AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Link: ಆಧಾರ್ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ ಅಡಚಣೆಯಿಲ್ಲ; ಯುಐಡಿಎಐ ಸ್ಪಷ್ಟನೆ

ಆಧಾರ್ ಕಾರ್ಡ್ ಜೊತೆ ಇಪಿಎಫ್​ ಮತ್ತು ಪ್ಯಾನ್ ಲಿಂಕ್ ಮಾಡಲು ಇಂದು ಕೊನೆಯ ದಿನ. ಆಧಾರ್- ಪ್ಯಾನ್ ಅಥವಾ ಇಪಿಎಫ್​ಒ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ ಅಡಚಣೆಗಳಿಲ್ಲ ಎಂದು ಯುಐಡಿಎಐ ಹೇಳಿದೆ.

Aadhaar Link: ಆಧಾರ್ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ ಅಡಚಣೆಯಿಲ್ಲ; ಯುಐಡಿಎಐ ಸ್ಪಷ್ಟನೆ
Aadhaar card
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 31, 2021 | 5:34 PM

ನವದೆಹಲಿ: ಆಧಾರ್ (Aadhaar Card)- ಪ್ಯಾನ್ (PAN Card) ಅಥವಾ ಇಪಿಎಫ್​ಒ (EPFO) ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ ಅಡಚಣೆಗಳಿಲ್ಲ ಎಂದು ಯುಐಡಿಎಐ (UIDAI) ಹೇಳಿದೆ. ಆಧಾರ್ ಸೇವೆಗಳು ಸ್ಥಿರವಾಗಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಮಾಣೀಕರಣ ಆಧಾರಿತ ಸೌಲಭ್ಯವಾದ ಪ್ಯಾನ್ ಅಥವಾ ಇಪಿಎಫ್​ಒ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವ ಅಡಚಣೆಯೂ ಇಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತಿಳಿಸಿದೆ.

ಕಳೆದೊಂದು ವಾರದಿಂದ ಹಂತಹಂತವಾಗಿ ಅಗತ್ಯ ಭದ್ರತೆಗೆ ಸಂಬಂಧಿಸಿದ ನವೀಕರಣಗಳನ್ನು ಮಾಡುತ್ತಿರುವುದರಿಂದ ಕೆಲವು ನೋಂದಣಿ ಅಥವಾ ನವೀಕರಣ ಕೇಂದ್ರಗಳಲ್ಲಿ ನೋಂದಣಿ ಮತ್ತು ಮೊಬೈಲ್ ನವೀಕರಣ ಸೇವಾ ಸೌಲಭ್ಯದಲ್ಲಿ ಮಾತ್ರ ಕೆಲವು ಮಧ್ಯಂತರ ಸೇವಾ ಅಡಚಣೆಗಳು ವರದಿಯಾಗಿತ್ತು. ಈಗ ಇದು ಕೂಡ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದೆ ಎಂದು ಯುಐಡಿಎಐ ಮಾಹಿತಿ ನೀಡಿದೆ.

2021ರ ಆಗಸ್ಟ್ 20ರಂದು ಉನ್ನತೀಕರಣ ಪ್ರಕ್ರಿಯೆಯ ಆರಂಭದಿಂದ ಕಳೆದ 9 ದಿನಗಳಲ್ಲಿ 51 ಲಕ್ಷಕ್ಕೂ ಅಧಿಕ ನಿವಾಸಿಗಳು (ದಿನಕ್ಕೆ ಸರಾಸರಿ 5.68 ಲಕ್ಷ ನಿವಾಸಿಗಳು) ನೋಂದಾಯಿಸಿಕೊಂಡಿದ್ದಾರೆ. ಪ್ಯಾನ್ ಅಥವಾ ಇಪಿಎಫ್​ಒ ಜೊತೆಗೆ ಆಧಾರ್ ಲಿಂಕ್ ಮಾಡುವಲ್ಲಿ ಯುಐಡಿಎಐ ಸಿಸ್ಟಂ ಸ್ಥಗಿತವಾಗಿದೆ ಎಂಬ ವದಂತಿ ಸುಳ್ಳು ಎಂದು ಯುಐಡಿಎಐ ಖಚಿತಪಡಿಸಿದೆ.

ಆಧಾರ್ ಕಾರ್ಡ್ ಜೊತೆ ಇಪಿಎಫ್​ ಮತ್ತು ಪ್ಯಾನ್ ಲಿಂಕ್ ಮಾಡಲು ಇಂದು ಕೊನೆಯ ದಿನ. ಲಿಂಕ್ ಮಾಡದಿದ್ದರೆ ಪಿಎಫ್​ ಖಾತೆಗೆ ನೀವು ಲಾಗಿನ್ ಆಗಲು ಕಷ್ಟವಾಗುತ್ತದೆ. ನಿಗದಿತ ಅವಧಿಯೊಳಗೆ ಯಾರಾದರೂ ತನ್ನ ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡದಿದ್ದರೆ, ಆತ ಭಾರೀ ದಂಡವನ್ನು ಪಾವತಿಸಬೇಕಾಗಬಹುದು. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೇ ಹೋದರೆ, ಪ್ಯಾನ್ ಕಾರ್ಡ್ ಬಳಸಲು ಸಾಧ್ಯವಾಗುವುದಿಲ್ಲ. ಯಾಕಂದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಬ್ಯಾಂಕ್ ಖಾತೆ ತೆರೆಯುವಾಗ, ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆದುಕೊಳ್ಳುವಾಗ ಇದರಿಂದ ಸಮಸ್ಯೆಗಳು ಎದುರಾಗುತ್ತವೆ.

ಇದನ್ನೂ ಓದಿ: LIC Aadhar Shila Plan: ಎಲ್​ಐಸಿ ಆಧಾರ್ ಶಿಲಾ ಯೋಜನೆಗೆ ದಿನಕ್ಕೆ ರೂ. 29ರಂತೆ ಉಳಿಸಿ, 4 ಲಕ್ಷ ರೂ. ಪಡೆಯಿರಿ

PF- Aadhaar Seeding: ಸೆಪ್ಟೆಂಬರ್​ 1ರಿಂದ ಪಿಎಫ್​- ಆಧಾರ್ ಜೋಡಣೆ ಕಡ್ಡಾಯ; ಆನ್​ಲೈನ್ ಪ್ರಕ್ರಿಯೆ ಹೇಗೆ?

(UIDAI said all the Services are Stable to Aaadhaar Link with EPFO and PAN)

30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ