸುಮಾರು ಮೂರು ತಿಂಗಳು ಸಮೀಪಿಸುತ್ತಿದೆ. ಸಮೃದ್ಧ ಗೋಧಿ ಬೆಳೆಯುತ್ತಿದ್ದ ಅಲ್ಲಿನ ಹೊಲಗಳಲ್ಲಿ ಬೆಳೆ ಹಾಳಾಗಿದೆ. ಹಲವು ಹೊಲಗಳಲ್ಲಿ ನೆಲಬಾಂಬ್​ಗಳು ಪತ್ತೆಯಾಗಿದ್ದು ರೈತರು ಹೊಲಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಉಕ್ರೇನ್​ನಿಂದ ಗೋಧಿ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಈಗಾಗಲೇ ಈಜಿಪ್ಟ್​ಗೆ ಗೋಧಿ ಒದಗಿಸುವ ಭರವಸೆ ನೀಡಿದೆ. ಇತರ ದೇಶಗಳೂ ಭಾರತದಿಂದ ಗೋಧಿ ಸಿಗಬಹುದೇ ಎಂದು ನೋಡುತ್ತಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ವಿಶ್ವದ ಹಲವು ದೇಶಗಳ ಆಹಾರ ಸಮಸ್ಯೆ ಪರಿಹರಿಸುವ ಸಾಮರ್ಥ್ಯವಿದೆಯೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಗೋಧಿ ಬಿಕ್ಕಟ್ಟು ಕುರಿತು ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತದ ದೇಶೀಯ ಮಾರುಕಟ್ಟೆಯಲ್ಲಿಯೂ ಹಣದುಬ್ಬರದ ಒತ್ತಡದಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಆಹಾರದ ಸಮಸ್ಯೆಗೆ ಸಿಲುಕುವ ಸಾಧ್ಯತೆಯಿರುವ ದೇಶಗಳಿಗೆ ನೆರವಾಗಬೇಕೆಂಬ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳಿಗೆ ಇದರಿಂದ ಹಿನ್ನಡೆ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.

ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಬಹುತೇಕ ದೇಶಗಳಲ್ಲಿ ಬಿಸಿಗಾಳಿಯ ಕಾರಣದಿಂದಾಗಿ ಗೋಧಿ ಇಳುವರಿ ಕುಂಠಿತಗೊಂಡಿದೆ. ಸುತ್ತಮುತ್ತಲ ದೇಶಗಳಂತೆ ಭಾರತ ಸರ್ಕಾರವೂ ಗೋಧಿ ರಫ್ತಿಗೆ ನಿರ್ಬಂಧದ ಸಾಧ್ಯತೆಗಳನ್ನು ಪರಿಶೀಲಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಗೋಧಿ ರಫ್ತು ನಿರ್ಬಂಧಿಸುವ ಬಗ್ಗೆ ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಆಹಾರ ಇಲಾಖೆ ಹೇಳಿದೆ. ಆದರೆ ಗೋಧಿ ರಫ್ತು ವಿಚಾರದಲ್ಲಿ ಸರ್ಕಾರ ಯಾವ ನಿಲುವು ತಳೆಯಬಹುದು ಎಂಬ ಬಗ್ಗೆ ನಿರೀಕ್ಷೆಗಳು ವ್ಯಕ್ತವಾಗಿವೆ.

ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿ ಅವರು ವಿಶ್ವಾಸಾರ್ಹ ನಾಯಕನಾಗಿ ಬಿಂಬಿಸಿಕೊಳ್ಳಲು ಮುಂದಾಗಿರುವ ಹೊತ್ತಿನಲ್ಲಿಯೇ ದೇಶೀಯವಾಗಿ ಆಹಾರದ ಹಣದುಬ್ಬರ ಸಮಸ್ಯೆ ಅವರ ಕೈಕಟ್ಟಿಹಾಕಿದೆ. ಆಹಾರ ಬೆಲೆ ಏರಿಕೆಯ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದ್ದು ಸಹ 2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪತನವಾಗಲು ಇದ್ದ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಇದೀಗ ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಏರುತ್ತಿರುವ ಆಹಾರ ಬೆಲೆಗಳನ್ನು ನಿಯಂತ್ರಿಸಲೇಬೇಕಾದ ಒತ್ತಡವನ್ನು ಕೇಂದ್ರ ಸರ್ಕಾರ ಎದುರಿಸುತ್ತಿದೆ.

‘ಪ್ರಸ್ತುತ ಇಡೀ ಜಗತ್ತು ಗೋಧಿ ಕೊರತೆಯಿಂದ ಬಳಲುತ್ತಿದೆ. ಭಾರತದ ರೈತರು ಜಗತ್ತಿಗೆ ಆಹಾರ ಕೊಡಲು ಮುಂದೆ ಬಂದಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಜರ್ಮನಿ ಪ್ರವಾಸದ ವೇಳೆ ಹೇಳಿಕೆ ನೀಡಿದ್ದರು. ‘ಜಗತ್ತಿನಲ್ಲಿ ಮಾನವೀಯ ಬಿಕ್ಕಟ್ಟು ಎದುರಾದಾಗಲೆಲ್ಲ ಭಾರತವು ಪರಿಹಾರ ಒದಗಿಸಿದೆ’ ಎಂದು ಮೋದಿ ಹೇಳಿದ್ದರು. ರಷ್ಯಾ-ಉಕ್ರೇನ್ ಸಂಘರ್ಷದಿಂದ ಕಪ್ಪು ಸಮುದ್ರ ಪ್ರದೇಶದಲ್ಲಿ ಉತ್ಪಾದನೆ ಮತ್ತು ಸರಕು ಸಾಗಣೆ ಸರಪಳಿಗೆ ಧಕ್ಕೆಯೊದಗಿದೆ. ವಿಶ್ವದ ಒಟ್ಟಾರೆ ಗೋಧಿ ವಹಿವಾಟಿನ ಕಾಲುಭಾಗದಷ್ಟು ವಹಿವಾಟು ಇಲ್ಲಿಯೇ ನಡೆಯುತ್ತಿತ್ತು. ಸಂಘರ್ಷದಿಂದ ಉಂಟಾಗಿರುವ ಆಹಾರ ಬಿಕ್ಕಟ್ಟು ಶಮನಗೊಳಿಸಲು ಭಾರತವು ಯತ್ನಿಸುತ್ತಿದೆ.

ವಿಶ್ವದ ಅತಿದೊಡ್ಡದ ಗೋಧಿ ಖರೀದಿದಾರ ದೇಶ ಈಜಿಪ್ಟ್ ಇತ್ತೀಚೆಗಷ್ಟೇ ಭಾರತದಿಂದ ಗೋಧಿ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಿತ್ತು. ‘ಭಾರತವು ವರ್ಷಕ್ಕೆ 1.5 ಕೋಟಿ ಟನ್​ಗಳಷ್ಟು ಗೋಧಿ ರಫ್ತು ಮಾಡುವ ಮೂಲಕ ವಿಶ್ವದ ಪ್ರಮುಖ ಗೋಧಿ ರಫ್ತುದಾರ ದೇಶವಾಗಿ ಬೆಳೆಯಲು ಭಾರತವು ಇಚ್ಛಿಸುತ್ತದೆ’ ಎಂದು ಕೇಂದ್ರ ಆಹಾರ ಮತ್ತು ವಾಣಿಜ್ಯ ಸಚಿವ ಪೀಯೂಷ್ ಗೋಯೆಲ್ ಹೇಳಿದ್ದರು. ‘ವಿಶ್ವ ವ್ಯಾಪಾರ ಸಂಸ್ಥೆಯು ಕೆಲ ನಿಯಮಗಳನ್ನು ಸಡಿಸಲಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳ ತಂಡವು ಕಾರ್ಯಪ್ರವೃತ್ತವಾಗಿದೆ’ ಎಂದು ಪೀಯೂಷ್ ಗೋಯೆಲ್ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿ ಜಗತ್ತಿನ ಆಹಾರದ ಸಮಸ್ಯೆ ಶಮನಗೊಳಿಸಲು ಭಾರತ ನೆರವಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಭಾರತದ ಆಂತರಿಕ ಸವಾಲುಗಳನ್ನು ಸರ್ಕಾರ ಹೇಗೆ ನಿರ್ವಹಿಸುತ್ತಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಗೋಧಿ ಕಾಳುಕಟ್ಟುವ ಸಮಯವಾದ ಮಾರ್ಚ್ ತಿಂಗಳಲ್ಲಿ ಉಷ್ಣಾಂಶ ಶೇ 50ರಷ್ಟು ಹೆಚ್ಚಾಗಿತ್ತು. ಇದರಿಂದ ಗೋಧಿ ಇಳುವರಿ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗುವ ಅಪಾಯ ಎದುರಾಗಿದೆ.

ಇದನ್ನೂ ಓದಿ: 12 ವರ್ಷಗಳಲ್ಲೇ ಗರಿಷ್ಠ ಬೆಲೆಗೆ ತಲುಪಿದ ಗೋಧಿ, ಹಿಟ್ಟಿನ ದರವೂ ಗಗನಕ್ಕೆ

ಇದನ್ನೂ ಓದಿ: ಇನ್ಮುಂದೆ ಈಜಿಪ್ಟ್​ಗೆ ಗೋಧಿ ರಫ್ತು ಮಾಡಲಿದೆ ಭಾರತ; ಆಹಾರ ಕೊರತೆ ನೀಗಿಸುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ ನಮ್ಮ ರಾಷ್ಟ್ರ

Published On - 2:16 pm, Mon, 9 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ