PAN Card: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದು; ವಿವರ ಇಲ್ಲಿದೆ

PAN | ಕೇವಲ ಹತ್ತೇ ನಿಮಿಷದಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದು. ಆಧಾರ್ ಕಾರ್ಡ್ ಮೂಲಕ ಉಚಿತವಾಗಿ ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.

PAN Card: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದು; ವಿವರ ಇಲ್ಲಿದೆ
ಪ್ಯಾನ್ ಕಾರ್ಡ್
Follow us
| Edited By: Sushma Chakre

Updated on: Sep 13, 2021 | 12:45 PM

ಭಾರತದ ಪ್ರಜೆಗಳಿಗೆ ಆಧಾರ್ ಕಾರ್ಡ್ (Aadhaar Card) ಹಾಗೂ ಪ್ಯಾನ್ ಕಾರ್ಡ್ (PAN Card) ಅತಿ ಮುಖ್ಯವಾದ ದಾಖಲೆ. 10 ಡಿಜಿಟ್​ನಲ್ಲಿರುವ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಈ ಪ್ಯಾನ್ ಕಾರ್ಡ್ ಮಾಡಿಕೊಡಲು ಅನೇಕ ಕಡೆ ಹಣ ತೆರಬೇಕಾಗುತ್ತದೆ ಹಾಗೂ ಕಾಯಬೇಕಾಗುತ್ತದೆ. ಆದರೆ, ಕೇವಲ ಹತ್ತೇ ನಿಮಿಷದಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದು. ಆಧಾರ್ ಕಾರ್ಡ್ ಮೂಲಕ ಉಚಿತವಾಗಿ ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.

ಪ್ಯಾನ್ ಕಾರ್ಡ್ ತೆರಿಗೆ ಪಾವತಿಯ ಎಲ್ಲ ಮಾಹಿತಿಗಳನ್ನು ಒಳಗೊಂಡ ಅತಿ ಮುಖ್ಯವಾದ ದಾಖಲೆಯಾಗಿದೆ. ಭಾರತದಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಗಳಾಗಿವೆ. ಬ್ಯಾಂಕಿಂಗ್ ಅಥವಾ ತೆರಿಗೆ ಸಲ್ಲಿಸುವಂತಹ ಸೇವೆಗಳಿಗೆ ಪ್ಯಾನ್ ಕಾರ್ಡ್ ಹೊಂದುವುದು ಬಹಳ ಮುಖ್ಯವಾಗಿರುತ್ತದೆ. ದೊಡ್ಡ ಮೊತ್ತದ ಹಣ ವರ್ಗಾವಣೆ ಅಥವಾ ಆಭರಣ, ಕಾರುಗಳಂತಹ ದುಬಾರಿ ವಸ್ತುಗಳ ಖರೀದಿ ವೇಳೆಯಲ್ಲೂ ಪ್ಯಾನ್ ಕಾರ್ಡ್ ಅಗತ್ಯವಾಗಿದೆ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಜೊತೆ ಲಿಂಕ್ ಆಗಿದ್ದರೆ ಪ್ಯಾನ್ ಕಾರ್ಡ್ ಅನ್ನು 10 ನಿಮಿಷಗಳಲ್ಲಿ ಪಡೆಯಬಹುದು. ಇದಕ್ಕೆ ಯಾವುದೇ ಹಣ ತೆರಬೇಕಾಗಿಲ್ಲ.

ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗದಿದ್ದರೆ ಇ-ಪ್ಯಾನ್ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಹೊಸ ಪ್ಯಾನ್ ಕಾರ್ಡ್ ಅನ್ನು ತಕ್ಷಣವೇ ಪಡೆಯಲು ಮತ್ತು ಹಳೆಯ ಪ್ಯಾನ್ ಕಾರ್ಡ್ ಅನ್ನು ಇ-ಪ್ಯಾನ್ ಕಾರ್ಡ್ ರೂಪದಲ್ಲಿ ಪಡೆಯುವುದು ಹೇಗೆಂಬ ವಿವರ ಇಲ್ಲಿದೆ.

* ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್​ಸೈಟ್​ಗೆ ಭೇಟಿ ನೀಡಿ.

*  ಅಲ್ಲಿ ಇನ್​ಸ್ಟಂಟ್ ಇ-ಪ್ಯಾನ್ ಮೇಲೆ ಕ್ಲಿಕ್ ಮಾಡಿ * ‘ಹೊಸ ಇ-ಪ್ಯಾನ್ ಪಡೆಯಿರಿ (get new PAN)’ ಎಂಬಲ್ಲಿ ಕ್ಲಿಕ್ ಮಾಡಿ * ಅಲ್ಲಿ ನಿಮ್ಮ ಆಧಾರ್ ಮಾಹಿತಿಯನ್ನು ತುಂಬಿರಿ * ಆಧಾರ್ ಕಾರ್ಡ್ ಬದಲು ಪ್ಯಾನ್ ಕಾರ್ಡ್ ನಂಬರ್ ಅನ್ನು ಬೇಕಾದರೂ ತುಂಬಬಹುದು * ಆಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಅಲ್ಲಿ ಭರ್ತಿ ಮಾಡಿ * ಆಗ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ incometaxindiaefiling.gov.inಗೆ ಹೋಗಿ. * ಅಲ್ಲಿ ಆಧಾರ್ ವಿಭಾಗದ ಮೂಲಕ ಇನ್​ಸ್ಟಂಟ್ ಪ್ಯಾನ್ ಕಾರ್ಡ್​ ವಿಭಾಗಕ್ಕೆ ಹೋಗಿ.

* ಅಲ್ಲಿ ಹೊಸ ಪುಟದಲ್ಲಿ ಆಧಾರ್ ಮಾಹಿತಿಯನ್ನು ತುಂಬಿದರೆ ಪ್ಯಾನ್ ಕಾರ್ಡ್ ಮಾಹಿತಿ ಡಿಸ್​ಪ್ಲೇ ಆಗುತ್ತದೆ.

* ಅಲ್ಲಿ ಕಾಣುವ ಡೌನ್​ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಇ-ಪ್ಯಾನ್ ಕಾರ್ಡ್ ಸಿಗುತ್ತದೆ.

ಇದನ್ನೂ ಓದಿ: Aadhaar Link: ಆಧಾರ್ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ ಅಡಚಣೆಯಿಲ್ಲ; ಯುಐಡಿಎಐ ಸ್ಪಷ್ಟನೆ

PAN Card- Aadhaar Linking: ಪ್ಯಾನ್ ಕಾರ್ಡ್- ಆಧಾರ್ ಜೋಡಣೆಗೆ ಸೆ. 30ರ ತನಕ ಗಡುವು ವಿಸ್ತರಿಸಿದ ಕೇಂದ್ರ

(PAN Card Get PAN instantly Through Aadhaar in 10 minutes free of cost Here is how you can apply for E-PAN)

ತಾಜಾ ಸುದ್ದಿ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ