PAN card fraud: ನಿಮ್ಮ ಪ್ಯಾನ್​ ಕಾರ್ಡ್ ಸಂಖ್ಯೆ ಬಳಸಿ ಬೇರೆಯವರು ಸಾಲ ತೆಗೆದುಕೊಂಡಿದ್ದಾರಾ? ಇದನ್ನು ತಿಳಿಯುವುದು ಹೀಗೆ

ಪ್ಯಾನ್​ ಕಾರ್ಡ್ ವಂಚನೆಯಿಂದ ರಕ್ಷಣೆ ಪಡೆಯುವುದು ಹೇಗೆ? ವಂಚನೆಯು ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಸಹ ಇಲ್ಲಿದೆ.

PAN card fraud: ನಿಮ್ಮ ಪ್ಯಾನ್​ ಕಾರ್ಡ್ ಸಂಖ್ಯೆ ಬಳಸಿ ಬೇರೆಯವರು ಸಾಲ ತೆಗೆದುಕೊಂಡಿದ್ದಾರಾ? ಇದನ್ನು ತಿಳಿಯುವುದು ಹೀಗೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 23, 2022 | 1:02 PM

ಇಂಡಿಯಾಬುಲ್ಸ್ ಎಂಬ ಹಣಕಾಸು ಸಾಲ ಒದಗಿಸುವ ಕಂಪೆನಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಅದಕ್ಕೆ ಕಾರಣವಾಗಿದ್ದು ಫಿನ್​ಟೆಕ್ ಪ್ಲಾಟ್​ಫಾರ್ಮ್ ಧನಿ ಸರ್ವೀಸಸ್​ಗೆ ಸಂಬಂಧಿಸಿದಂತೆ ಬುಗಿಲೆದ್ದ ವಿವಾದ. ಎಷ್ಟೋ ಪ್ರಕರಣಗಳಲ್ಲಿ ಏನಾಗಿದೆ ಅಂದರೆ, ಪ್ಯಾನ್​ ಕಾರ್ಡ್​ದಾರರು ಯಾರೋ. ಆದರೆ ಅವರ ಅನುಮತಿ ಸಹ ಕೇಳದೆ ಪ್ಯಾನ್​ ಕಾರ್ಡ್ (PAN Card)​ ಸಂಖ್ಯೆಯನ್ನು ದುರುಪಯೋಗ ಮಾಡಿಕೊಂಡು, ಸಾಲ ಪಡೆಯಲಾಗಿದೆ. ಅಂಥ ಬ್ಯಾಡ್​ ಲೋನ್​ಗಳನ್ನು ಧನಿ ಆ್ಯಪ್​ನಿಂದ ವಿತರಣೆ ಮಾಡಿದ್ದು, ವಂಚಕರು ಆ ಮೊತ್ತವನ್ನು ಹಿಂತಿರುಗಿಸಿಲ್ಲ. ಆದ್ದರಿಂದ ಈ ಪ್ಯಾನ್ ಕಾರ್ಡ್​ ವಂಚನೆಯಿಂದ ಸಂತ್ರಸ್ತರ ಸಿಬಿಲ್ (CIBIL) ಸ್ಕೋರ್​ ಮೇಲೆ ಭಾರೀ ಪರಿಣಾಮ ಬೀರಿದೆ. ಸೈಬರ್ ಅಪರಾಧಿಗಳು ಈ ಪ್ಯಾನ್​ ಕಾರ್ಡ್​ ವಂಚನೆಯನ್ನು ಹೇಗೆ ಮಾಡಿದ್ದಾರೆ ಎಂಬುದನ್ನು ವಿವರಿಸಲಾಗಿದೆ.

ಧನಿ ಆ್ಯಪ್ ಮತ್ತು ಇತರ ಫಿನ್​ಟೆಕ್​ ಪ್ಲಾಟ್​ಫಾರ್ಮ್​ ಸಣ್ಣ ಪ್ರಮಾಣದ ಸಾಲವನ್ನು ಕೇವಲ ಪ್ಯಾನ್​ ಕಾರ್ಡ್ ಮತ್ತು ಮೊಬೈಲ್​ ಸಂಖ್ಯೆಯನ್ನು ಪಡೆದುಕೊಂಡು ವಿತರಣೆ ಮಾಡುತ್ತವೆ. ಸಾಮಾನ್ಯವಾಗಿ ಬ್ಯಾಂಕ್​ ಖಾತೆಗೆ ಮೊಬೈಲ್​ ಸಂಖ್ಯೆ ಜೋಡಣೆ ಆಗಿರುತ್ತದೆ. ಬೇರೆ ಬ್ಯಾಂಕ್​ ಖಾತೆಗಳಿಗೆ ಹಣ ವರ್ಗಾವಣೆ ಆಗುವುದು ಇತರ ವ್ಯಕ್ತಿಯ ಪ್ಯಾನ್ ಕಾರ್ಡ್​ನಿಂದಲೇ. ಆದ್ದರಿಂದ ಶೀಘ್ರವಾಗಿ ಸಣ್ಣ ಪ್ರಮಾಣದ ಸಾಲ ವಿತರಣೆ ಹೆಸರಿನಲ್ಲಿ ಫಿನ್​ಟೆಕ್​ ಪ್ಲಾಟ್​ಫಾರ್ಮ್​ ಒಂದು ಲೋಪವನ್ನು ಹಾಗೇ ಬಿಟ್ಟಂತಾಗಿದ್ದು, ಅದನ್ನು ಆನ್​ಲೈನ್​ ವಂಚಕರು ಬಳಸಿಕೊಳ್ಳುತ್ತಿದ್ದಾರೆ.

ಸೈಬರ್ ಅಪರಾಧಿಗಳಿಂದ ಇಂತಹ ಪ್ಯಾನ್ ಕಾರ್ಡ್ ವಂಚನೆಯಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ವಿಶ್ಲೇಷಕರು ಹೀಗೆ ಹೇಳುತ್ತಾರೆ, “ಮೊದಲು ಮತ್ತು ಮುಖ್ಯವಾಗಿ ಒಬ್ಬರ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಅಪರಿಚಿತ ವ್ಯಕ್ತಿಗಳಿಗೆ ಅಥವಾ ಯಾವುದೇ ಪರಿಚಿತ ವ್ಯಕ್ತಿಗೆ ಹಂಚಿಕೊಳ್ಳಬಾರದು. ಏಕೆಂದರೆ ಈ ದಾಖಲೆಗಳು ಹೆಚ್ಚು ಗೋಪ್ಯವಾಗಿರುತ್ತವೆ. ಇದು ಈ ದಾಖಲೆಗಳನ್ನು ದುರುಪಯೋಗ ಮಾಡಿಕೊಳ್ಳುವ ಸ್ಥಳಗಳಲ್ಲಿ ಹಂಚಿಕೊಳ್ಳುವಾಗ ಜಾಗರೂಕರಾಗಿರಬೇಕು. ಆದ್ದರಿಂದ ಒಬ್ಬರ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ನಕಲು ಪ್ರತಿಯನ್ನು ಹಂಚಿಕೊಳ್ಳುವ ಉದ್ದೇಶವನ್ನು ಬರೆಯಬೇಕು. ಅದರ ಕೆಲವು ಭಾಗವು ಚಿತ್ರದ ರೀತಿಯಲ್ಲಿ ಇರಬೇಕು. ಇದು ಅಂತಹ ವಂಚನೆ ದುರ್ಬಳಕೆಯ ಯಾವುದೇ ಅವಕಾಶಗಳನ್ನು ತಪ್ಪಿಸುತ್ತದೆ.”

ಅಲ್ಲದೆ, ಪ್ಯಾನ್ ಕಾರ್ಡ್ ಹೊಂದಿರುವವರು ಕಾಲಕಾಲಕ್ಕೆ ಸಾಲದ ವಿವರಗಳನ್ನು ಮತ್ತು ಸಿಬಿಲ್ (CIBIL) ಸ್ಕೋರ್ ಅನ್ನು ಪರಿಶೀಲಿಸುತ್ತಿರಬೇಕು ಎಂದು ಸಲಹೆ ನೀಡುತ್ತಾರೆ. ಈ ದಿನಗಳಲ್ಲಿ ಸಿಬಿಲ್ ಸ್ಕೋರ್ ಮತ್ತು ಸಾಲದ ವಿವರಗಳನ್ನು ಆನ್‌ಲೈನ್‌ನಲ್ಲಿ CIBIL, Equifax, Experian ಅಥವಾ CRIF ಹೈ ಮಾರ್ಕ್‌ನಂತಹ ಯಾವುದೇ ಕ್ರೆಡಿಟ್ ಬ್ಯೂರೋಗಳ ಸೇವೆಗಳಲ್ಲಿ ಲಾಗ್ ಇನ್ ಮಾಡುವ ಮೂಲಕ ಪರಿಶೀಲಿಸಬಹುದು ಎಂದು ಸೇರಿಸುತ್ತಾರೆ. ಪೇಟಿಎಂ ಮತ್ತು ಪಾಲಿಸಿಬಜಾರ್ ಅಪ್ಲಿಕೇಷನ್‌ಗಳಂತಹ ಫಿನ್‌ಟೆಕ್ ಸಂಸ್ಥೆಗಳಲ್ಲಿ ಲಾಗ್ ಇನ್ ಮಾಡುವ ಮೂಲಕ ಸಾಲದ ವಿವರಗಳನ್ನು ಪರಿಶೀಲಿಸಬಹುದು. ಈ ಫಿನ್‌ಟೆಕ್ ಅಪ್ಲಿಕೇಷನ್‌ಗಳು ಬಳಕೆದಾರರಿಗೆ ಸಿಬಿಲ್ ಸ್ಕೋರ್ ಅನ್ನು ಸಾಲದ ವಿವರಗಳೊಂದಿಗೆ ತಕ್ಷಣವೇ ನೀಡುತ್ತವೆ.

ಇದನ್ನೂ ಓದಿ: PAN Card: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದು; ವಿವರ ಇಲ್ಲಿದೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್