PAN- Aadhaar Linking: ಈಗಲಾದರೂ 500 ರೂಪಾಯಿ ಪಾವತಿಸಿ ಪ್ಯಾನ್-ಆಧಾರ್ ಜೋಡಿಸಿ, ಇಲ್ಲದಿದ್ದರೆ ಈ ಎಲ್ಲ ಪರಿಣಾಮ ಎದುರಿಸಿ

ಈಗ ಪ್ಯಾನ್- ಆಧಾರ್ ಜೋಡಣೆ ಮಾಡುವುದಾದರೆ 500 ರೂಪಾಯಿ ದಂಡ ಪಾವತಿಸಿ ಜವಾಬ್ದಾರಿ ಪೂರ್ಣಗೊಳಿಸಬಹುದು. ಒಂದು ವೇಳೆ ಆ ಕೆಲಸ ಮಾಡದಿದ್ದಲ್ಲಿ ಪರಿಣಾಮ ಏನಾಗುತ್ತದೆ ಎಂಬ ವಿವರ ಇಲ್ಲಿದೆ.

PAN- Aadhaar Linking: ಈಗಲಾದರೂ 500 ರೂಪಾಯಿ ಪಾವತಿಸಿ ಪ್ಯಾನ್-ಆಧಾರ್ ಜೋಡಿಸಿ, ಇಲ್ಲದಿದ್ದರೆ ಈ ಎಲ್ಲ ಪರಿಣಾಮ ಎದುರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 11, 2022 | 11:49 AM

ಪ್ಯಾನ್-ಆಧಾರ್ ಜೋಡಣೆಗೆ (PAN-Aadhaar Linking) ಕಡೇ ದಿನಾಂಕ ಕಳೆದ ತಿಂಗಳೇ ಮುಗಿದುಹೋಗಿದೆ. ಯಾರು ಇನ್ನೂ ಜೋಡಣೆ ಮಾಡಿಲ್ಲವೋ ಅವರು ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇದರಿಂದ ಪ್ಯಾನ್ ಕಾರ್ಯ ನಿರ್ವಹಣೆಯನ್ನೇ ನಿಲ್ಲಿಸಿಬಿಡುತ್ತದೆ ಅಂತಲ್ಲ ಎಂದು ಈಗಾಗಲೇ ಕೇಂದ್ರೀಯ ನೇರ ತೆರಿಗೆ ಮಂಡಳಿಯ ಸುತ್ತೋಲೆಯಲ್ಲಿ ತಿಳಿಸಿದೆ. ಯಾರು ಪ್ಯಾನ್- ಆಧಾರ್ ಜೋಡಣೆ ಮಾಡಿರುವುದಿಲ್ಲವೋ ಅಂಥವರು 1000 ರೂಪಾಯಿ ತನಕ ದಂಡ ಶುಲ್ಕ ಪಾವತಿಸಿ, ಜೋಡಿಸಲು ಮುಂದಿನ ವರ್ಷದ ತನಕ ಅವಕಾಶ ಇದೆ. ಪ್ಯಾನ್-ಆಧಾರ್ ಜೋಡಣೆಗೆ ಗಡುವನ್ನು ಮಾರ್ಚ್ 31, 2023ರ ತನಕ ವಿಸ್ತರಿಸಲಾಗಿದೆ. ಆದರೆ ಅಂಥವರು ದಂಡ ಶುಲ್ಕ 500 ರೂಪಾಯಿ ಪಾವತಿಸಬೇಕು. ಜೂನ್ 30, 2022ರೊಳಗೆ ಜೋಡಿಸಿದರೆ 500 ರೂಪಾಯಿ ದಂಡ. ಅದರಿಂದ ಆಚೆಗೆ ಆದಲ್ಲಿ 1000 ರೂಪಾಯಿ ದಂಡ ಆಗುತ್ತದೆ.

“ಆದ್ದರಿಂದ, ಸೆಕ್ಷನ್ 234H ಮತ್ತು ಈಗಾಗಲೇ ಇರುವ ಸೆಕ್ಷನ್ 114AAA ಅನ್ನು ಸುಲಲಿತವಾಗಿ ಅನ್ವಯಿಸುವ ನಿಟ್ಟಿನಲ್ಲಿ, 114AAA ಉಪನಿಯಮ (2)ಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲಾಗಿದೆ. ಯಾವುದಾದರೂ ವ್ಯಕ್ತಿಯ ಪರ್ಮನೆಂಟ್ ಅಕೌಂಟ್ ನಂಬರ್ ಉಪ ನಿಯಮ (1)ರ ಅಡಿಯಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಿದಲ್ಲಿ ಕಾಯ್ದೆ ಅನ್ವಯ ಪ್ಯಾನ್ ಸಂಖ್ಯೆ ನಮೂದಿಸಬೇಕು ಅಥವಾ ಒದಗಿಸಬೇಕು ಎಂದು ಎಲ್ಲೆಲ್ಲ ಇರುತ್ತದೋ ಅಲ್ಲೆಲ್ಲ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿಲ್ಲ ಮತ್ತು ಅದಕ್ಕೆ ಕಾಯ್ದೆ ಅಡಿ ಪರಿಣಾಮ ಎದುರಿಸಬೇಕಾಗುತ್ತದೆ. ಇದು ಏಪ್ರಿಲ್ 1, 2023ರಿಂದ ಆರಂಭವಾಗುತ್ತದೆ ಮತ್ತು 2022ರ ಏಪ್ರಿಲ್ 1ರಿಂದ ಆರಂಭವಾಗಿ ಮಾರ್ಚ್ 31, 2023ಕ್ಕೆ ಕೊನೆ ಆಗುತ್ತದೆ. ಆದರೆ ಈ ಅವಧಿಗೆ ಉಪ-ನಿಯಮದ ನಕಾರಾತ್ಮಕ ಪರಿಣಾಮ ಆಗಲ್ಲ. ಮೇಲ್ಕಂಡ ಉಪ ನಿಯಮ ಅಥವಾ ನಿರ್ದಿಷ್ಟ ಪ್ಯಾರಾಗಳಾದ 4 ಮತ್ತು 4.1ರಲ್ಲಿ ಉದಾಹರಿಸಿದಂತೆ ಪರಿಣಾಮ ಇರಲ್ಲ. ಆದರೆ ತೆರಿಗೆ ಪಾವತಿದಾರರು ನಿಯಮ 114 ಉಪ ನಿಯಮ (5A) ಅಡಿಯಲ್ಲಿ ಶುಲ್ಕ ಪಾವತಿ ಮಾಡಬೇಕು,” ಎಂದು ಈ ವರ್ಷದ ಮಾರ್ಚ್ 30ರಂದು ಸಿಬಿಡಿಟಿ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಸುತ್ತೋಲೆಯ ಪ್ರಕಾರ, ಒಂದು ವೇಳೆ ವಿಸ್ತರಣೆಯಾದ ಅಧಿಸೂಚನೆ ಮಾರ್ಚ್ 31, 2023ರ ಹೊತ್ತಿಗೂ ಆಧಾರ್ ಸಂಖ್ಯೆ ಮಾಹಿತಿ ನೀಡುವುದಕ್ಕೆ ವಿಫಲವಾದಲ್ಲಿ ಕಾಯ್ದೆಯ ನಿಯಮಾವಳಿ ಪ್ರಕಾರ, ಅಂಥ ವ್ಯಕ್ತಿಗೆ ವಿತರಣೆ ಆಗಿದ್ದ ಪ್ಯಾನ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಪ್ಯಾನ್​ ಸಂಖ್ಯೆ ಹೀಗೆ ಕಾರ್ಯ ನಿರ್ವಹಣೆ ನಿಲ್ಲಿಸಿದಲ್ಲಿ ತೆರಿಗೆ ರಿಟರ್ನ್ ಫೈಲ್ ಮಾಡುವುದಕ್ಕೆ ಸಾಧ್ಯವಿಲ್ಲ. ಅಷ್ಟೇ ಇಲ್ಲ ಬಾಕಿ ರಿಟರ್ನ್ಸ್ ಮತ್ತು ರೀಫಂಡ್ಸ್ ಪ್ರೊಸೆಸ್ ಆಗಲ್ಲ. ತೆರಿಗೆ ಕಡಿತ ಹೆಚ್ಚಿನ ದರದಲ್ಲಿ ಆಗುತ್ತದೆ. ಇನ್ನೂ ಮುಂದುವರಿದು ಬ್ಯಾಂಕ್​ಗಳು, ಹಣಕಾಸು ಪೋರ್ಟಲ್​ಗಳು ಇವುಗಳಲ್ಲೂ ಕಷ್ಟಗಳು ಎದುರಾಗುತ್ತವೆ. ಎಲ್ಲ ಬಗೆಯ ಹಣಕಾಸು ವಹಿವಾಟಿಗೂ ಕೆವೈಸಿಗೆ ಪ್ಯಾನ್ ಬಹಳ ಮುಖ್ಯವಾದದ್ದು. ಆದ್ದರಿಂದ ಪ್ಯಾನ್- ಆಧಾರ್ ಜೋಡಣೆ ಬಹಳ ಮುಖ್ಯವಾದ ಕಾರ್ಯ.

ಇದನ್ನೂ ಓದಿ: PAN card fraud: ನಿಮ್ಮ ಪ್ಯಾನ್​ ಕಾರ್ಡ್ ಸಂಖ್ಯೆ ಬಳಸಿ ಬೇರೆಯವರು ಸಾಲ ತೆಗೆದುಕೊಂಡಿದ್ದಾರಾ? ಇದನ್ನು ತಿಳಿಯುವುದು ಹೀಗೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ